'ಸೆಕ್ಸ್ ರಾಕೆಟ್' ಹತ್ತಿದ್ದ ನಟಿ ಈಗ ಪೊಲೀಸರ ಅತಿಥಿ
ಮುಂಬೈ, ಆಗಸ್ಟ್ 06: ಕ್ರೈಂ ಶೋ ಕಾರ್ಯಕ್ರಮವೊಂದರ ನಿರೂಪಕಿ ಕಮ್ ನಟಿ ಮುಂಬೈ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಿರುತೆರೆ ನಟಿಯನ್ನು ಬುಧವಾರ ರಾತ್ರಿ ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸಾವ್ ಧಾನ್ ಇಂಡಿಯಾ ಎಂಬ ಕ್ರೈಂ ಶೋ ನಡೆಸಿಕೊಡುತ್ತಿದ್ದ ನಟಿಯನ್ನು ಅಂಧೇರಿಯ ಹೋಟೆಲ್ ವೊಂದರಲ್ಲಿ ಬಂಧಿಸಲಾಗಿದೆ.
ಬಂಧನ ಸುಲಭವಾಗಿರಲಿಲ್ಲ: ಅಂಧೇರಿಯ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಎಲ್ಲರನ್ನು ರೆಡ್ ಹ್ಯಾಂಡ್ ಹಿಡಿಯಲು ಬಲೆ ಬೀಸಿದರು.

ಒಬ್ಬ ಮಾಹಿತಿದಾರನನ್ನೇ ಗ್ರಾಹಕನಂತೆ ಬಿಂಬಿಸಿ ಪಿಂಪ್ ಬಳಿಗೆ ಕಳಿಸಲಾಯಿತು. 27 ವರ್ಷ ವಯಸ್ಸಿನ ಏಜೆಂಟ್ ರಾಜ್ ಸಿನ್ಹಾ ಹೊಸ ಗ್ರಾಹಕನಿಗೆ ಒಂದಷ್ಟು ಹುಡುಗಿಯರ ಫೋಟೋ ತೋರಿಸಿದ್ದಾನೆ. ನಂತರ 15,000 ರು ಗೆ ಒಂದು ಡೀಲ್ ಮಾಡಿಕೊಂಡಿದ್ದಾರೆ.
ಪೊಲೀಸ್ ಮಾಹಿತಿದಾರ ಆಯ್ಕೆಮಾಡಿದ್ದ ಮಹಿಳೆಯೇ ಟಿವಿ ನಟಿಯಾಗಿದ್ದಳು. ನಂತರ ಪೊಲೀಸ್ ದಾಳಿ ನಡೆಸಿ ನಟಿ ಸೇರಿದಂತೆ ಪಿಂಪ್ ಸಿನ್ಹಾರನ್ನು ಬಂಧಿಸಲಾಯಿತು. ಅಪಾರ ಪ್ರಮಾಣದ ಹಣ ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಯಿತು. ನಟಿ ಹಾಗೂ ಇನ್ನಿಬ್ಬರು ಹುಡುಗಿಯರನ್ನು ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ವಿಲಾಸ್ ಅವರು ಹೇಳಿದ್ದಾರೆ.











Click it and Unblock the Notifications