ಮುಂಬೈನಿಂದ ಹೊರಟಿದ್ದ ಹೆಲಿಕಾಪ್ಟರ್ ಸಮುದ್ರ ಮಧ್ಯೆ ನಾಪತ್ತೆ

ಮುಂಬೈ, ಜನವರಿ 13: ನಗರದ ಜುಹುವಿನಿಂದ ಹೊರಟಿದ್ದ ಹೆಲಿಕಾಪ್ಟರ್ ಸಮುದ್ರ ಮಧ್ಯೆ ನಾಪತ್ತೆಯಾಗಿದೆ. ಮುಂಬೈನಿಂದ 30 ನಾಟಿಕಲ್ ಮೈಲ್ ದೂರದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ನಿಂದ ಸಂಪರ್ಕ ಕಳೆದುಕೊಂಡು ಹೆಲಿಕಾಪ್ಟರ್ ನಾಪತ್ತೆಯಾಗಿದೆ.

ಹೆಲಿಕಾಪ್ಟರ್ ನಲ್ಲಿ 7 ಜನರು ಪ್ರಯಾಣಿಕರಿದ್ದರು. ಇವರಲ್ಲಿ 'ಓಎನ್ ಜಿಸಿ' ಉದ್ಯೋಗಿಗಳೂ ಸೇರಿದ್ದರು ಎಂದು ತಿಳಿದು ಬಂದಿದೆ.

ಜುಹು ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಬೆಳಿಗ್ಗೆ 10 ಗಂಟೆ 20 ನಿಮಿಷಕ್ಕೆ ಟೇಕ್ ಆಫ್ ಆಗಿತ್ತು. ಅಂದುಕೊಂಡಂತೆ ನಡೆದಿದ್ದರೆ 'ಒಎನ್ ಜಿಸಿ'ಯ ನಾರ್ತ್ ಫೀಲ್ಡ್ ನಲ್ಲಿ ಹೆಲಿಕಾಪ್ಟರ್ ಬೆಳಿಗ್ಗೆ 10.58ಕ್ಕೆ ಲ್ಯಾಂಡ್ ಆಗಬೇಕಿತ್ತು.

Mumbai: Helicopter with ONGC employees on board goes missing: Report

ಆದರೆ ಹೆಲಿಕಾಪ್ಟರ್ 10.30ರ ನಂತರ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕ ಕಳೆದುಕೊಂಡಿದ್ದು ನಾಪತ್ತೆಯಾಗಿದೆ. ಹೆಲಿಕಾಪ್ಟರ್ ಗಾಗಿ ಭರದಿಂದ ಹುಡುಕಾಟ ನಡೆಸಲಾಗುತ್ತಿದೆ.

ಕಳೆದುಹೋಗಿರುವ ಹೆಲಿಕಾಪ್ಟರ್ ಗಾಗಿ 2 ಐಎಸ್ ವಿ ಪ್ಯಾಟ್ರೋಲ್ ಬೋಟ್ ಗಳು, 3 ಕೋಸ್ಟ್ ಗಾರ್ಡ್ ಘಟಕಗಳು ಹಾಗೂ ಒಂದು ಹೆಲಿಕಾಪ್ಟರ್ ಹುಡುಕಾಟ ನಡೆಸುತ್ತಿವೆ ಎಂದು ನೌಕಾಸೇನೆಯ ವಕ್ತಾರರು ವಿವರ ನೀಡಿದ್ದಾರೆ. ಆದರೆ ಇಲ್ಲಿಯವರೆಗೆ ಹೆಲಿಕಾಪ್ಟರ್ ಪತ್ತೆಯಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+