ಪ್ರಭಾವಿ ಕಾಂಗ್ರೆಸ್ ನಾಯಕ ಬಾಬಾ ಸಿದ್ದಿಕಿ ಮನೆ ಮೇಲೆ 'ಇಡಿ' ದಾಳಿ
ಮುಂಬೈ, ಮೇ 31: ಕಾಂಗ್ರೆಸ್ ಪ್ರಭಾವಿ ಮುಖಂಡ ಬಾಬಾ ಸಿದ್ದಿಕಿ ಮನೆ ಮೇಲೆ ಜಾರಿ ನಿರ್ದೇಶನಾಯದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.
ಬಾಬಾ ಸಿದ್ದಿಕಿ ಹಾಗೂ ರಫೀಕ್ ಮುಕ್ಬಾಲ್ ಖುರೇಷಿಗೆ ಸೇರಿದ ಮನೆ, ಕಚೇರಿ ಹಾಗೂ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಮುಂಬೈನ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ.

ಕೊಳಗೇರಿ ಪ್ರದೇಶವೊಂದರ ಪುನರ್ವಸತಿ ಯೋಜನೆಯಲ್ಲಿ ಭಾರೀ ಅಕ್ರಮ ಎಸಗಿದ ಆರೋಪ ಇಬ್ಬರ ಮೇಲಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ.

ಬಾಬಾ ಸಿದ್ದಿಕಿ ಪ್ರಭಾವಿ ವ್ಯಕ್ತಿಯಾಗಿದ್ದು ಹಿಂದೊಮ್ಮೆ ಇಫ್ತಾರ್ ಕೂಟ ಆಯೋಜಿಸಿ ಬಾಲಿವುಡ್ ನಟರಾದ ಶಾರೂಕ್ ಖಾನ್ ಹಾಗೂ ಸಲ್ಮಾನ್ ಖಾನ್ ರನ್ನು ಒಂದು ಮಾಡಿದ್ದರು.












Click it and Unblock the Notifications