ಅಪ್ಪ ಬಸ್ ಡ್ರೈವರ್; ಅವಳಿ ಮಕ್ಕಳ ಡಬಲ್ ಧಮಾಕಾ

ಮುಂಬೈ, ಜೂನ್ 21: ದೇಶದ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ ವಿವಿಧ ಕೋರ್ಸುಗಳ ಪ್ರವೇಶಕ್ಕೆ ನಡೆಯುವ ಜೆಇಇ (ಜಂಟಿ ಪ್ರವೇಶ ಪರೀಕ್ಷೆ) ಮುಖ್ಯ ಪರೀಕ್ಷೆಯ (ಐಐಟಿ-ಜೆಇಇ)ಫ‌ಲಿತಾಂಶ ಪ್ರಕಟವಾಗಿದೆ. ಒಟ್ಟು 1,26,997 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 27,151 ಅಭ್ಯರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.

ಈ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ದೇಶದ 16 ಐಐಟಿಗಳು, ರಾಯ್ ಬರೇಲಿಯಲ್ಲಿರುವ ರಾಜೀವ್ ಗಾಂಧಿ ಇನ್ಸ್ ಟಿಟ್ಯೂಟ್ ಆಫ್ ಪೆಟ್ರೋಲಿಯಂ ಟೆಕ್ನಾಲಜಿ ಹಾಗೂ ಧನಬಾದ್‌ನಲ್ಲಿರುವ ಭಾರತೀಯ ಗಣಿ ವಿದ್ಯಾಸಂಸ್ಥೆ (ಐಎಸ್‌ಎಂ)ಯಲ್ಲಿ ಪ್ರವೇಶ ಪಡೆಯಲಿದ್ದಾರೆ.

ಬಡವರ ಮಕ್ಕಳ ಅಗಾಧ ಸಾಧನೆ: ಈಗ ತೇರ್ಗಡೆಯಾಗಿರುವ 27,151 ಅಭ್ಯರ್ಥಿಗಳ ಪೈಕಿ 19,416 ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದ್ದಾರೆ. ಆರು ಸಾವಿರ ಅಭ್ಯರ್ಥಿಗಳು ಅಲ್ಪ ಸಂಖ್ಯಾತರು, 4400 ಪರಿಶಿಷ್ಟ ಜಾತಿಯವರು. 1,250 ಪರಿಶಿಷ್ಟ ಪಂಗಡದವರು. ಚಮ್ಮಾರ, ಬೀದಿ ಬದಿ ವ್ಯಾಪಾರಿ, ಕಿರಾಣಿ ವ್ಯಾಪಾರಿಗಳ ಮಕ್ಕಳು ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇವರ ಪೈಕಿ ಮುಂಬೈನ ಡ್ರೈವರ್ ಒಬ್ಬರ ಅವಳಿ ಮಕ್ಕಳ ಸಾಧನೆಯನ್ನು ನೀವು ತಿಳಿದುಕೊಳ್ಳಲೇಬೇಕು.

ಅಪ್ಪ ಡ್ರೈವರ್; ಅವಳಿ ಮಕ್ಕಳ ಡಬಲ್ ಧಮಾಕಾ (ಓದಿ- Indian Institutes of Technology Joint Entrance Examination)

mumbai-bus-driver-ramashankar-yadav-twins-get-rank-iit-jee

ಅವರಿಬ್ಬರೂ ಅವಳಿ ಮಕ್ಕಳು. ಅವರಪ್ಪ ಒಬ್ಬ ಸಾಮಾನ್ಯ ಬಸ್ ಡ್ರೈವರ್. ಆತನ ಹೆಸರು ರಾಮಶಂಕರ್ ಯಾದವ್. ಅವರಿಗೆ ರಾಮ್ ಯಾದವ್ ಮತ್ತು ಶ್ಯಾಮ್ ಯಾದವ್ ಅಂತ ಇಬ್ಬರು ಮಕ್ಕಳು. ಅಪ್ಪ ಡ್ರೈವರ್ ಆಗಿದ್ದುಕೊಂಡು ತಾವು ಭಿವಂಡಿಯ ಸ್ಲಂನಲ್ಲಿ ವಾಸವಿದ್ದರೂ ಅದರ ಬಗ್ಗೆ ತಲೆಕೆಡಿಸಕೊಳ್ಳದೆ rather ಅದನ್ನು blessing in disguise ಎಂದು ಅರ್ಥೈಸಿಕೊಂಡ ಆ ಸೋದರರಿಬ್ಬರೂ ಓದಿನಲ್ಲಿ ಅಸಾಮಾನ್ಯ ಸಾಧನೆ ಮಾಡಿದ್ದಾರೆ.

ಅಖಿಲ ಭಾರತದ IIT-JEE ಪ್ರವೇಶ ಪರೀಕ್ಷೆಯಲ್ಲಿ ರಾಮ್ 267ನೇ ಸ್ಥಾನದಲ್ಲಿ ತೇರ್ಗಡೆಯಾಗಿದ್ದರೆ ಮತ್ತೊಬ್ಬ ಸೋದರ ಶ್ಯಾಮ್ 1,816 ನೇ ಸ್ಥಾನ ಪಡೆದಿದ್ದಾರೆ. ಆದರೆ ಇವರ ಅಪ್ಪ-ಅಮ್ಮನಿಗೆ ತಮ್ಮ ಮಕ್ಕಳು ಪಾಸಾಗಿದ್ದಾರೆ ಎಂಬುದಷ್ಟೇ ಗೊತ್ತು. ಆದರೆ ಯಾವ ಸ್ಥಾನದಲ್ಲಿ ಪಾಸಾಗಿದ್ದಾರೆ, ಅದರ ಮಹತ್ವ ಏನು, ಮುಂದೆ ಅವರು ಎಂತಹಾ ಓದನ್ನು ಓದಬಹುದು ಎಂಬುದು ತಿಳಯದಷ್ಟು ಮುಗ್ಧರು ಅವರು. (ಕರ್ನಾಟಕದ ಟಾಪ್ 10 ಇಂಜಿನಿಯರಿಂಗ್ ಕಾಲೇಜ್)

ತಮಗೆ ಬರುವ 8,000 ಮಾಸಿಕ ಸಂಬಳದಲ್ಲಿ ನಾಲ್ವರು ಪುತ್ರರು, ಒಬ್ಬ ಪುತ್ರಿ ಮತ್ತು ಪತ್ನಿಯ ಹೊಟ್ಟೆ ತುಂಬಿದರೆ ಸಾಕು ಎಂಬುದಷ್ಟೇ ತಂದೆ ರಾಮಶಂಕರ್ ಯಾದವ್ ಅವರ ಸರಳ ಲೆಕ್ಕಾಚಾರ. ಮಕ್ಕಳು ಇದುವರೆಗೂ ಅತ್ಯುತ್ತಮವಾಗಿ ಓದುತ್ತಾ, ಅಪ್ಪನಿಗೆ ಹೊರೆಯಾಗದೆ ವಿದ್ಯಾರ್ಥಿವೇತನಗಳ ಮುಖಾಂತರ ಶಿಕ್ಷಣ ಪೂರೈಸುತ್ತಾ ಬಂದಿದ್ದಾರೆ. ದುಬಾರಿ IIT-JEE ಗೂ ಅಷ್ಟೇ. ಉಚಿತವಾಗಿ ಕೋಚಿಂಗ್ ಪಡೆಯಲು ಮುಂಬೈನ ಪ್ರತಿಷ್ಠಿತ ಕೋಚಿಂಗ್ ಸೆಂಟರ್ ನಡೆಸುವ ಕಠಿಣ ಪ್ರವೇಶ ಪರೀಕ್ಷೆಯಲ್ಲಿ ಸುಲಲಿತವಾಗಿ ಪಾಸಾಗಿ ಅವರಿಂದ ಸೈ ಅನ್ನಿಸಿಕೊಂಡಿದ್ದರು.

ಆದರೆ ಮುಂದೆ ಇದೀಗ ಯಾವುದೋ ಒಂದು ಐಐಟಿಗೆ ಸೇರ್ಪಡೆಯಾಗಲು ಭಾರಿ ಶುಲ್ಕ ಕಟ್ಟಬೇಕಾಗುತ್ತದೆ. ಅಷ್ಟೊಂದು ದುಡ್ಡು ತಮ್ಮ ಬಳಿಯಿಲ್ಲ. ಆರ್ಥಿಕ ನೆರವಿಗಾಗಿ ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ 18 ವರ್ಷದ ಅವಳಿ ಸೋದರರು.

Particle physics and space ವಿಷಯದಲ್ಲಿ ಅತ್ಯುನ್ನವಾದದ್ದನ್ನು ಸಾಧಿಸುವ ಹಂಬಲ, ಗುರಿ ಈ ಸೋದರರಿಗಿದೆ. ಮಹಾಮಹಿಮ ಸಂಶೋಧಕರ ಜೀವನಚರಿತ್ರೆಗಳನ್ನು ಓದುತ್ತಾ ಮುಂದೆ ತಾವೂ ವಿಜ್ಞಾನಿಗಳಾಗಬೇಕು ಎಂದು ಕನಸು ಕಾಣುತ್ತಿರುವ ಈ ಅವಳಿ ಸೋದರರಿಗೆ ಆಲ್ ದಿ ಬೆಸ್ಟ್ ಹೇಳೋಣ. (ಚಿತ್ರ ಮಾಹಿತಿ: ಮುಂಬೈ ಮಿಡ್ ಡೆ)

ಇಲ್ಲಿ ಮತ್ತೊಬ್ಬ ಪೋರನ ಸಾಧನೆಯ ಬಗ್ಗೆ ಆದ್ಯವಾಗಿ ನಿಮಗೆ ಹೇಳಲೇಬೇಕಿದೆ. ಬಿಹಾರದ ರೋಹ್ತಾಸ್ ಜಿಲ್ಲೆಯ ಧರಂಪುರ ಗ್ರಾಮದ ಶಿವಾನಂದ ತಿವಾರಿ ಎಂಬ 14 ವರ್ಷದ ಬಾಲಕ IIT-JEE ಪ್ರವೇಶ ಪರೀಕ್ಷೆ ಪಾಸು ಮಾಡಿದ ಅತ್ಯಂತ ಕಿರಿಯ ವಿದ್ಯಾರ್ಥಿಯಾಗಿದ್ದಾನೆ.

ಕುತೂಹಲಕಾರಿ ಸಂಗತಿಯೆಂದರೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುವಂತಿಲ್ಲ. ಆದರೆ 14ರ ಪೋರ ಶಿವಾನಂದ ತಿವಾರಿ ಸೀದಾ ಕೋರ್ಟ್ ಮೆಟ್ಟಿಲು ಹತ್ತಿ ವಿಶೇಷ ಅನುಮತಿ ಪಡೆದು, ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾನೆ. ಈತನ ತಂದೆ ಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದಾರೆ.

7ನೇ ವಯಸ್ಸಿಗೆ ಭಗವದ್ಗೀತೆ ಮತ್ತು ಹಿಂದೂ ಧಾರ್ಮಿಕ ಗ್ರಂಥಗಳನ್ನು ಅರಿದುಕುಡಿದ ಶಿವಾನಂದ ತಿವಾರಿ, ಆ ವಯಸ್ಸಿಗೇ ಧಾರ್ಮಿಕ ಪರ್ಯಟನೆ ಮಾಡುತ್ತಾ, ಧರ್ಮ ಪ್ರವಚನಗಳನ್ನು ನೀಡತೊಡಗಿದ್ದ. ಮುಂದೆ ಮಗ ಸನ್ಯಾಸತ್ವ ತೆಗೆದುಕೊಳ್ಳುತ್ತಾನಾ ಎಂದು ಅಪ್ಪ ಕಮಲಕಾಂತ್ ಯೋಚನೆಗೆ ಬಿದ್ದಿರುವಾಗಲೇ ಮಗ IIT- JEE ಪ್ರವೇಶ ಪರೀಕ್ಷೆಯನ್ನು 2587 ಸ್ಥಾನದಲ್ಲಿ (rank) ಪಾಸು ಮಾಡಿದ್ದಾನೆ. ಮುಂದೆ Physics ವಿಷಯದಲ್ಲಿ ಮಹತ್ತರವಾದ ಸಾಧನೆ ಮಾಡುವ ಹಂಬಲ ಹೊಂದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+