ಮುಂಬೈನಲ್ಲಿ ತುಳುನಾಡ ಕನ್ನಡಿಗರಿಗಾಗಿ ಕಬಡ್ಡಿ ಪಂದ್ಯಾವಳಿ

ಮುಂಬೈ, ಸೆಪ್ಟೆಂಬರ್, 29 : ವಾಣಿಜ್ಯ ನಗರದ ತುಳು ಕನ್ನಡಿಗ ಯುವಕರಿಗಾಗಿ ಮುಲುಂಡ್ ಫ್ರೆಂಡ್ಸ್ ಎಂಬ ಸಾಮಾಜಿಕ ಸಂಘಟನೆ 2015ನೇ ವಾರ್ಷಿಕ ಕಬಡ್ಡಿ ಪಂದ್ಯಾವಳಿಯನ್ನು ಅಕ್ಟೋಬರ್ 18ನೇ ಭಾನುವಾರದಂದು ಮುಲುಂಡ್ ಪೂರ್ವದ ಆರ್ ಪಿಎಫ್ ಮೈದಾನದಲ್ಲಿ ಆಯೋಜಿಸಿದೆ.

ಕಬಡ್ಡಿ ಸ್ಪರ್ಧೆ ಅಕ್ಟೋಬರ್ 18ರಂದು ನಗರದ ನಾನಾ ಗಣ್ಯರು ಉದ್ಘಾಟಿಸಲಿದ್ದು, ಸ್ಪರ್ಧೆಯು ಬೆಳಿಗ್ಗೆಯಿಂದ ಸಂಜೆಯವರೆಗೆ ಆರ್ ಪಿಎಫ್ ಮೈದಾನದಲ್ಲಿ ನಡೆಯಲಿದೆ. ನಗರದ ಹಲವಾರು ಸಂಘಟನೆಗಳ ಮುಖಂಡರು, ರಾಜಕೀಯ ನೇತಾರರು ಮತ್ತು ಸಿನಿಮಾ ತಾರೆಯರು ಸ್ಪರ್ಧೆ ವೀಕ್ಷಣೆಗೆ ಆಗಮಿಸಲಿದ್ದಾರೆ ಎಂದು ಮುಲುಂಡ್ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ ತಿಳಿಸಿದ್ದಾರೆ.[ವಿಶ್ವದ ದುಬಾರಿ ನಗರಗಳ ಸಾಲಿನಲ್ಲಿ ಮುಂಬೈ]

Mullund Friends social association have organizes Kabaddi play in Mumbai

ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ವಿಜೇತ ತಂಡಕ್ಕೆ 33,333ರೂ ನಗದು ಬಹುಮಾನ ಮತ್ತು ಫಲಕ, ದ್ವಿತೀಯ ವಿಜೇತ ತಂಡಕ್ಕೆ, 22,222 ರೂ ಬಹುಮಾನ ಹಾಗೂ ಫಲಕ, ತೃತೀಯ ವಿಜೇತ ತಂಡಕ್ಕೆ 11,111 ರೂ ನಗದು ಬಹುಮಾನ ಹಾಗೂ ಫಲಕ ನೀಡಲಾಗುತ್ತದೆ.

ಈ ಮೂರು ಬಹುಮಾನಗಳ ಜೊತೆಗೆ ಉತ್ತಮ ಶಿಸ್ತುಬದ್ಧ ತಂಡಕ್ಕೆ 5,555 ರೂ ಬಹುಮಾನ ಮತ್ತು ಫಲಕ, ಉತ್ತಮ ಹಿಡಿತಗಾರ, ಉತ್ತಮ ದಾಳಿಗಾರ, ಉತ್ತಮ ಸರ್ವ ಶ್ರೇಷ್ಠರಿಗೆ ತಲಾ 1,111 ರೂ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ.

ಪಂದ್ಯದಲ್ಲಿ ಭಾಗವಹಿಸಲು ಆಸಕ್ತಿ ಇರುವ ತಂಡಗಳು ಮೊಬೈಲ್ ಸಂಖ್ಯೆ 9892169914, 9869121755, 09594677613 ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದು ತಮ್ಮ ತಂಡದ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಮುಲುಂಡ್ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ ಮತ್ತು ಪದಾಧಿಕಾರಿಗಳು ಹೇಳಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+