ಕೋಳಿ ಮಾಂಸ ಮಾರಾಟಕ್ಕೆ ಕೈಯಿಟ್ಟ ಮುಕೇಶ್ ಅಂಬಾನಿ

ಮುಂಬೈ, ಅ.23: ಬಹುತೇಕ ಎಲ್ಲ ಪ್ರಮುಖ ಕ್ಷೇತ್ರಗಳಲ್ಲೂ ಕೈಯಾಡಿಸಿದ ಅಗ್ರ ಉದ್ಯಮಿ ಮುಕೇಶ್ ಅಂಬಾನಿ ಈಗ ಕೋಳಿ ಮಾಂಸ ವ್ಯಾಪಾರಕ್ಕೆ ಇಳಿಸಿದ್ದಾರೆ. ಶುದ್ಧ ಶಾಖಾಹಾರಿಯಾದ ಮುಕೇಶ್ ಅಂಬಾನಿ ಕೋಳಿ ಮಾಂಸ ಮಾರಾಟಕ್ಕೆ ಕೈಹಾಕಿರುವುದು ಕುತೂಹಲಕಾರಿಯಾಗಿದೆ.

ಜನಪ್ರಿಯ ಕೆಎಫ್ ಸಿಗೆ (Kentucky Fried Chicken) ಸಡ್ಡು ಹೊಡೆಯಲು ಕೋಳಿ ಮಾಂಸ ವ್ಯಾಪಾರದಲ್ಲಿ ಒಂದು ತುಣುಕನ್ನು ತಮ್ಮದಾಗಿಸಿಕೊಳ್ಳಲು ಮುಕೇಶ್ ನಿರ್ಧರಿಸಿದ್ದಾರೆ. ಹಾಗಾಗಿ, ಇನ್ನು ಮುಂದೆ Reliance Industries ಮಳಿಗೆಗಳಲ್ಲಿ chilled and frozen food ಮಾರಾಟಕ್ಕೆ ಲಭ್ಯವಾಗುತ್ತದೆ.

ಮುಕೇಶ್ ಸಾರಥ್ಯದ Reliance Industries ಬ್ರಿಟನ್ನಿನ Two Sisters Foods India (TSFI) ಕಂಪನಿಯಲ್ಲಿ ಶೇ. 45ರಷ್ಟು ಈಕ್ವಿಟಿ ಪಾಲನ್ನು ಪಡೆದುಕೊಂಡಿದ್ದಾರೆ. ಅಂದಹಾಗೆ ಕೋಳಿ ಮಾಂಸ ಮಾರಾಟ ವಾರ್ಷಿಕ ಶೇ. 30ರ ಪ್ರಮಾಣದಲ್ಲಿ ವೃದ್ಧಿಸುತ್ತಿದೆ.

Mukesh Ambani Reliance Industries forays into chicken business with 2 Sisters Food Group

ಬ್ರಿಟನ್ನಿನಲ್ಲಿ ಮೂರನೆಯ ಅತಿ ದೊಡ್ಡ ಫುಡ್ ಕಂಪನಿಯಾಗಿರುವ 2 Sisters Food Group ಕಂಪನಿಯು poultry, red meat, fish, ಮತ್ತು bakery ಮತ್ತು chilled/frozen products ಸರಬರಾಜು ಮಾಡುತ್ತದೆ. ಭಾರತೀಯ ಮೂಲದ ಬ್ರಿಟನ್ ಉದ್ಯಮಿ ರಂಜಿತ್ ಸಿಂಗ್ ಬೋಪರ್ಣಾ 2 Sisters Food Group ಕಂಪನಿ ಸ್ಥಾಪಕರು.

ಮುಂದೆ ಕಾಲಾಂತರದಲ್ಲಿ ಭಾರತೀಯರ ಸ್ವಾದಕ್ಕೆ ಅನುಗುಣವಾಗಿ ಮುಕೇಶ್ 'Chicken Came First' (CCF) ರೆಸ್ಟೋರೆಂಟುಗಳನ್ನು ತೆರೆಯುವ ಆಲೋಚನೆ ಹೊಂದಿದ್ದಾರೆ. ಅದಕ್ಕೂ ಮುನ್ನ TSFI ಕಂಪನಿ ಸಹಭಾಗಿತ್ವದಲ್ಲಿ chicken, fish ಮತ್ತು meat ಉತ್ಪನ್ನ ಘಟಕವನ್ನು Reliance Industries ಸ್ಥಾಪಿಸಲಿದೆ. ಇದಕ್ಕಾಗಿ ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪನೆ ಕಾರ್ಯ ಭರದಿಂದ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಬರ್ಮಿಂಗ್ ಹ್ಯಾಮ್ ನೆಲೆಯ 2SFG ಕಂಪನಿಯನ್ನು ರಂಜಿತ್ ಸಿಂಗ್ ಅವರು 1993ರಲ್ಲಿ ಸ್ಥಾಪಿಸಿದ್ದಾರೆ. ಬ್ರಿಟನ್ನಿನಲ್ಲಿ 36, ನೆದರ್ ಲ್ಯಾಂಡ್ಸ್ ನಲ್ಲಿ 8, ಐರ್ಲೆಂಡಿನಲ್ಲಿ 5 ಮತ್ತು ಪೊಲಾಂಡಿನಲ್ಲಿ 1 ಉತ್ಪಾದನಾ ಘಟಕ ಹೊಂದಿದೆ. ಕಳೆದ ವರ್ಷ 3 ಶತಕೋಟಿ ಪೌಂಡ್ ವ್ಯಾಪಾರ ದಾಖಲಿಸಿದ್ದ 2SFG ಕಂಪನಿಯಲ್ಲಿ ಸುಮಾರು 25 ಸಾವಿರ ಉದ್ಯೋಗಿಗಳು ಇದ್ದಾರೆ. (ಚಿತ್ರ ಕೃಪೆ- Sean Smith, Guardian)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+