ಮನ್ ಕಿ ಬಾತ್; ತುರ್ತುಪರಿಸ್ಥಿತಿ ಮರೆಯಲು ಸಾಧ್ಯವಿಲ್ಲ ಎಂದ ಮೋದಿ
ನವದೆಹಲಿ, ಜೂ. 26: "ಭಾರತ ದೇಶವು ತನ್ನ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ 1975ರ ಭೀಕರ ತುರ್ತು ಪರಿಸ್ಥಿತಿಯನ್ನು ಎಂದಿಗೂ ಮರೆಯಬಾರದು" ಎಂದು ಪ್ರಧಾನಿ ನರೇಂದ್ರ ಮೋದಿ
ಭಾನುವಾರ ಹೇಳಿದರು.
ತಮ್ಮ ತಿಂಗಳ ರೆಡಿಯೋ ಭಾಷಣ ಮನ್ ಕಿ ಬಾತ್‌ನ 90ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ದೇಶವು ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಆ ಭಯಾನಕ ತುರ್ತು ಪರಿಸ್ಥಿತಿಯನ್ನು ನಾವು ಎಂದಿಗೂ ಮರೆಯಬಾರದು" ಎಂದರು.
"ಅಮೃತ ಮಹೋತ್ಸವವು ನೂರಾರು ವರ್ಷಗಳ ಗುಲಾಮಗಿರಿಯಿಂದ ಸ್ವಾತಂತ್ರ್ಯದ ವಿಜಯದ ಸಾಹಸಗಾಥೆಯನ್ನು ಒಳಗೊಳ್ಳುತ್ತದೆ. ಆದರೆ ಸ್ವಾತಂತ್ರ್ಯದ ನಂತರದ 75 ವರ್ಷಗಳ ಪ್ರಯಾಣವನ್ನು ಸಹ ಒಳಗೊಂಡಿದೆ. ನಾವು ಇತಿಹಾಸದ ಪ್ರತಿಯೊಂದು ಪ್ರಮುಖ ಹಂತದಿಂದ ಕಲಿಯುತ್ತಾ ಮುನ್ನಡೆಯುತ್ತೇವೆ" ಎಂದು ಹೇಳಿದ್ದಾರೆ.

ನಾಗರಿಕರಿಂದ ಎಲ್ಲಾ ಹಕ್ಕು ಕಿತ್ತುಕೊಳ್ಳಲಾಗಿತ್ತು
24-25 ವರ್ಷ ವಯಸ್ಸಿನ ಯುವಕರನ್ನು ಉದ್ದೇಶಿಸಿದ ಮಾತನಾಡಿದ ಪ್ರಧಾನಿ, "ಯುವಕರ ಹೆತ್ತವರು ಚಿಕ್ಕವರಿದ್ದಾಗ ಅವರ ಬದುಕುವ ಹಕ್ಕನ್ನು ಅವರಿಂದ ಕಸಿದುಕೊಳ್ಳಲಾಗಿದೆ ಎಂದು ನಿಮಗೆ ತಿಳಿದಿದೆಯೇ?. ಇದು ಹೇಗೆ ಸಂಭವಿಸಿತು ಎಂದು ನೀವು ಯೋಚಿಸುತ್ತಿರಬೇಕು?. ಇದು ಅಸಾಧ್ಯ ಆದರೆ ನನ್ನ ಯುವ ಸ್ನೇಹಿತರೇ, ಇದು ನಮ್ಮ ದೇಶದಲ್ಲಿ ಒಮ್ಮೆ ಸಂಭವಿಸಿದೆ. ಇದು ವರ್ಷಗಳ ಹಿಂದೆ 1975ರಲ್ಲಿ ಸಂಭವಿಸಿತು. ಇದು ಜೂನ್ ತಿಂಗಳಿನಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ದೇಶದ ನಾಗರಿಕರಿಂದ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ" ಎಂದು ಹೇಳಿದರು.

ಮುದ್ರಣಾಲಯಗಳನ್ನು ನಿಯಂತ್ರಣಕ್ಕೆ ತರಲಾಯಿತು
"ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಎಲ್ಲಾ ಭಾರತೀಯರಿಗೆ ಒದಗಿಸಲಾದ ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳಲ್ಲಿ ಒಂದಾಗಿದೆ. 1975ರ ಸಮಯದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನ ನಡೆದಿತ್ತು. ದೇಶದ ನ್ಯಾಯಾಲಯಗಳು ಪ್ರತಿ ಸಾಂವಿಧಾನಿಕ ಸಂಸ್ಥೆಗಳು, ಮುದ್ರಣಾಲಯಗಳನ್ನು ನಿಯಂತ್ರಣಕ್ಕೆ ತರಲಾಯಿತು. ಸೆನ್ಸಾರ್‌ಶಿಪ್‌ನ ಸ್ಥಿತಿಯು ಅನುಮೋದನೆಯಿಲ್ಲದೆ ಏನನ್ನೂ ಮುದ್ರಿಸಲು ಸಾಧ್ಯವಾಗಲಿಲ್ಲ" ಎಂದು ಪ್ರಧಾನಿ ಹೇಳಿದರು.

ಭಾರತದ ಜನರ ನಂಬಿಕೆ ಅಲುಗಾಡಲಿಲ್ಲ
ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರು ಸರ್ಕಾರದ ನಿಲುವನ್ನು ಖಂಡಿಸಿದ ನಂತರ ಅವರ ಮೇಲೆ ವಿಧಿಸಲಾದ ನಿಷೇಧದ ಕುರಿತು ಮಾತನಾಡಿದ ಪ್ರಧಾನಿ ಮೋದಿ, "1975ರಲ್ಲಿ ರೇಡಿಯೊದಲ್ಲಿ ಅವರ ಹಾಡುಗಳನ್ನು ನಿಲ್ಲಿಸಲಾಯಿತು. ಆದರೆ ಅಂತಹ ಅನೇಕ ಪ್ರಯತ್ನಗಳು, ಸಾವಿರಾರು ಬಂಧನಗಳು ಮತ್ತು ಲಕ್ಷಗಟ್ಟಲೆ ಜನರ ಮೇಲೆ ದೌರ್ಜನ್ಯದ ನಂತರವೂ, ಪ್ರಜಾಪ್ರಭುತ್ವದಲ್ಲಿ ಭಾರತದ ಜನರ ನಂಬಿಕೆ ಅಲುಗಾಡಲಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು.

ಜನರು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ್ದಾರೆ
"ಭಾರತದ ಜನರು ನಾವು ಶತಮಾನಗಳಿಂದ ನಡೆಸಿಕೊಂಡು ಬಂದಿರುವ ಪ್ರಜಾಪ್ರಭುತ್ವದ ಸಂಸ್ಕಾರಗಳು, ನಮ್ಮ ರಕ್ತನಾಳಗಳಲ್ಲಿ ಇರುವ ಪ್ರಜಾಪ್ರಭುತ್ವದ ಮನೋಭಾವವು ಅಂತಿಮವಾಗಿ ಗೆದ್ದಿದೆ. ಭಾರತದ ಜನರು ತುರ್ತು ಪರಿಸ್ಥಿತಿಯನ್ನು ತೊಡೆದು ಹಾಕಿದರು ಹಾಗೂ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದರು. ಪ್ರಜಾಸತ್ತಾತ್ಮಕ ರೀತಿಯಲ್ಲಿ ಸರ್ವಾಧಿಕಾರ ಮನೋಭಾವನೆಯನ್ನು, ಸರ್ವಾಧಿಕಾರಿ ಧೋರಣೆಯನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಸೋಲಿಸಿದ ಉದಾಹರಣೆಯನ್ನು ಇಡೀ ಪ್ರಪಂಚದಲ್ಲಿ ಕಾಣುವುದು ಕಷ್ಟ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ದೇಶವಾಸಿಗಳ ಪರ ಪ್ರಜಾಪ್ರಭುತ್ವದ ಸೈನಿಕನಾಗಿ ಹೋರಾಟ ನನಗೆ ಸಾಕ್ಷಿಯಾಗುವ ಸೌಭಾಗ್ಯ ಸಿಕ್ಕಿತು" ಹೇಳಿದರು.
-
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications