ಮೋದಿ ಮತ್ತೆ ಪ್ರಧಾನಿಯಾದರೆ ದೇಶ ಬಿಡುವ ಸುದ್ದಿ: ಶಬನಾ ಆಜ್ಮಿ ಸ್ಪಷ್ಟನೆ
ಮುಂಬೈ, ಮೇ 13: ಎರಡನೇ ಅವಧಿಗೆ ನರೇಂದ್ರ ಮೋದಿ ಮತ್ತೆ ಪ್ರಧಾನಮಂತ್ರಿಯಾದರೆ, ತಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಹರಿದಾಡುತ್ತಿರುವ ಸುದ್ದಿಗೆ ಬಾಲಿವುಡ್ ಹಿರಿಯ ನಟಿ, ಜಾವೇದ್ ಅಖ್ತರ್ ಪತ್ನಿ ಶಬನಾ ಆಜ್ಮಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದೇಶ ಬಿಟ್ಟು ಹೋಗುವ ವಿಚಾರದ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ ಎಂದಿರುವ ಶಬನಾ ಆಜ್ಮಿ, ಭಾರತ ನನ್ನ ದೇಶ, ಇಲ್ಲೇ ಹುಟ್ಟಿದ್ದೇನೆ, ಇಲ್ಲಿಯೇ ಸಾಯುತ್ತೇನೆ ಎಂದು ಹೇಳಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸುವಾಗ ಸಿಗುವ ಖುಷಿ ತಾತ್ಕಾಲಿಕ, ಆದರೆ ಅದಕ್ಕೆ ಹೆಚ್ಚುದಿನ ಬಾಳಿಕೆ ಇರುವುದಿಲ್ಲ, ಯಾಕೆಂದರೆ ಅದು ಸುಳ್ಳು. ಸತ್ಯ ಯಾವತ್ತಿದ್ದರೂ ಸತ್ಯ ಎಂದಿರುವ ಶಬನಾ ಆಜ್ಮಿ, ದೇಶ ಬಿಟ್ಟು ಹೋಗುವ ವಿಚಾರ 'ಬೇಸ್ ಲೆಸ್' ಎಂದಿದ್ದಾರೆ.

ವಿಷಯಾಧಾರಿತ ಚರ್ಚೆ ಮಾಡಲು ಸಾಧ್ಯವಾಗದೇ ಇದ್ದಲ್ಲಿ, ಕನಿಷ್ಠ ಸುಳ್ಳನ್ನಾದರೂ ಜಗತ್ತಿಗೆ ಹಬ್ಬಿಸಬೇಡಿ ಎಂದು ಟ್ವೀಟ್ ಮಾಡಿರುವ ಶಬನಾ, ನಿಮ್ಮ ಈ ಸುಳ್ಳುಸುದ್ದಿ, ಸೋಲಿನ ಭಯ ನಿಮ್ಮನ್ನು ಕಾಡುತ್ತಿರುವಂತಿದೆ ಎಂದು ಹೇಳಿದ್ದಾರೆ.
The Fake News Brigade is pretty pathetic. Their overdrive exposes their fear at losing out. Issues pe baat kar nahi sakte tto chalo jhoot itni baar bolo ke usey log sach maan lein is their motto.But they r falling flat on their faces bcoz there r enuf brave voices exposing dem
— Azmi Shabana (@AzmiShabana) May 11, 2019
ಶಬನಾ ಆಜ್ಮಿ ಟ್ವೀಟಿಗೆ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು, ನೀವು ಬಿಜೆಪಿ ಬಗ್ಗೆ ಹೇಳುತ್ತಿದ್ದೀರೋ, ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದೀರೋ ಅಥವಾ ಆಮ್ ಆದ್ಮಿ ಪಕ್ಷವನ್ನು ಉಲ್ಲೇಖಿಸುತ್ತಿದ್ದೀರೋ ಎಂದು ಮೊದಲು ಸ್ಪಷ್ಟನೆಯನ್ನು ನೀಡಿ ಎಂದು ಲೇವಡಿ ಮಾಡಿದ್ದಾರೆ.
ಶತ್ರುಗಳಿಗೆ ಬೇರೆ ಬೇರೆ ರೀತಿಯಲ್ಲಿ ನೈತಿಕ ಬೆಂಬಲ ನೀಡುವ ದೇಶದ್ರೋಹಿಗಳೇ ಬಾಲಿವುಡ್ ಫಿಲ್ಮ್ ಇಂಡಸ್ಟ್ರಿಯಲ್ಲಿ ತುಂಬಿ ಹೋಗಿದ್ದಾರೆ ಎಂದು ನಟಿ ಕಂಗನಾ ರಣಾವತ್, ಶಬನಾ ಮತ್ತು ಜಾವೇದ್ ಅಖ್ತರ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.












Click it and Unblock the Notifications