ಥಾಣೆ; ಗುಂಡು ಹಾರಿಸಿ ಎಂಎನ್ಎಸ್ ನಾಯಕನ ಹತ್ಯೆ

ಮುಂಬೈ, ನವೆಂಬರ್ 23 : ಅಪರಿಚಿತರು ಮಹಾರಾಷ್ಟ್ರ ನವನಿರ್ಮಣ್ ಸೇನಾ ನಾಯಕನನ್ನು ಹತ್ಯೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಸೋಮವಾರ ಸಂಜೆ ಜಮೀಲ್ ಶೇಖ್ (49) ಎಂಬ ಮಹಾರಾಷ್ಟ್ರ ನವನಿರ್ಮಣ್ ಸೇನಾ (ಎಂಎನ್‌ಎಸ್) ನಾಯಕನನ್ನು ಥಾಣೆಯಲ್ಲಿ ಹತ್ಯೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

ಜಮೀಲ್ ಶೇಖ್ ಬೈಕ್‌ನಲ್ಲಿ ಹೋಗುತ್ತಿರುವಾಗ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಬೈಕ್‌ನಲ್ಲಿ ಜಮೀಲ್ ಒಬ್ಬರೇ ಹೋಗುತ್ತಿದ್ದರು. ಗುಂಡಿನ ದಾಳಿಯಿಂದ ಕುಸಿದು ಬಿದ್ದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Shot Dead

ಮುಂಬೈ ಮಿರರ್ ಪತ್ರಿಕೆ ಜಮೀಲ್ ಶೇಖ್ ಮೇಲೆ ಅಪರಿಚಿತ ವ್ಯಕ್ತಿ ಗುಂಡು ಹಾರಿಸುವ ವಿಡಿಯೋವನ್ನು ಟ್ವೀಟ್ ಮಾಡಿದೆ. ಬೈಕ್‌ನಲ್ಲಿ ಬಂದಿದ್ದ ವ್ಯಕ್ತಿಗಳು ಯಾರು? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎಂಎನ್‌ಎಸ್ ನಾಯಕ ಜಮೀಲ್ ಶೇಖ್ ಥಾಣೆಯ ಸಿವಿಕ್ ವಾರ್ಡ್‌ ಅಧ್ಯಕ್ಷರಾಗಿದ್ದರು. ರಾಜಕೀಯ ದ್ವೇಷದಿಂದಲೇ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪರಿಶೀಲನೆ ಮುಂದುವರೆದಿದೆ.

ಘಟನೆ ನಡೆದ ಪ್ರದೇಶ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಹತ್ಯೆ ನಡೆದಿದೆಯೇ? ಎಂದು ತನಿಖೆ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+