ಸಂಪರ್ಕಕ್ಕೆ ಸಿಗದ ಜೆಟ್ ಏರ್ ವೇಸ್ ವಿಮಾನ, ಅನುಮಾನದಲ್ಲಿ ಬೆನ್ನಟ್ಟಿದ ಜರ್ಮನಿ

ಮುಂಬೈನಿಂದ ಲಂಡನ್ ಗೆ ತೆರಳುತ್ತಿದ್ದ ವಿಮಾನ ಕಳೆದ ಗುರುವಾರ ಕೆಲ ಕಾಲ ಸಂಪರ್ಕ ತಪ್ಪಿತ್ತು. 9/11 ದಾಳಿ ನಂತರ ಹಲವು ದೇಶಗಳು ಇಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿವೆ. ಅದೇ ರೀತಿ ಜರ್ಮನಿ ಫೈಟರ್ ಜೆಟ್ ಬೆನ್ನಟ್ಟಿ ತಪಾಸಣೆ ನಡೆಸಿದೆ.

ಮುಂಬೈ, ಫೆಬ್ರವರಿ 20: ಮುಂಬೈನಿಂದ ಲಂಡನ್ ಗೆ ತೆರಳುತ್ತಿದ್ದ ಜೆಟ್ ಏರ್ ವೇಸ್ ವಿಮಾನವು ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಜರ್ಮನಿಯ ಫೈಟರ್ ಜೆಟ್ ಗಳು ಹಿಂಬಾಲಿಸಿದ ಘಟನೆ ನಡೆದಿದೆ. ವಿಮಾನದಲ್ಲಿ 330 ಪ್ರಯಾಣಿಕರು ಇದ್ದರು. ಅನುಮಾನ ಮೂಡಿದ ಕಾರಣಕ್ಕೆ ಕಳೆದ ಗುರುವಾರ ಜರ್ಮನಿಯ ಸೇನಾ ವಿಮಾನ ಹಿಂಬಾಲಿಸಿದೆ.

9/11ರ ಉಗ್ರರ ದಾಳಿ ನಂತರ ಹಲವು ದೇಶಗಳು ಕಠಿಣ ನಿಯಮಗಳನ್ನು ಪಾಲಿಸುತ್ತಿವೆ. ಅನುಮತಿ ಇಲ್ಲದೆ ದೇಶದ ಗಡಿಯೊಳಗೆ ಪ್ರವೇಶಿಸುವ ಯಾವುದೇ ವಿಮಾನದ ಪರಿಶೀಲನೆ ನಡೆಸುತ್ತಿವೆ. ಜೆಟ್ ನ ಬೋಯಿಂಗ್ 777-30 ವಿಮಾನವು ಮೂವತ್ತಾರು ಸಾವಿರ ಅಡಿ ಎತ್ತರದಲ್ಲಿ ಚಲಿಸುತ್ತಿತ್ತು.[ದೋಹಾ ಟು ಆಕ್ಲೆಂಡ್: ಇದು ಜಗತ್ತಿನಲ್ಲೇ ಅತಿ ದೂರದ ವಿಮಾನ ಯಾನ]

Mid-air scare: Jet flight intercepted by German planes

ಸ್ಲೋವಾಕಿಯಾ ದೇಶದಿಂದ ಜೆಕ್ ರಿಪಬ್ಲಿಕ್ ಗೆ ಪ್ರವೇಶ ಪಡೆಯುವ ವೇಳೆ ವಿಮಾನದೊಂದಿಗಿನ ಸಂಪರ್ಕ ಕಡಿತವಾಯಿತು. ವಿಮಾನವು ಮಾರ್ಗವನ್ನೇನೂ ಬದಲಿಸಿರಲಿಲ್ಲ. ಆದರೆ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲರ್ ಗೆ ಸ್ಪಂದಿಸಲಿಲ್ಲ. ಆ ಕಾರಣಕ್ಕೆ ಎರಡು ಫೈಟರ್ ಜೆಟ್ ಗಳು ಪರಿಶೀಲನೆ ನಡೆಸಿವೆ.[80 ಗಿಡುಗಗಳ ಜೊತೆ ವಿಮಾನದಲ್ಲಿ ರಾಜಕುಮಾರನ ಪ್ರಯಾಣ: ಹೀಗೂ ಉಂಟೇ!]

ಐಲಟ್ ಗಳು ತುರ್ತು ಫ್ರೀಕ್ವೆನ್ಸಿ ಮೂಲಕ ಸಂಪರ್ಕದ ಸಾಧಿಸಿದ್ದಾರೆ. ಜರ್ಮನಿಯಲ್ಲಿ ಹಾರಾಡುವಾಗ ವಿಮಾನ ಸಂಪರ್ಕ ಕಲೆದುಕೊಂಡಿತ್ತು. ಆದರೆ ಕೆಲವೇ ನಿಮಿಷದಲ್ಲಿ ಮತ್ತೆ ಸಾಧಿಸಲಾಯಿತು. ಮುಂಜಾಗ್ರತೆಯಾಗಿ ಜರ್ಮನಿಯವರು ವಿಮಾನ ಹಾಗೂ ಅಲ್ಲಿನ ಪ್ರಯಾಣಿಕರ ಸುರಕ್ಷತೆಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ ಎಂದು ಜೆಟ್ ಏರ್ ವೇಸ್ ನ ವಕ್ತಾರ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+