ಸಂಗೀತ ನಿರ್ದೇಶಕ ಅನು ಮಲಿಕ್ ವಿರುದ್ಧ ಮಿಟೂ ಆರೋಪಗಳ ಸುರಿಮಳೆ
ಮುಂಬೈ, ಅಕ್ಟೋಬರ್ 22 : 'ಚುರಾಕೆ ದಿಲ್ ಮೇರೆ ಗೋರಿಯಾ ಚಲಿ', 'ಏ ಕಾಲಿ ಕಾಲಿ ಆಂಖೆ, ಏ ಗೋರಿ ಗೋರಿ ಗಾಲ್' ಮುಂತಾದ ಸೂಪರ್ ಡೂಪರ್ ಹಿಟ್ ಹಿಂದಿ ಹಾಡುಗಳನ್ನು ಕಾಂಪೋಸ್ ಮಾಡಿ, ಸಂಗೀತ ಪ್ರೇಮಿಗಳ ದಿಲ್ ಚೋರಿ ಮಾಡಿರುವ ಹಿರಿಯ ಸಂಗೀತ ನಿರ್ದೇಶಕ ಅನು ಮಲಿಕ್ ಅವರು ಈಗ #ಮಿಟೂನ ಹೊಸ ಶಿಕಾರಿ.
ಅವರ ವಿರುದ್ಧ ಸಂಗೀತಗಾರ್ತಿಯರಾದ ಶ್ವೇತಾ ಪಂಡಿತ್, ಸೋನಾ ಮೊಹಾಪಾತ್ರ ಮುಂತಾದವರು ಅನು ಮಲಿಕ್ ಅವರ ವಿರುದ್ಧ ತಿರುಗಿಬಿದ್ದಿದ್ದು, ತಮಗೆ ಹೇಗೆ ಲೈಂಗಿಕ ಕಿರುಕುಳು ನೀಡಿದ್ದಾರೆ ಎಂದು ಆರೋಪಿಸಿ #MeToo ಅಭಿಯಾನ ಮತ್ತಷ್ಟು ಕಾವೇರುವಂತೆ ಮಾಡಿದ್ದಾರೆ.
ಈ ಇಬ್ಬರು ಮಹಿಳಾಮಣಿಗಳಿಗೆ ದನಿಗೂಡಿಸಿರುವ ಮಾಜಿ ಪಾಪ್ ಸಂಗೀತಗಾರ್ತಿ ಅಲಿಶಾ ಚಿನಾಯ್ ಅವರು ಕೂಡ ಅನು ಮಲಿಕ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದು, ಶ್ವೇತಾ ಪಂಡಿತ್ ಮತ್ತು ಸೋನಾ ಮೊಹಾಪಾತ್ರ ಹೇಳಿರುವ ಒಂದು ಪದವೂ ಸತ್ಯವಾಗಿದೆ ಎಂದು ಅನು ಮಲಿಕ್ ಗಾಯದ ಮೇಲೆ ನಿಂಬೆ ಹಣ್ಣು ಹಿಂಡಿದ್ದಾರೆ.
ಪಾಶ್ಚಾತ್ಯ ಸಂಗೀತ ಟ್ಯೂನ್ ಗಳನ್ನು ಕದಿಯುವಲ್ಲಿ ಹೆಸರುವಾಸಿ ಎಂಬ ಕುಖ್ಯಾತಿಗೆ ಗುರಿಯಾಗಿರುವ ಅನು ಮಲಿಕ್ ಅವರು, ಇತ್ತೀಚಿನ ವರ್ಷಗಳಲ್ಲಿ ಸಂಗೀತ ನಿರ್ದೇಶನಕ್ಕಿಂತ ಹಾಡುಗಳ ರಿಯಾಲಿಟಿ ಶೋನಲ್ಲಿಯೇ ತೀರ್ಪುಗಾರರಾಗಿ ಹೆಚ್ಚು ತೊಡಗಿಕೊಂಡಿದ್ದರು.

ಇಂಡಿಯನ್ ಐಡಲ್ ನಿಂದ ಹೊರಕ್ಕೆ
ಈ ಆರೋಪಗಳನ್ನು ಮಹಿಳಾ ಸಂಗೀತಗಾರ್ತಿಯಲು ಅನು ಮಲಿಕ್ ಮೇಲೆ ಹೊರಿಸುತ್ತಿದ್ದಂತೆ, ಇಂಡಿಯನ್ ಐಡಲ್ 10ರ ತೀರ್ಪುಗಾರರಾಗಿದ್ದ ಅವರನ್ನು ಸೋನಿ ಎಂಟರ್ಟೇನ್ಮೆಂಟ್ ತೀರ್ಪುಗಾರಿಕೆಯಿಂದ ಕೆಳಗಿಳಿಸಿದ್ದು, ಇನ್ನು ಮುಂದೆ ಅವರು ತೀರ್ಪುಗಾರರಾಗಿ ಮುಂದುವರಿಯುವುದಿಲ್ಲ. ಅವರ ಬದಲಿಗೆ ಬೇರೆ ನುರಿತ ಸಂಗೀತ ತಜ್ಞರು ಅವರ ಜಾಗದಲ್ಲಿ ಇರಲಿದ್ದಾರೆ ಎಂದು ಹೇಳಿದೆ.
ಸೋನಿ ಎಂಟರ್ಟೇನ್ಮೆಂಟ್ ತಮ್ಮನ್ನು ಇಳಿಸಿಲ್ಲ. ಆದರೆ, ಲೈಂಗಿಕ ದೌರ್ಜನ್ಯದ ಆರೋಪ ಬಂದ ಹಿನ್ನೆಲೆಯಲ್ಲಿ, ತೀರ್ಪುಗಾರರಾಗಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದಿರುವುದರಿಂದ ನಾನೇ ತೀರ್ಪುಗಾರರ ಕರ್ತವ್ಯದಿಂದ ಹಿಂದೆ ಸರಿದಿದ್ದೇನೆ ಎಂದು ಅನು ಮಲಿಕ್ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅಲ್ಲದೆ, ತಮ್ಮ ಮೇಲೆ ಮಾಡಲಾಗಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಅನು ಮಲಿಕ್ ಆ ಮಹಿಳೆಯರಿಗೆ ತಿರುಗೇಟು ನೀಡಿದ್ದಾರೆ.

ಬೆಂಕಿ ಹಚ್ಚಿಬಿಟ್ರಿ, ಬೆಂಕಿ ಹಚ್ಚಿಬಿಟ್ರಿ
ತೀರ್ಪುಗಾರಿಕೆ ಮಾಡುವಾಗ ಶಾಯರಿಗಳನ್ನು ಬಳಸುವುದರಲ್ಲಿ, ಪ್ರಾಸಬದ್ಧವಾಗಿ ಮಾತಾಡುವುದರಲ್ಲಿ ನಿಸ್ಸೀಮರಾಗಿರುವ ಅನು ಮಲಿಕ್ ಅವರನ್ನು ಅವರದೇ ಡೈಲಾಗ್ ಬಳಸಿ ಅಭಿಮಾನಿಗಳು ಟೀಕೆ ಮಾಡುತ್ತಿದ್ದಾರೆ. ಒಂದು ಹೀಗಿದೆ : "ಬೆಂಕಿ ಹಚ್ಚಿಬಿಟ್ರಿ, ಬೆಂಕಿ ಹಚ್ಚಿಬಿಟ್ರಿ, ಮಹಿಳೆಯರೇ ಬೆಂಕಿ ಹಚ್ಚಿಬಿಟ್ರಿ, ಇಂಡಿಯನ್ ಐಡಲ್ ತೀರ್ಪುಗಾರರಾದ ಅನು ಮಲಿಕ್ ಅವರ ಕುರ್ಚಿಗೇ ಬೆಂಕಿ ಹಚ್ಚಿಬಿಟ್ರಿ... ಶಭಾಸ್ ಸೋನಿ ಟಿವಿ" ಎಂದು ಅಲೋಕ್ ಬಾಜಪೇಯಿ ಎಂಬುವವರು ಅನು ಮಲಿಕ್ ಅವರ ಕಾಲನ್ನು ಎಳೆದಿದ್ದಾರೆ. ಟ್ವಿಟ್ಟರ್ ತುಂಬ ಅನು ಮಲಿಕ್ ವಿರುದ್ಧ ಆರೋಪಗಳ ಸುರಿಮಳೆಯಾಗುತ್ತಿದೆ.

ನೀನು ನನಗೆ ಒಂದು ಕಿಸ್ ನೀಡಬೇಕು
ಹದಿನೆಂಟು ವರ್ಷಗಳ ಹಿಂದೆ 2000ನೇ ಇಸ್ವಿಯಲ್ಲಿ ಮೊಹಬ್ಬತೇ ಚಿತ್ರದಲ್ಲಿ ಕಿರುವಯಸ್ಸಿನ ಗಾಯಕಿಯಾಗಿ ಶ್ವೇತಾ ಪಂಡಿತ್ ಅವರು ಚಿತ್ರರಂಗಕ್ಕೆ ಪರಿಚಯವಾಗಿದ್ದರು. 2001ರಲ್ಲಿ ಅನು ಮಲಿಕ್ ಅವರು ಶ್ವೇತಾ ಅವರನ್ನು ಎಂಪೈರ್ ಸ್ಟುಡಿಯೋಗೆ ಅವರ ಮ್ಯಾನೇಜರ್ ಮುಸ್ತಾಫಾ ಮೂಲಕ ಕರೆಯಿಸೊಂಡಿದ್ದರು. ಆವಾರಾ ಪಾಗಲ್ ದೀವಾನಾ ಚಿತ್ರಕ್ಕಾಗಿ ಶ್ವೇತಾ ಅವರು ಸುನ್ನಿಧಿ ಚೌಹಾಣ್ ಮತ್ತು ಶಾನ್ ಜೊತೆ ಹಾಡುವವರಿದ್ದರು. ಅವರ ಧ್ವನಿ ಪರೀಕ್ಷಿಸಲು ಒಂದು ಹಾಡು ಹಾಡಲು ಹೇಳಿದರು. ಹರ್ ದಿಲ್ ಜೋ ಪ್ಯಾರ್ ಕರೇಗಾ... ಹಾಡಿದ್ದು ಕೇಳಿ ಖುಷಿಯಾದ ಅನು ಮಲಿಕ್, ಸುನ್ನಿಧಿ ಮತ್ತು ಶಾನ್ ಜೊತೆ ಹಾಡಬೇಕಿದ್ದರೆ ನೀನು ನನಗೆ ಒಂದು ಕಿಸ್ ನೀಡಬೇಕು ಎಂದು ಮಲಿಕ್ ಕೇಳಿದರಂತೆ. ಆಗ ಶ್ವೇತಾಗೆ ಕೇವಲ 15ರ ಹರೆಯ, ಶಾಲೆಗೆ ಹೋಗುತ್ತಿದ್ದ ಬಾಲಕಿ. ನಾನು ಅದನ್ನು ಕೇಳಿ ಅವಾಕ್ಕಾದೆ ಎಂದು ಶ್ವೇತಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ನಾನು ಆ ಘಟನೆಯಿಂದ ತಿಂಗಳಾನುಗಟ್ಟಲೆ ದುಃಖಿತಳಾಗಿದ್ದೆ, ಖಿನ್ನತೆಗೊಳಗಾಗಿದ್ದೆ. ಹದಿನೆಂಟು ವರ್ಷಗಳಿಂದ ಆ ನೋವನ್ನು ಬಚ್ಚಿಟ್ಟುಕೊಂಡಿದ್ದೆ. ಈಗ ಎಲ್ಲರೂ ಧೈರ್ಯವಾಗಿ ಬಹಿರಂಗ ಪಡಿಸುತ್ತಿರುವುದರಿಂದ ನಾನು ಹೇಳಬೇಕಾಯಿತು ಎಂದಿದ್ದಾರೆ ಶ್ವೇತಾ ಪಂಡಿತ್.

ವಾಹ್ ಕ್ಯಾ ಮಾಲ್ ಹೈ ಎಂದಿದ್ದ ಮಲಿಕ್
ಕೈಲಾಶ್ ಖೇರ್ ತಮ್ಮ ತೊಡೆಯ ಮೇಲೆ ಕೈಯಿಟ್ಟು, ನೀನು ಚೆಂದವಿದ್ದಿ ಎಂದು ಹೇಳಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದರೆಂದು ಆರೋಪಿಸಿದ್ದ ಸಂಗೀತಗಾರ್ತಿ ಸೋನಾ ಮೋಹಾಪಾತ್ರ ಅವರು, ಶ್ವೇತಾ ಪಂಡಿತ್ ಅವರನ್ನು ಬೆಂಬಲಿಸಿದ್ದು, ಅನು ಮಲಿಕ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ಸೋನಾ ಅವರನ್ನು ಅವಗ ಗಂಡ ಸಂಗೀತ ನಿರ್ದೇಶಕ ರಾಮ್ ಸಂಪತ್ ಎದುರಲ್ಲೇ 'ವಾಹ್ ಕ್ಯಾ ಮಾಲ್ ಹೈ' ಎಂದಿದ್ದರಂತೆ ಅನು ಮಲಿಕ್. ಅಲ್ಲದೆ, ಹೊತ್ತಿಲ್ಲದ ಹೊತ್ತಿನಲ್ಲಿ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರೆಂದು ಸಂದರ್ಶನವೊಂದರಲ್ಲಿ 42 ವರ್ಷದ ಸೋನಾ ಮೊಹಾಪಾತ್ರ ಅವರು ಅನು ಮಲಿಕ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ.

ಅತ್ಯಾಚಾರಕ್ಕೆ ಯತ್ನಿಸಿದ್ದ ಅನು ಮಲಿಕ್
ಇದಕ್ಕೆ ಪೂರಕವೆಂಬಂತೆ, ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು ಕೂಡ ಅನು ಮಲಿಕ್ ವಿರುದ್ಧ ಕಿರಿಕಾರಿದ್ದು, 1990ರಲ್ಲಿ ತಮ್ಮ ದೇಹಕ್ಕೆ ಅನು ಮಲಿಕ್ ಅವರು ಉಜ್ಜಿ ಅಸಭ್ಯವಾಗಿ ನಡೆದುಕೊಂಡಿದ್ದರು. ಇದನ್ನು ವಿರೋಧಿಸಿದಾಗ ತಕ್ಷಣ ಕ್ಷಮೆ ಕೇಳಿದ್ದರು. ನಂತರ ಫಂಡ್ ರೈಸಿಂಗ್ ಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅವರೊಂದಿಗೆ ಕೆಲಸ ಮಾಡಬೇಕಾಯಿತು. ಆಗ, ಹೆಂಡತಿ ಮಕ್ಕಳು ಇಲ್ಲದಿರುವ ಹೊತ್ತಿನಲ್ಲಿ ಮನೆಗೆ ಕರೆಸಿಕೊಂಡಿದ್ದ ಅನು ಮಲಿಕ್, ಸೋಫಾದಲ್ಲಿ ಪಕ್ಕದಲ್ಲೇ ಕುಳಿತು ತಮ್ಮ ಸ್ಕರ್ಟ್ ಎತ್ತಿದ್ದರಲ್ಲದೆ, ಸೊಂಟದ ಕೆಳಗೆ ತಾವೂ ನಗ್ನರಾದರು. ಅದೇ ಸಮಯದಲ್ಲಿ ಡೆಲಿವರಿ ಬಾಯ್ ಬಂದು ಬಾಗಿಲು ಬಡಿದಿದ್ದರಿಂದ ನಾನು ಬಚಾವ್ ಆದೆ. ಪೊಲೀಸರಿಗೆ ದೂರು ನೀಡಿದರೆ ನಾನು ಸುಮ್ಮನಿರುವುದಿಲ್ಲ ಎಂದು ಬೆದರಿ ಕೂಡ ಹಾಕಿದ್ದರು. ಡ್ರಾಪ್ ಮಾಡುತ್ತೇನೆಂದು ಹೇಳಿ ಕಾರಿನಲ್ಲಿಯೇ ಪ್ಯಾಂಟಿನ ಜಿಪ್ ತೆಗೆದು, ಕೂದಲು ಹಿಡಿದೆಳೆದು ಮುಖವನ್ನು ತೊಡೆಯ ಬಳಿ ಒತ್ತಿ ಹಿಡಿದು ಅಸಭ್ಯವಾಗಿ ವರ್ತಿಸಿದ್ದ ಎಂದು ಆ ಮಹಿಳೆ ಕಣ್ಣೀರು ಗರೆದಿದ್ದಾರೆ.

ಗಟ್ಟಿಯಾಗಿ ತಬ್ಬಿಹಿಡಿದು ಮೈಮೇಲೆ ಕೈಯಾಡಿಸಿದ್ದ
ಮತ್ತೊಬ್ಬ ಮಹಿಳೆ, ತಮಗೆ ಇಂಡಿಯನ್ ಐಡಲ್ 10ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಭಾಗವಹಿಸಲು ಅವಕಾಶವಿದ್ದರೂ, ಅಲ್ಲಿ ಅನು ಮಲಿಕ್ ತೀರ್ಪುಗಾರರಾಗಿದ್ದರಿಂದ ಅದನ್ನು ತಿರಸ್ಕರಿದೆ ಎಂದಿದ್ದಾರೆ. ಇದಕ್ಕೆ ಕಾರಣ, ತಾವು ಸಂಗೀತಗಾರ್ತಿಯಾಗಿ ಕಷ್ಟಪಡುತ್ತಿದ್ದ ಸಮಯದಲ್ಲಿ, ಸಹಾರಾ ಸ್ಟುಡಿಯೋದಲ್ಲಿ ಅನು ಮಲಿಕ್ ಜೊತೆ ಏಕಾಂಗಿಯಾಗಿದ್ದಾಗ, ಬಾಯ್ ಫ್ರೆಂಡ್ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತ, ತಮ್ಮನ್ನು ತಬ್ಬಿಕೊಂಡು ಮೈಮೇಲೆಲ್ಲ ಕೈಯನ್ನು ಮಲಿಕ್ ಹರಿಬಿಟ್ಟಿದ್ದರಂತೆ. ರೆಕಾರ್ಡಿಂಗ್ ರೂಮ್ ಸೌಂಡ್ ಪ್ರೂಫ್ ಆಗಿದ್ದರಿಂದ ಕಿರುಚಿಕೊಳ್ಳುವ ಹಾಗೂ ಇರಲಿಲ್ಲ. ಆ ವಿಕೃತ ಕಾಮಿಯನ್ನು ದೂರ ತಳ್ಳಿ ಸುರಕ್ಷಿತ ಸ್ಥಳ ಸಿಗುವವರೆಗೆ ಓಡಿ ಹೋಗಿದ್ದೆ. ಇಂಥ ಪ್ರತಿಭೆ ಇಲ್ಲದ ಕಾಮುಕನಿಂದ ತೀರ್ಪು ಮಾಡಿಸಿಕೊಳ್ಳುವ ಅಗತ್ಯವಿಲ್ಲದಿದ್ದರಿಂದ ನಾನು ಇಂಡಿಯನ್ ಐಡಲ್ ನಿಂದ ದೂರವುಳಿದೆ ಎಂದು ಅವರು ತಮ್ಮ ಕಥೆ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
-
ಶೂಟಿಂಗ್ ವೇಳೆ ನನ್ನ ಖಾಸಗಿ ಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ: ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ನಟಿ ಮೊನಾಲಿಸಾ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications