7 ತಾಸು ಮಳೆಯಲ್ಲಿ ನಿಂತು ವಾಹನ ಸವಾರರಿಗೆ ಸಹಾಯ ಮಾಡಿದ ಮಹಿಳೆ ಇವರೇ ನೋಡಿ

ಮುಂಬೈ, ಆಗಸ್ಟ್ 10: ಧಾರಾಕಾರ ಮಳೆಯಿಂದಾಗಿ ಇಡೀ ಮುಂಬೈ ನಗರದ ರಸ್ತೆಗಳು ತುಂಬಿ ಹರಿಯುತ್ತಿದ್ದು, ಈ ಸಂಬಂಧ ಅನೇಕ ಚಿತ್ರಗಳು ಆನ್‌ಲೈನ್‌ನಲ್ಲಿ ಸದ್ದುಮಾಡುತ್ತಿವೆ.

ಈ ವೇಳೆ ಮ್ಯಾನ್‌ಹೋಲ್‌ ಮೇಲೆ ನಿಂತು ವಾಹನ ಸವಾರರಿಗೆ ರಸ್ತೆಯ ಮೇಲೆ ಸುರಕ್ಷಿತವಾಗಿ ಓಡಾಡಲು ಮಹಿಳೆಯೊಬ್ಬರು ಅನುವು ಮಾಡಿಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಇದೀಗ ಆ ಮಹಿಳೆ ಯಾರು ಆಕೆಯ ಹಿನ್ನೆಲೆ ಏನು ಎಂಬುದನ್ನು ನೋಡೋಣ.

ಪಶ್ಚಿಮ ಮುಂಬೈನ ಮಾತುಂಗಾ ರಸ್ತೆಯೊಂದರಲ್ಲಿ ತೆರೆದ ಮ್ಯಾನ್‌ಹೋಲ್ ಇದ್ದು, ಈ ಮಹಿಳೆ ಅದರ ಬಳಿಯೇ ಸುಮಾರು ಏಳು ಗಂಟೆಗಳ ಕಾಲ ನಿಂತುಕೊಂಡು , ವಾಹನ ಸವಾರರಿಗೆ ಸರಿಯಾದ ದಾರಿ ತೋರುತ್ತಿದ್ದರು.

Meet Mumbai Woman Who Stood 7 Hours Near Manhole Amid Rain To Save People

ಅವರ ಹೆಸರೇ ಕಾಂತಾ ಮೂರ್ತಿ, ಹೆಚ್ಚು ಮಳೆ ಸುರಿದಿದ್ದ ಕಾರಣ ಮ್ಯಾನ್‌ಹೋಲ್ ತೆರೆಯಲಾಗಿತ್ತು. ಹೆಚ್ಚು ಮಳೆ ಬಂದು ಅವರ ಟೆಂಟ್‌ನಲ್ಲಿದ್ದ ಹಣ, ವಸ್ತುಗಳೆಲ್ಲವೂ ನೀರಿನ ಪಾಲಾಗಿತ್ತು. ಆದರೂ ಏಳು ತಾಸುಗಳಷ್ಟು ರಸ್ತೆಯಲ್ಲೇ ನಿಂತು ಅಪಾಯವನ್ನು ತಪ್ಪಿಸಿದ್ದಾರೆ.

ನನ್ನ ಮೂವರು ಮಕ್ಕಳ ಶಿಕ್ಷಣಕ್ಕಾಗಿ ಹೂವನ್ನು ಮಾರಿ ಜೀವನ ನಡೆಸುತ್ತಿದ್ದೇನೆ. ನನ್ನ ಐವರು ಮಕ್ಕಳಿಗೂ ಮದುವೆಯಾಗಿದೆ. ನಾನೊಬ್ಬಳೇ ಮನೆಗೆ ಆಧಾರ, ಪತಿಗೆ ರೈಲು ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದಾರೆ. ಬಿಎಂಸಿ ಅಧಿಕಾರಿಗಳು ಮ್ಯಾನ್‌ ಹೋಲ್‌ ತೆರೆದಿರುವುದಕ್ಕೆ ಬಂದು ಗಲಾಟೆ ಮಾಡಿದ್ದರು. ಆದರೆ ನಾನು ನನಗೆ ಸರಿ ಅನಿಸಿದ್ದನ್ನು ನಾನು ಮಾಡಿದ್ದೇನೆ ಎಂದು ಕಾಂತಾ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+