ರೈಲ್ವೆ ಪ್ಲ್ಯಾಟ್‌ಫಾರಂಗಳ ನಡುವೆ ಸಿಲುಕಿದ್ದ ವ್ಯಕ್ತಿ ಪವಾಡ ರೀತಿಯಲ್ಲಿ ಪಾರು
ಅಸನ್ಗಾವ್, ಜೂನ್ 28: ರೈಲ್ವೆ ಹಳಿಯನ್ನು ದಾಟಬೇಕೆನ್ನುವಷ್ಟರಲ್ಲಿ ಬಂದ ರೈಲು ಹಳಿಗಳ ಮಧ್ಯೆ ಸಿಲುಕಿದ್ದ ವ್ಯಕ್ತಿ ಪವಾಡ ರೀತಿಯಲ್ಲಿ ಪಾರಾಗಿರುವ ಘಟನೆ ಅಸನ್ಗಾವ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ರೈಲ್ವೆ ಹಳಿಯನ್ನು ದಾಟಬೇಕು ಎಂದು ವ್ಯಕ್ತಿಯೊಬ್ಬ ಪ್ಲ್ಯಾಟ್‌ಫಾರಂನಿಂದ ಕೆಳಗಿಳಿದಿದ್ದೇ ತಡ ರೈಲು ಬಂದೇ ಬಿಟ್ಟಿತ್ತು, ಜನರೆಲ್ಲರೂ ಆತನನ್ನೇ ವೀಕ್ಷಿಸುತ್ತಿದ್ದರು. ಅವರಿಗೆ ಮೇಲಕ್ಕೆ ಹತ್ತಲು ಸಾಧ್ಯವಾಗಲಿಲ್ಲ. ರೈಲು ಅಲ್ಲಿಂದ ಹೊರ ಬಳಿಕ ಆತನ ಬದುಕಿರುವುದು ಸುಳ್ಳು ಎಂದು ಜನರು ಗಾಬರಿಯಿಂದ ವೀಕ್ಷಿಸಿದರೆ ಪವಾಡವೆಂಬಂತೆ ಅಲ್ಲಿಂದ ಎದ್ದು ಹಳಿ ಕ್ರಾಸ್ ಮಾಡಿ ಹೋಗಿದ್ದಾರೆ.

ರೈಲಿನಿಂದ ಇಳಿಯುವಾಗ ಆಯತಪ್ಪಿ ಬೀಳುತ್ತಿದ್ದವರನ್ನು ರೈಲ್ವೆ ಪೊಲೀಸರು ರಕ್ಷಿಸಿರುವ ಎಷ್ಟೋ ಉದಾಹರಣೆಗಳಿವೆ. ಆದರೆ ಯಾವತ್ತೂ ರೈಲು ಹಳಿ ಕ್ರಾಸಿಂಗ್, ಅಥವಾ ರೈಲನ್ನು ಇಳಿಯುವಾಗ, ಹತ್ತುವಾಗ ಎಚ್ಚರಿಕೆವಹಿಸುವುದು ಉತ್ತಮ ಸ್ವಲ್ಪ ಎಡವಿದರೂ ಜೀವಕ್ಕೆ ಕುತ್ತು ಬರುವುದಂತೂ ಸತ್ಯ.












Click it and Unblock the Notifications