ವಿಡಿಯೋ ಸಂದೇಶ ರೆಕಾರ್ಡ್ ಮಾಡಿ ರೈಲಿನ ಮುಂದೆ ಜಿಗಿದ ಯುವಕ
ಥಾಣೆ, ಡಿಸೆಂಬರ್ 8: ಇಪ್ಪತ್ತು ವರ್ಷದ ಯುವಕನೊಬ್ಬ ವಿಡಿಯೋ ಸಂದೇಶ ಚಿತ್ರೀಕರಿಸಿ ಚಲಿಸುತ್ತಿರುವ ರೈಲಿ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಗುರುವಾರ ಹಳಿ ಮೇಲೆ ಛಿದ್ರವಾಗಿ ಬಿದ್ದಿದ್ದ ಮೃತದೇಹ ಕಂಡುಬಂದ ಬಳಿಕವೇ ಈ ಘಟನೆ ಬೆಳಕಿಗೆ ಬಂದಿದೆ.
ಆ ಯುವಕನನ್ನು ರೋಹಿತ್ ಪರ್ದೇಶಿ ಎಂದು ಗುರುತಿಸಲಾಗಿದ್ದು, ಆತ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಆತ ಮೊಬೈಲ್‌ನಲ್ಲಿ ವಿಡಿಯೋ ಸಂದೇಶ ರೆಕಾರ್ಡ್ ಮಾಡಿದ್ದಾನೆ.

ರೈಲ್ವೆ ಹಳಿಯ ಒಂದು ಭಾಗದಲ್ಲಿ ರುಂಡ ಬಿದ್ದಿದ್ದರೆ, ಇನ್ನೊಂದು ಬದಿಯಲ್ಲಿ ದೇಹ ಬಿದ್ದಿದೆ. ಆತನ ಮೊಬೈಲ್ ಫೋನ್‌ಅನ್ನು ಪರಿಶೀಲಿಸಿದಾಗ ಆತ್ಮಹತ್ಯೆಗೂ ಮುನ್ನ ಆತ ವಿಡಿಯೋ ಸಂದೇಶ ದಾಖಲಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನಗೆ ಸಹೋದರ ಹೊರತಾಗಿ ಕುಟುಂಬದವರೆಂದು ಯಾರೂ ಇಲ್ಲ. ತನ್ನ ಎಲ್ಲ ಆಸ್ತಿ ಆತನಿಗೇ ಸೇರಬೇಕು ಎಂದು ಆತ ವಿಡಿಯೋದಲ್ಲಿ ಹೇಳಿಕೊಂಡಿದ್ದ. ಈ ವಿಡಿಯೋ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.












Click it and Unblock the Notifications