ಬಿಜೆಪಿ ಮುಖಂಡನ ಮಹಿಳೆ ಜತೆಗೆ ಸಲುಗೆ ವಿಡಿಯೋ ವೈರಲ್
ಮುಂಬೈ, ಜುಲೈ 4: ಚಲಿಸುತ್ತಿರುವ ಬಸ್ಸಿನಲ್ಲಿ ಮಹಿಳೆಯೊಬ್ಬರಿಗೆ ವ್ಯಕ್ತಿ ಮುತ್ತನ್ನಿಡುತ್ತಿರುವ ದೃಶ್ಯಗಳು ಒಳಗೊಂಡ ವಿಡಿಯೋ ಮಹಾರಾಷ್ಟ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಆ ಮಹಿಳೆಯು ಬಿಜೆಪಿ ಮುಖಂಡನಾಗಿರುವ ವ್ಯಕ್ತಿಯ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ.
ಮಹಿಳೆಯು ಅತ್ಯಾಚಾರ ದೂರು ದಾಖಲಿಸಿದ ನಂತರ ಬಿಜೆಪಿ ಮುಖಂಡ ರವೀಂದ್ರ ಬವಂತಾಡೆ
ತಲೆ ತಪ್ಪಿಸಿಕೊಂಡಿದ್ದಾರೆ. ಗಡ್ ಚಿರೋಲಿ ಜಿಲ್ಲೆಯ ಚಂದ್ರಾಪುರ್ ಪ್ರದೇಶದಲ್ಲಿ ಚಲಿಸುವ ಬಸ್ ನಲ್ಲಿ ರವೀಂದ್ರ ಬವಂತಾಡೆ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ದೂರನ್ನು ದಾಖಲಿಸಿದ್ದಾರೆ.

ಬಂತವಾಡೆ ಹಾಗೂ ಆ ಮಹಿಳೆ ತುಂಬ ಸಲುಗೆಯಿಂದ ಇದ್ದ ವಿಡಿಯೋ ಎಲ್ಲೆಡೆ ಹರಿದಾಡಿದ ನಂತರ ದೂರು ದಾಖಲಾಗಿದೆ. ಬಸ್ ನ ಒಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಬಿಜೆಪಿ ಮುಖಂಡ ರವೀಂದ್ರ ಬವಂತಾಡೆ
ಮುತ್ತಿಡುತ್ತಿರುವ ದೃಶ್ಯ ದಾಖಲಾಗಿದೆ. ಇತರ ಪ್ರಯಾಣಿಕರು ಕೂತು, ಈ ದೃಶ್ಯಗಳನ್ನು ನೋಡುತ್ತಿದ್ದಾರೆ.
ಮದುವೆ ಆಗುತ್ತೇನೆ, ಕೆಲಸ ಕೊಡಿಸುತ್ತೇನೆ ಎಂದು ಬಂತವಾಡೆ ಮಾತು ಕೊಟ್ಟಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದು, ಪೊಲೀಸರು ಪ್ರಕರಣದ ಬಗ್ಗೆ ಬಾಯಿ ಬಿಡುತ್ತಿಲ್ಲ. ಇನ್ನು ಬಿಜೆಪಿಯ ಸ್ಥಳೀಯ ಮುಖಂಡರು ಸಹ ಘಟನೆ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.












Click it and Unblock the Notifications