• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಂಗ್ಲಾದಿಂದ ಕೊವಿಡ್ ಔಷಧಿ 'ರೆಮ್‌ಡೆಸಿವಿರ್' ತರಿಸಿಕೊಂಡ ಮಹಾರಾಷ್ಟ್ರ

|

ಮುಂಬೈ, ಜೂನ್ 12: ಕೊವಿಡ್ 19 ವಿರುದ್ಧದ ಯುದ್ಧದಲ್ಲಿ ಯಶಸ್ವಿಯಾಗಿದೆ ಎನ್ನಲಾದ ರೆಮ್‌ಡೆಸಿವಿರ್ ಔಷಧವನ್ನು ಮಹಾರಾಷ್ಟ್ರವು ಬಾಂಗ್ಲಾದಿಂದ ತರಿಸಿಕೊಂಡಿದ್ದು ಪ್ರಯೋಗವನ್ನು ಆರಂಭಿಸಿದೆ.

   Jonty Rhodes Shares Viral Video Of People Playing Cricket In Quarantine | Oneindia Kannada

   ಕ್ಲಿನಿಕಲ್ ನಿರ್ವಹಣೆಯನ್ನು ಪರಿಶೀಲಿಸುವ ವೈದ್ಯರನ್ನು ಒಳಗೊಂಡ ರಾಜ್ಯದ ಕೊವಿಡ್ 19 ಕಾರ್ಯಪಡೆ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಔಷಧಿಯನ್ನು ಬಳಕೆ ಮಾಡಲು ಸಲಹೆ ನೀಡಿದ್ದಾರೆ.

   ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ: ಜೂನ್ 11ರಂದು ದಾಖಲೆಯ ಕೇಸ್ ವರದಿ

   ಮಹಾರಾಷ್ಟ್ರದಲ್ಲಿ ಒಟ್ಟು 3 ಸಾವಿರ ಸ್ಯಾಂಪಲ್‌ಗಳು ದೊರೆತಿವೆ. ಶೀಘ್ರ ಮತ್ತೆ 10 ಸಾವಿರ ಔಷಧವನ್ನು ನೀಡಲಾಗುತ್ತದೆ. ಭಾರತದಲ್ಲಿ ಈ ಔಷಧವನ್ನು ತಯಾರಿಸಿದ ಕಾರಣ ಬಾಂಗ್ಲಾದೇಶದಿಂದ ತರಿಸಿಕೊಳ್ಳಲಾಗುತ್ತಿದೆ. ಇವುಗಳನ್ನು 18 ವೈದ್ಯಕೀಯ ಕಾಲೇಜುಗಳಿಗೆ ನೀಡಲಾಗುತ್ತದೆ.

   ಮಹಾರಾಷ್ಟ್ರದಲ್ಲಿ ಒಟ್ಟು 97 ಸಾವಿರ ಕೊರೊನಾ ಸೋಂಕಿತ ಪ್ಕರಣಗಳಿದ್ದು, ಸಾವಿನ ಪ್ರಮಾಣ 3.7ಕ್ಕೆ ಏರಿಕೆಯಾಗಿದೆ. ಸೋಂಕು ನಿಯಂತ್ರಣವಾಗುತ್ತಿಲ್ಲದ ಕಾರಣ ಕಳವಳ ಉಂಟಾಗಿದೆ.

   ಮಹಾರಾಷ್ಟ್ರವು ಬಾಂಗ್ಲಾದೇಶದಿಂದ 10 ಸಾವಿರ ಬಾಟಲಿಗಳನ್ನು ಸಂಗ್ರಹಿಸಲಿದೆ ಎಂದು ಆರೋಗ್ಯ ಸಚಿವ ರಾಜೇಶ್ ತಿಳಿಸಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ ರೆಮ್‌ಡೆಸಿವಿರ್ ಔಷಧವನ್ನು ಸಕಾರಾತ್ಮಕ ಪರಿಣಾಮವನ್ನುಂಟುಮಾಡಲಿದೆ.

   ಬಡ ಹಾಗೂ ಅಗತ್ಯವಿರುವ ಜನರಿಗೆ ಕೈಗೆಟುಕುವ ದರದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ಯಾರಿಗೆ ಕೃತಕ ಉಸಿರಾಟದ ಅಗತ್ಯವಿರುತ್ತದೆಯೋ ಅಂತವರಿಗೆ ಈ ಔಷಧ ನೀಡಿದರೆ ಹೆಚ್ಚು ಉತ್ತಮ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

   English summary
   Maharashtra will begin trials for remdesivir, a drug that has been touted as a success in the battle against COVID-19.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X