ಶಿವಸೇನಾ ಜತೆ ಸರ್ಕಾರ ರಚಿಸಲು ಬಯಕೆ ವ್ಯಕ್ತಪಡಿಸಿದ ಪವಾರ್

ಮುಂಬೈ, ನವೆಂಬರ್ 11: ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳು ಕುತೂಹಲಕಾರಿ ಘಟ್ಟ ತಲುಪಿದೆ. ಸರ್ಕಾರರ ರಚನೆಯ ಕಸರತ್ತು ತೀವ್ರವಾಗಿರುವ ಬೆನ್ನಲ್ಲೇ ಯಾವ ರಾಜಕೀಯ ಪಕ್ಷಗಳೂ ಸರ್ಕಾರ ರಚಿಸುವ ಸಾಧ್ಯತೆ ಕ್ಷೀಣಿಸುತ್ತಿವೆ.

ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ, ತಾನು ಸರ್ಕಾರ ರಚಿಸುವುದಿಲ್ಲ ಎಂದು ರಾಜ್ಯಪಾಲರಿಗೆ ಮಾಹಿತಿ ನೀಡಿದೆ. ಬಿಜೆಪಿಯ ಮಿತ್ರಪಕ್ಷವಾಗಿದ್ದ ಶಿವಸೇನಾ, ಮೈತ್ರಿ ಮುರಿದುಕೊಂಡು ಎನ್‌ಸಿಪಿ ಮತ್ತು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವ ಕಸರತ್ತು ನಡೆಸಿದೆ. ಆದರೆ, ಎನ್‌ಸಿಪಿ ಬೆಂಬಲ ಸಿಕ್ಕಿದ್ದರೂ, ಕಾಂಗ್ರೆಸ್ ಇನ್ನೂ ತನ್ನ ಬೆಂಬಲದ ಬಗ್ಗೆ ಖಚಿತವಾಗಿ ತಿಳಿಸಿಲ್ಲ. ಸರ್ಕಾರ ರಚನೆಗೆ ಹೆಚ್ಚುವರಿ ಸಮಯ ನೀಡುವಂತೆ ಶಿವಸೇನಾದ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ.

 Maharashtra Political Crisis Shiv Sena NCP Congress Live Updates in Kannada

Breaking: ಮಹಾರಾಷ್ಟ್ರಕ್ಕೆ ಉದ್ಧವ್ ಠಾಕ್ರೆ ಸಿಎಂ, ಅಜಿತ್ ಪವಾರ್ ಡಿಸಿಎಂ?

ಇದರ ನಡುವೆ ರಾಜ್ಯಪಾಲರು ಮೂರನೇ ಅತಿ ದೊಡ್ಡ ಪಕ್ಷವಾದ ಎನ್‌ಸಿಪಿಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ್ದಾರೆ. ಒಂದು ವೇಳೆ ಯಾವ ಪಕ್ಷವೂ ಸರ್ಕಾರ ಸಚಿಸುವುದು ಸಾಧ್ಯವಾಗದೆ ಹೋದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ.

Nov 11, 2019, 11:39 pm IST

ರೀಟ್ರೀಟ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಶಿವಸೇನಾದ ಶಾಸಕರನ್ನು ಭೇಟಿಯಾಗಲು ಏಕನಾಥ್ ಶಿಂಧೆ ಮತ್ತು ಆದಿತ್ಯ ಠಾಕ್ರೆ ಹೋಟೆಲ್ ಕಡೆ ಪ್ರಯಾಣ ಬೆಳೆಸಿದ್ದಾರೆ.
Nov 11, 2019, 11:38 pm IST

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿದ ಎನ್‌ಸಿಪಿ ಮುಖ್ಯಸ್ಥ ಶರದ್ ಯಾದವ್, ಅವರ ಜತೆಗೂಡಿ ಸರ್ಕಾರ ರಚಿಸುವ ಬಯಕೆ ಹಂಚಿಕೊಂಡರು. ಕಾಂಗ್ರೆಸ್ ಶಾಸಕರೊಂದಿಗೆ ಎನ್‌ಸಿಪಿ ಸಂಪರ್ಕದಲ್ಲಿದೆ ಎಂದು ತಿಳಿಸಿದರು.
Nov 11, 2019, 9:59 pm IST

ಮಹಾರಾಷ್ಟ್ರದ ರಾಜಕೀಯ ಸ್ಥಿತಿಗತಿಯ ಕುರಿತು ಚರ್ಚಿಸಲು ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ಕೋರ್ ಸಮೂಹದ ಸಭೆ ಆಯೋಜಿಸಲಾಗಿದೆ.
Nov 11, 2019, 9:57 pm IST

ಸರ್ಕಾರ ರಚನೆಗೆ ಎನ್‌ಸಿಪಿಗೆ ಆಹ್ವಾನ ನೀಡಿದ ಕುರಿತು ಮಹಾರಾಷ್ಟ್ರ ರಾಜ್ಯಪಾಲರ ಕಚೇರಿ ಪತ್ರಿಕಾ ಹೇಳಕೆ ಹೊರಡಿಸಿದೆ. 16 ದಿನ ಕಳೆದರೂ ಯಾವುದೇ ರಾಜಕೀಯ ಪಕ್ಷ ಅಥವಾ ಮೈತ್ರಿ ಪಕ್ಷಗಳು ಸರ್ಕಾರ ರಚನೆಗೆ ಅಗತ್ಯ ಬೆಂಬಲವಿರುವ ಪತ್ರವನ್ನು ನೀಡಿಲ್ಲ. ಶಿವಸೇನಾ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಆಸಕ್ತಿ ಇರುವ ಪತ್ರವನ್ನು ಸಲ್ಲಿಸಿದ್ದರೂ, ತಮ್ಮ ಮಿತ್ರಪಕ್ಷಗಳಿಂದ ಬೆಂಬಲ ಇರುವ ಬಗ್ಗೆ ಪತ್ರ ಸಲ್ಲಿಸಿಲ್ಲ. ಹೀಗಾಗಿ ರಾಜ್ಯಪಾಲರು ಮೂರನೇ ಅತ್ಯಂತ ದೊಡ್ಡ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Nov 11, 2019, 9:43 pm IST

ಹಂಗಾಮಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್, ಹಿರಿಯ ಮುಖಂಡರಾದ ಸುಧೀರ್ ಮುಂಗಂಟಿವರ್, ಆಶೀಶ್ ಶೆಲಾರ್, ವಿನೋದ್ ತಾವ್ಡೆ, ಪಂಕಜಾ ಮುಂಡೆ ಮತ್ತು ಗಿರೀಶ್ ಮಹಾಜನ್ ಸಭೆಯಲ್ಲಿ ಪಾಲ್ಗೊಂಡಿದ್ದರು.
Nov 11, 2019, 9:41 pm IST

ಬಿಜೆಪಿಯ ಕೋರ್ ಕಮಿಟಿ ಸಭೆ ಮುಕ್ತಾಯಗೊಂಡಿದೆ. ಮಹಾರಾಷ್ಟ್ರದ ರಾಜಕೀಯ ಸ್ಥಿತಿಗತಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸದ್ಯದ ಬೆಳವಣಿಗೆಯಲ್ಲಿ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಿದೆ.
Nov 11, 2019, 9:36 pm IST

ರಾಜ್ಯಪಾಲರ ಆಹ್ವಾನದಂತೆ ರಾಜಭವನಕ್ಕೆ ತೆರಳಿರುವ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕರು ಸರ್ಕಾರ ರಚನೆಗೆ ಕುರಿತು ಮಾತುಕತೆ ನಡೆಸಲಿದ್ದಾರೆ.
Nov 11, 2019, 9:29 pm IST

ನಾವು ಮೂರನೇ ಅತಿದೊಡ್ಡ ಪಕ್ಷವಾಗಿರುವುದರಿಂದ ರಾಜ್ಯಪಾಲರು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ನಮಗೆ ಆಹ್ವಾನ ನೀಡಿದ್ದಾರೆ. ನಾವು ನಮ್ಮ ಮಿತ್ರಪಕ್ಷಗಳೊಂದಿಗೆ ಮಾತುಕತೆ ನಡೆಸಬೇಕಿದ್ದು, ಆದಷ್ಟು ಬೇಗನೆ ಅವರ ಬಳಿ ಬರುವುದಾಗಿ ವಿವರಣೆ ನೀಡಲಿದ್ದೇವೆ. ನಾಳೆ ರಾತ್ರಿ 8.30ಕ್ಕೆ ಅವರು ನೀಡಿದ ಗಡುವು ಮುಗಿಯಲಿದೆ- ಎನ್‌ಸಿಪಿ ನಾಯಕ ಜಯಂತ್ ಪಾಟೀಲ್
Nov 11, 2019, 9:26 pm IST

ಶಿವಸೇನಾದ ಮುಖಂಡರು ಮಂಗಳವಾರ ಪುನಃ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಸಮಯ ನೀಡುವಂತೆ ಕೋರಲು ನಿರ್ಧರಿಸಿದ್ದಾರೆ.
Nov 11, 2019, 8:50 pm IST

ರಾಜ್ಯಪಾಲರನ್ನು ಭೇಟಿ ಮಾಡಲು ಹೊರಟ ಎನ್‌ಸಿಪಿ ನಾಯಕರು. ತಮ್ಮನ್ನು ಭೇಟಿ ಮಾಡುವಂತೆ ರಾಜ್ಯಪಾಲರು 8.30ಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ಛಗನ್ ಭುಜ್‌ಬಲ್, ಜಯಂತ್ ಪಾಟೀಲ್ ಮತ್ತಿತರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಲು ತೆರಳುತ್ತಿದ್ದೇನೆ. ಅವರು ನಮಗೆ ಏಕೆ ಕರೆದಿದ್ದಾರೋ ನಮಗೆ ತಿಳಿದಿಲ್ಲ. ರಾಜ್ಯಪಾಲರು ಪ್ರಮುಖ ವ್ಯಕ್ತಿಯಾಗಿರುವುದರಿಂದ ಅವರ ಭೇಟಿಗೆ ಹೋಗುತ್ತಿದ್ದೇವೆ - ಅಜಿತ್ ಪವಾರ್
Nov 11, 2019, 8:46 pm IST

ಒಂದು ವೇಳೆ ಎನ್‌ಸಿಪಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ವಿಫಲವಾದರೆ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಶಿಫಾರಸು ಮಾಡುವ ಸಾಧ್ಯತೆ ಇದೆ.
Nov 11, 2019, 8:46 pm IST

ಸರ್ಕಾರ ರಚನೆಯ ಹಕ್ಕು ಮಂಡಿಸಲು ಎನ್‌ಸಿಪಿಗೆ ಆಹ್ವಾನ ನೀಡಿರುವ ರಾಜ್ಯಪಾಲರು, 24 ಗಂಟೆಗಳ ಕಾಲಾವಕಾಶ ನೀಡಿದ್ದಾರೆ.
Nov 11, 2019, 8:46 pm IST

ಎನ್‌ಸಿಪಿ 54 ಸದಸ್ಯರ ಬಲವನ್ನು ಹೊಂದಿದ್ದು, ಮೂರನೇ ಅತಿ ದೊಡ್ಡ ಪಕ್ಷವಾಗಿದೆ.
Nov 11, 2019, 8:46 pm IST

ಈ ನಡುವೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಎನ್‌ಸಿಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ.
Nov 11, 2019, 8:45 pm IST

ಸರ್ಕಾರ ರಚನೆಗೆ ಶಿವಸೇನಾಗೆ ಹೆಚ್ಚುವರಿ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಹೇಳಿರುವುದಾಗಿ ರಾಜಭವನದ ಪತ್ರಿಕಾ ಹೇಳಿಕೆ ತಿಳಿಸಿದೆ.
Nov 11, 2019, 8:45 pm IST

ಕಾಂಗ್ರೆಸ್ ಮತ್ತು ಎನ್‌ಸಿಪಿ ಮುಖಂಡರು ಮಂಗಳವಾರ ಮತ್ತೆ ಮಾತುಕತೆ ನಡೆಸಲಿದ್ದು, ಶಿವಸೇನಾಗೆ ಬೆಂಬಲ ನೀಡುವುದರ ಕುರಿತು ತೀರ್ಮಾನ ತೆಗೆದುಕೊಳ್ಳಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+