'ಜಾನಿ ಜಾನಿ ಎಸ್ ಪಪ್ಪಾ': ಜನರಿಗೆ ಮಹಾರಾಷ್ಟ್ರ ಪೊಲೀಸರ ಪಾಠ

ಮುಂಬೈ, ಏಪ್ರಿಲ್ 13: ಮಹಾರಾಷ್ಟ್ರ ಪೊಲೀಸರು ಜನರಿಗೆ 'ಜಾನಿ ಜಾನಿ ಎಸ್ ಪಪ್ಪಾ' ಎಂಬ ಮಕ್ಕಳ ಪದ್ಯವನ್ನು ಪಾಠ ಹೇಳಿದ್ದಾರೆ. ಈ ರೀತಿಯಾಗಿ ಕೊರೊನಾ ವೈರಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ.

ಕೊರೊನಾ ಬಗ್ಗೆ ಜನರಿಗೆ ಬುದ್ದಿ ಹೇಳಲು ಮಹಾರಾಷ್ಟ್ರ ಪೊಲೀಸರು 'ಜಾನಿ ಜಾನಿ ಎಸ್‌ ಪಪ್ಪಾ' ಪದ್ಯವನ್ನು ಬಳಸಿಕೊಂಡಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರ ಪೊಲೀಸ್ ಇಲಾಖೆ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಜಾನಿ ರೀತಿಯೇ ಜನರು ಇರಲು ಹೇಳಿದ್ದಾರೆ.

Maharashtra Police Spread Awareness By Using Johnny Johnny Yes Papa rhyme

''ಜಾನಿ ಜಾನಿ
ಎಸ್ ಪಪ್ಪಾ
ಗೋಯಿಂಗ್ ಔಟ್?
ನೋ ಪಪ್ಪಾ
ಶೇರಿಂಗ್ ಫಾರ್ವರ್ಡ್?
ನೋ ಪಪ್ಪಾ
ವಾಶ್ ಯುವರ್ ಹ್ಯಾಂಡ್ಸ್
ಯ ಯ ಯ''

ಎಂದು ಪೊಲೀಸರು ಟ್ವಿಟ್ಟರ್ ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಿಂದ ಜನರಿಗೆ ಹೊರಗೆ ಬರಬಾರದು, ವೈರಸ್ ಹರಡಿಸಬಾರದು ಹಾಗೂ ಹಾಗಾಗಿ ಕೈ ತೊಳೆಯಬೇಕು ಎಂದು ತಿಳಿಸಿದ್ದಾರೆ. ಪೊಲೀಸರು ಈ ರೀತಿ ಕ್ರಿಯೇಟವ್ ಆಗಿ ಜನರಿಗೆ ಅರಿವು ಮೂಡಿಸಿದ್ದು, ಅನೇಕರಿಗೆ ಮೆಚ್ಚುಗೆಯಾಗಿದೆ.

ಅಂದಹಾಗೆ, ಭಾರತದಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯವಾಗಿದೆ. ಬರೋಬ್ಬರಿ 1985 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. 149 ಜನರು ನಿಧನ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+