Viral Video: ಕೆಟ್ಟು ನಿಂತ ಹೊಸ ಸ್ಕೂಟರಿಗೆ "ಕತ್ತೆ"ಯೇ ಸಾರಥಿ!
ಮುಂಬೈ, ಏಪ್ರಿಲ್ 26: ಓಲಾ ಸೇವೆಯಿಂದ ಆಸತ್ತು-ಬೇಸತ್ತು ಹೋದ ವ್ಯಕ್ತಿಯೊಬ್ಬ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕತ್ತೆಯ ಕೊರಳಿಗೆ ಕಟ್ಟಿ ಎಳೆದುಕೊಂಡು ಹೋಗಿರುವ ಘಟನೆಯು ಮಹಾರಾಷ್ಟ್ರದ ಪರ್ಲಿ ವೈಜನಾಥ್ ಎಂಬಲ್ಲಿ ನಡೆದಿದೆ.
ಕೇವಲ 15 ದಿನಗಳ ಹಿಂದೆಯಷ್ಟೇ ಖರೀದಿಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕೆಟ್ಟು ನಿಂತಿದ್ದು, ಸರಿಯಾದ ಸೇವೆಯನ್ನು ಒದಗಿಸದ ಕಂಪನಿಯ ವಿರುದ್ಧ ಸಚಿನ್ ಗಿಟ್ಟೆ ಎನ್ನುವವರು ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೋಷಪೂರಿತ ಇ-ಸ್ಕೂಟರ್‌ಗೆ ಕತ್ತೆಯನ್ನು ಕಟ್ಟಿ, ಕಂಪನಿಯನ್ನು ನಂಬಬೇಡಿ ಎಂದು ಜನರನ್ನು ಒತ್ತಾಯಿಸುವ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳೊಂದಿಗೆ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ. ಕತ್ತೆ ಕೊರಳಿಗೆ ಸ್ಕೂಟರ್ ಅನ್ನು ಕಟ್ಟಿಕೊಂಡು ಬೀದಿ ಎಲ್ಲಾ ಸುತ್ತಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.













Click it and Unblock the Notifications