ನೋಟು ನೆಕ್ಕಿ ಕೊರೊನಾವೈರಸ್ ಹರಡಿಸಿ ಎಂದಿದ್ದ ವ್ಯಕ್ತಿ ಬಂಧನ
ನಾಸಿಕ್, ಏಪ್ರಿಲ್ 5: ''ಕೊರೊನಾವೈರಸ್ ಎಂಬುದು ಅಲ್ಲಾಹ್ ನೀಡಿದ ಒಂದು ಶಿಕ್ಷೆ, ಇದಕ್ಕೆ ಮದ್ದು ಇಲ್ಲ ಎನ್ನುತ್ತಾ ಕರೆನ್ಸಿ ನೋಟು ನೆಕ್ಕಿ, ಮೂಗು ಒರೆಸಿಕೊಂಡು ಟಿಕ್ ಟಾಕ್ ವಿಡಿಯೋ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಸಯ್ಯದ್ ಜಮೀಲ್ ಸಯ್ಯದ್ ಬಾಬು ಎಂದು ಗುರುತಿಸಲಾಗಿದೆ.
ಮಲೆಂಗಾವ್ ನ ರಂಜನಪುರದ ಪೊಲೀಸರು ಈತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. 38 ವರ್ಷ ವಯಸ್ಸಿನ ಬಂಧಿತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಏಪ್ರಿಲ್ 7ರ ತನಕ ಪೊಲೀಸ್ ಕಸ್ಟಡಿಯಲ್ಲಿರಲಿದ್ದಾನೆ.

ವೈರಲ್ ವಿಡಿಯೋ: ದೆಹಲಿಯ ತಬ್ಲಿಘಿ ಜಮಾತ್ ಘಟನೆಯ ಬಗ್ಗೆ ಎಲ್ಲರೂ ಆತಂಕಗೊಂಡಿರುವ ಸಂದರ್ಭದಲ್ಲಿ ಸಯ್ಯದ್ ಮಾಡಿದ್ದ ಟಿಕ್ ಟಾಕ್ ವಿಡಿಯೋ ವೈರಲ್ ಆಗಿತ್ತು. ಟಿಕ್ ಟಾಕ್ ವಿಡಿಯೋದಲ್ಲಿ ಕರೆನ್ಸಿ ನೋಟು ನೆಕ್ಕಿ ಕೊರೊನಾ ಹರಡಿಸಿ ಎಂದು ಕರೆ ನೀಡಿದ್ದ. ಇದು ಅಲ್ಲಾಹ್ ನೀಡಿರುವ ಪರಿಹಾರವೇ ಇಲ್ಲ ಶಿಕ್ಷೆ ಎಂದಿದ್ದ. ವಿಡಿಯೋ ಬಗ್ಗೆ ಸಹಜವಾಗಿ ಆತಂಕ ಮೂಡಿ, ಸಾರ್ವಜನಿಕರು ಈ ಬಗ್ಗೆ ದೂರಿದ್ದರು.
ನಾಸಿಕ್ ನ ಸೈಬರ್ ಪೊಲೀಸ್ ಘಟಕದ ಸಿಬ್ಬಂದಿ, ವಿಡಿಯೋ ಎಲ್ಲಿಂದ ಮೊದಲಿಗೆ ಹಂಚಿಕೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿದರು. ನಂತರ ಸೈಯದ್ ಇರುವಿಕೆ ಬಗ್ಗೆ ತಿಳಿದು, ಆತನನ್ನು ಬಂಧಿಸಿದ್ದಾರೆ. ಸೈಯಕ್ ವಿರುದ್ಧ ಐಪಿಸಿ ಸೆಕ್ಷನ್ 153 ಹಾಗೂ 188ಅಡಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications