ದುಷ್ಕರ್ಮಿ ಹಚ್ಚಿದ್ದ ಬೆಂಕಿಯಲ್ಲಿ ಬೆಂದು ಹೋಗಿದ್ದ ಉಪನ್ಯಾಸಕಿ ಸಾವು

ಮುಂಬೈ, ಫೆಬ್ರವರಿ 10: ದುಷ್ಕರ್ಮಿಗಳು ಹಚ್ಚಿದ್ದ ಬೆಂಕಿಯಿಂದ ಗಾಯಗೊಂಡಿದ್ದ ಕಾಲೇಜು ಉಪನ್ಯಾಸಕಿ ಆಸ್ಪತ್ರೆಯಲ್ಲಿ ಇಂದು ಅಸುನೀಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಆತ ಉಪನ್ಯಾಸಕಿ ಹಿಂದೆ ಬಿದ್ದಿದ್ದ, ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ.ಕಳೆದ ಸೋಮವಾರ ಉಪನ್ಯಾಸಕಿ ಕಾಲೇಜಿಗೆ ಹೊರಟಿದ್ದರು. ಆರೋಪಿ ವಿಕ್ಕಿ ಬೈಕಿನಲ್ಲಿ ಬಂದು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ, ಉಪನ್ಯಾಸಕಿ ದೇಹವು ಶೇ.40ರಷ್ಟು ಸುಟ್ಟು ಹೋಗಿತ್ತು. ಕಾಲೇಜಿನಿಂದ 77 ಕಿ.ಮೀ ದೂರದಲ್ಲಿದ್ದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.

ಬೆಳಗ್ಗೆ 6.55ರ ಮೃತಪಟ್ಟಿದ್ದಾರೆ. ಪೊಲೀಸರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಘಟನೆ ನಡೆದು ಒಂದು ಗಂಟೆಯ ಒಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಉಪನ್ಯಾಸಕಿಗೆ ಆತ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆರೋಪಿ ಕಳೆದ ವರ್ಷ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನುವುದು ತಿಳಿದುಬಂದಿದೆ.

Maharashtra Lecturer Who Was Set On Fire By Stalker Dies

ಘಟನೆ ನಡೆದ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಗುರುವಾರ ಉಪನ್ಯಾಸಕರು, ಹಾಗೂ ಮಹಿಳೆಯರು ಪ್ರತಿಭಟನೆ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+