ವಧುವನ್ನು ಮಂಟಪಕ್ಕೆ ಕರೆತರಲು ಹೆಲಿಕಾಪ್ಟರ್ ಕಳಿಸಿದ ವರ!
ಸೊಲ್ಲಾಪುರ(ಮಹಾರಾಷ್ಟ್ರ), ಜೂನ್ 10: ತಾನು ಮದುವೆಯಾಗುವ ಹುಡುಗಿಯನ್ನು ಮಂಟಪಕ್ಕೆ ಕರೆತರಲು ವಾಹನ ಕಳಿಸುವುದು ಸರ್ವೇ ಸಾಮಾನ್ಯ ಆದರೆ ಇಲ್ಲೊಬ್ಬ ರೈತನ ಮಗ ವಧುವನ್ನು ಮಂಟಪಕ್ಕೆ ಕರೆತರಲು ಹೆಲಿಕಾಪ್ಟರ್ ಅನ್ನೇ ಕಳಿಸಿದ್ದಾನೆ.
ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಬಳಿಯ ಪಾಂಡವಪುರದಲ್ಲಿ ಈ ಘಟನೆ ನಡೆದಿದ್ದು, ವಧುವನ್ನು ಕರೆತರಲು ಹೆಲಿಕಾಪ್ಟರ್ ಕಳಿಸಿದ್ದಾನೆ. ಹೆಲಿಕಾಫ್ಟರ್ ಕಳುಹಿಸಿದ ವರನ ಉದ್ಯೋಗ ಕೃಷಿ!
ವಧು ಐಶ್ವರ್ಯ ಉತ್ತಮವಾಗಿ ಓದಿಕೊಂಡಾಕೆ, ವರ ನಿತಿನ್ ಸಹ ಎಂಬಿಎ ಪದವಿ ಗಳಿಸಿದ್ದಾರೆ ಆದರೆ ಕೃಷಿಯನ್ನೇ ನಂಬಿ ತಮ್ಮ ಹಳ್ಳೀ ಉಪ್ಲಾಯಿಯಲ್ಲಿ ಕೃಷಿ ಮಾಡುತ್ತಿದ್ದಾರೆ.

ತಮ್ಮ ಮದುವೆ ಭಾರಿ ವಿಶಿಷ್ಟವಾಗಿರಬೇಕು ಎಂದು ನಿರ್ಧರಿಸಿದ್ದ ನಿತಿನ್ ವಧುವನ್ನು ಕರೆತರಲು ಹೆಲಿಕಾಪ್ಟರ್ ಕಳುಹಿಸಿದ್ದ, ಹೆಲಿಕಾಫ್ಟರ್ ಅನ್ನು ನೋಡಲು ಇಡೀಯ ಊರೆ ಸೇರಿತ್ತು.
ವರ ಕುದುರೆಯ ಮೇಲೆಯೋ, ಐಶಾರಾಮಿ ಕಾರಿನಲ್ಲಿಯೋ, ಅಲಂಕೃತ ಬಂಡಿಯಲ್ಲಿಯೋ ಬರುತ್ತಾನೆ. ವಧು ಸಾಮಾನ್ಯವಾಗಿ ಅಲಂಕೃತ ಕಾರಿನಲ್ಲಿ ಬರುತ್ತಾರೆ. ಆದರೆ ಹೀಗೆ ಹೆಲಿಕಾಪ್ಟರ್‌ನಲ್ಲಿ ವಧುವನ್ನು ಕರೆಸಿಕೊಂಡಿದ್ದು, ಬಹುಶಃ ಇದೇ ಮೊದಲೋ ಏನೋ.












Click it and Unblock the Notifications