ಸಿನಿಮಾದಿಂದ ಪ್ರೇರಣೆ; 10 ರೂ. ನಾಣ್ಯದಲ್ಲಿ ಠೇವಣಿ ಕಟ್ಟಿದ ಅಭ್ಯರ್ಥಿ!

ಮುಂಬೈ, ಅಕ್ಟೋಬರ್ 09 : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯೊಬ್ಬರು 10 ರೂ. ನಾಣ್ಯದ ಮೂಲಕ ಠೇವಣಿ ಕಟ್ಟಿದ್ದಾರೆ. ಹತ್ತು ರೂ. ನಾಣ್ಯ ಚಲಾವಣೆ ಆಗುವುದಿಲ್ಲ ಎಂದು ಸುದ್ದಿ ಹಬ್ಬಿಸುತ್ತಿದ್ದವರಿಗೆ ಈ ಮೂಲಕ ಉತ್ತರ ಕೊಟ್ಟಿದ್ದಾರೆ.

ಲಾಥೂರ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸಂತೋಷ್ ಸಾಬ್ ಡೇ ಕಣಕ್ಕಿಳಿದಿದ್ದಾರೆ. ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದೆ. ನಾಮಪತ್ರ ಸಲ್ಲಿಕೆ ಕೊನೆ ದಿನ ಸಂತೋಷ್ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವಾಗ 10 ಸಾವಿರ ರೂ. ಠೇವಣಿ ಕಟ್ಟಬೇಕು. ಸಂತೋಷ್ 10 ರೂ. ನಾಣ್ಯದ ಮೂಲಕ ಠೇವಣಿ ಕಟ್ಟಿದರು. ಈ ಮೂಲಕ ನಾಣ್ಯಗಳು ಚಲಾವಣೆಯಲ್ಲಿವೆ ಎಂಬ ಸಂದೇಶವನ್ನು ಜನರಿಗೆ ತಿಳಿಸಿದರು.

Maharashtra elections 2019 Candidate Paid Poll Deposit In Rs 10 Coins

ಮರಾಠಿ ಭಾಷೆಯ Gallit Gondhal Dillit Mujra ಎಂಬ ಸಿನಿಮಾದಲ್ಲಿ ನಾಣ್ಯದ ಮೂಲಕ ಠೇವಣಿ ಕಟ್ಟುವ ದೃಶ್ಯವಿದೆ. ಈ ಸಿನಿಮಾದಿಂದ ಪ್ರೇರಿತಗೊಂಡು ತಾನು ಠೇವಣಿ ಕಟ್ಟಿದೆ ಎಂದು ಸಂತೋಷ್ ಹೇಳಿದ್ದಾರೆ.

28 ವರ್ಷದ ಸಂತೋಷ್ ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ. "ನಾನು ಸಿನಿಮಾ ಹಲವು ಬಾರಿ ನೋಡಿದ್ದೇನೆ. ಆದರೆ, 10 ರೂ. ನಾಣ್ಯ ಚಲಾವಣೆಯಲ್ಲಿದೆ ಎಂದು ಜನರಿಗೆ ತಿಳಿಸಲು ಠೇವಣಿ ಕಟ್ಟಿದ್ದೇನೆ" ಎಂದು ತಿಳಿಸಿದರು.

ಚುನಾವಣಾ ಆಯೋಗದ ಅಧಿಕಾರಿಗಳು ಮೊದಲು ನಾಣ್ಯದಲ್ಲಿನ ಠೇವಣಿ ಪಡೆಯಲು ನಿರಾಕರಿಸಿದರು. 1000 ರೂ. ಕಾಯಿನ್ ಕೊಡಿ, ಉಳಿದದ್ದು ನೋಟಿನಲ್ಲಿ ಕೊಡಿ ಎಂದರು. ಆದರೆ, ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಠೇವಣಿ ಕಟ್ಟಿಸಿಕೊಂಡರು.

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ವಿನಯ್ ರಾಜಾವತ್ 12, 500 ರೂ. ಶುಲ್ಕವನ್ನು 1 ಮತ್ತು 2 ರೂ. ನಾಣ್ಯದ ಮೂಲಕ ಪಾವತಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+