ಮಹಾರಾಷ್ಟ್ರದಲ್ಲಿ 1 ಲಕ್ಷ ದಾಟಿದ ಕೊರೊನಾ ವೈರಸ್ ಕೇಸ್
ಮುಂಬೈ, ಜೂನ್ 13: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಒಂದು ಲಕ್ಷ ಗಡಿ ದಾಟಿದೆ. ಒಂದು ರಾಜ್ಯದಲ್ಲಿ 3,427 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,04,568ಕ್ಕೆ ಏರಿದೆ.
Recommended Video
ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷ ಗಡಿ ದಾಟಿದ್ದು, ಮಹಾರಾಷ್ಟ್ರದಲ್ಲಿ ಒಂದರಲ್ಲಿ ಒಂದು ಲಕ್ಷ ಕೇಸ್ ದಾಖಲಾಗಿದೆ. ದಾಖಲೆಗಳ ಪ್ರಕಾರ, 96 ದಿನಗಳ ನಂತರ ಮಹಾರಾಷ್ಟ್ರದಲ್ಲಿ ಒಂದು ಲಕ್ಷ ಕೊವಿಡ್ ಸೋಂಕು ದಾಟಿದೆ.
ಮಹಾರಾಷ್ಟ್ರ ರಾಜಧಾನಿ ಮುಂಬೈ ನಗರದಲ್ಲಿ 50 ಸಾವಿರಕ್ಕೂ ಹೆಚ್ಚು ಕೇಸ್ ವರದಿಯಾಗಿದೆ. ಮುಂಬೈನಲ್ಲಿ ಇಂದು 1383 ಜನರಿಗೆ ಕೊರೊನಾ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಖಿತರ ಸಂಖ್ಯೆ 56,831ಕ್ಕೆ ಜಿಗಿದಿದೆ.

ಪುಣೆಯಲ್ಲಿ ಇಂದು 441 ಮಂದಿಗೆ ಕೊವಿಡ್ ಅಂಟಿಕೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು 11,722ಕ್ಕೆ ಏರಿದೆ. ಥಾಣೆಯಲ್ಲಿ 863 ಮಂದಿಗೆ ಸೋಂಕು ಖಚಿತವಾಗಿದ್ದು, ಒಟ್ಟು 17,306ಕ್ಕೆ ಏರಿಕೆಯಾಗಿದೆ.
ಮುಂಬೈನ ಧಾರವಿಯಲ್ಲಿ ಇಂದು 17 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಸ್ಲಂ ಪ್ರದೇಶದಲ್ಲಿ ಒಟ್ಟು 2030 ಜನರಿಗೆ ಕೊರೊನಾ ತಗುಲಿದೆ.
ಪ್ರಸ್ತುತ ಮಹಾರಾಷ್ಟ್ರದಲ್ಲಿ 49616 ಕೇಸ್‌ಗಳು ಸಕ್ರಿಯವಾಗಿದ್ದು, 47796 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ 3717 ಜನರು ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.












Click it and Unblock the Notifications