ಖಾತೆ ಹಂಚಿಕೆಯ ಸಂಭವನೀಯ ಪಟ್ಟಿ: ಅಜಿತ್‌ಗೆ ಹಣಕಾಸು ಖಾತೆ?

ಮುಂಬೈ, ಜನವರಿ 2: ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ತ್ರಿಪಕ್ಷೀಯ ಮೈತ್ರಿಕೂಟ ಸರ್ಕಾರದ ಸಂಪುಟ ವಿಸ್ತರಣೆಯ ಒಂದು ಹಂತವನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮುಗಿಸಿದ್ದಾರೆ. ಮೂರೂ ಪಕ್ಷಗಳ ನಾಯಕರಲ್ಲಿ ಅಸಮಾಧಾನ ಹೊಗೆಯಾಡುತ್ತಿರುವುದರ ನಡುವೆಯೇ 34 ಮಂದಿ ಉದ್ಧವ್ ಠಾಕ್ರೆ ಸಂಪುಟ ಸೇರ್ಪಡೆಯಾಗಿದ್ದಾರೆ.

ಈಗ ಖಾತೆ ಹಂಚಿಕೆಯ ಸವಾಲು ಎದುರಾಗಿದ್ದು, ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಹಣಕಾಸು ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆಗೆ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರಿಗೆ ಲೋಕೋಪಯೋಗಿ ಇಲಾಖೆ ಸಿಗುವ ನಿರೀಕ್ಷೆಯಿದೆ.

ಅಶೋಕ್ ಚವಾಣ್ ಅವರಿಗೆ ರಸ್ತೆ ಅಭಿವೃದ್ಧಿ ನಿಗಮ ಬಿಟ್ಟುಕೊಡುವಂತೆ ಮತ್ತು ಕೃಷಿ ಸಚಿವ ಖಾತೆಯನ್ನು ಕೂಡ ತನಗೆ ನೀಡುವಂತೆ ಶಿವಸೇನಾಗೆ ಕಾಂಗ್ರೆಸ್ ಒತ್ತಾಯಿಸಿದೆ. ಇದಕ್ಕೆ ಶಿವಸೇನಾ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

Maharashtra Cabinet Expansion Possible Portfolio Shiv Sena NCP Congress

ಮಹಾರಾಷ್ಟ್ರ ಸಂಪುಟ ವಿಸ್ತರಣೆಯ ಸಂಭವನೀಯ ಪಟ್ಟಿ ಇಲ್ಲಿದೆ.

* ಅಜಿತ್ ಪವಾರ್ (ಎನ್‌ಸಿಪಿ)- ಹಣಕಾಸು ಮತ್ತು ಯೋಜನೆ

* ಅನಿಲ್ ದೇಶಮುಖ್ (ಎನ್‌ಸಿಪಿ)- ಗೃಹ ಖಾತೆ

* ಜಯಂತ್ ಪಾಟೀಲ್ (ಎನ್‌ಸಿಪಿ)- ನೀರಾವರಿ

* ದಿಲೀಪ್ ವಲ್ಸೆ ಪಾಟೀಲ್ (ಎನ್‌ಸಿಪಿ)- ಕಾರ್ಮಿಕ ಮತ್ತು ಅಬಕಾರಿ

* ಛಗನ್ ಭುಜ್‌ಬಲ್ (ಎನ್‌ಸಿಪಿ)- ಆಹಾರ ಮತ್ತು ನಾಗರಿಕ ಪೂರೈಕೆ

* ಆದಿತ್ಯ ಠಾಕ್ರೆ (ಶಿವಸೇನಾ)- ಪರಿಸರ ಮತ್ತು ಪ್ರವಾಸ

* ಏಕನಾಥ್ ಶಿಂಧೆ (ಶಿವಸೇನಾ)- ಗ್ರಾಮೀಣ ಅಭಿವೃದ್ಧಿ

* ಸುಭಾಶ್ ದೇಸಾಯಿ (ಶಿವಸೇನಾ)- ಕೈಗಾರಿಕೆ

* ಬಾಳಾಸಾಹೇಬ್ ಥೋರಟ್ (ಕಾಂಗ್ರೆಸ್)- ಕಂದಾಯ

* ಅಶೋಕ್ ಚವಾಣ್ (ಕಾಂಗ್ರೆಸ್)- ಲೋಕೋಪಯೋಗಿ

* ಅಮಿತ್ ದೇಶಮುಖ್ (ಕಾಂಗ್ರೆಸ್)- ಪ್ರಾಥಮಿಕ ಶಾಲಾ ಶಿಕ್ಷಣ

* ನಿತಿನ್ ರಾವತ್ (ಕಾಂಗ್ರೆಸ್)- ವಿದ್ಯುತ್

* ಯಶೋಮತಿ ಠಾಕೂರ್ (ಕಾಂಗ್ರೆಸ್)- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

* ನವಾಬ್ ಮಲಿಕ್ (ಎನ್‌ಸಿಪಿ)- ಅಲ್ಪಸಂಖ್ಯಾತ ವ್ಯವಹಾರ

* ಜಿತೇಂದ್ರ ಅವ್ಹಾದ್ (ಎನ್‌ಸಿಪಿ)- ಗೃಹ ನಿರ್ಮಾಣ ಅಭಿವೃದ್ಧಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+