'ಮದ್ರಾಸ್ ಕೆಫೆ' ನಟಿ ಲೀನಾ ಪಾಲ್ ಮತ್ತೆ ಬಂಧನ
ಮುಂಬೈ, ಜೂ.2: ವಂಚನೆ ಆರೋಪದ ಮೇಲೆ 2013ರಲ್ಲಿ ಬಂಧನಕ್ಕೊಳಗಾಗಿದ್ದ ನಟಿ ಲೀಲಾ ಪಾಲ್ ಅವರು ಮತ್ತೊಮ್ಮೆ ಹಣ ಡಬ್ಲಿಂಗ್ ಅವ್ಯವಹಾರದಲ್ಲಿ ತೊಡಗಿದ ಆರೋಪದ ಮೇಲೆ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಜಾನ್ ಅಬ್ರಹಾಂ ನಾಯಕತ್ವದ ಮದ್ರಾಸ್ ಕೆಫೆ ಚಿತ್ರದಲ್ಲಿ ನಟಿಸಿದ್ದ ಲೀಲಾ ಪಾಲ್ ಹಾಗೂ ಆಕೆ ಗೆಳೆಯ ಬೆಂಗಳೂರು ಮೂಲದ ಶೇಖರ್ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದ್ದು, ಜೂನ್ 4ರ ತನಕ ಪೊಲೀಸ್ ಕಸ್ಟಡಿಯಲ್ಲಿರಬೇಕಾಗುತ್ತದೆ.
100 ರು ಹೂಡಿಕೆ ಮಾಡಿದರೆ ಇಂತಿಷ್ಟು ಕಾಲದ ನಂತರ ಡಬ್ಬಲ್ ಮೊತ್ತ ನೀಡುತ್ತೇವೆ ಎಂಬ ಆಮಿಷವೊಡ್ಡುವ ಮನಿ ಡಬ್ಲಿಂಗ್ ದಂಧೆ ನಡೆಸಿದ ಆರೋಪ ನಟಿಯ ಮೇಲಿದೆ. ಈ ಹಿಂದೆ ಲೀಲಾ ಗೆಳೆಯ ಶೇಖರ್ ಅವರು ಐಎಎಸ್ ಅಧಿಕಾರಿಯಂತೆ ನಟಿಸಿ ಬೆದರಿಸಿ ಉದ್ಯಮಿಗಳಿಂದ ಹಣ ಗಳಿಸುವ ದಂಧೆಯಲ್ಲಿ ತೊಡಗಿಕೊಂಡಿದ್ದರು.

2013ರಲ್ಲಿ ದಕ್ಷಿಣ ಭಾರತದ ಮಾಡೆಲ್ ಕಮ್ ನಟಿ ಲೀನಾ ಮರಿಯಾ ಪಾಲ್ ಹಾಗೂ ಆಕೆಯ ನಾಲ್ವರು ಖಾಸಗಿ ಅಂಗರಕ್ಷಕರ ಸಹಿತ ದಕ್ಷಿಣ ದೆಹಲಿಯ ಫಾರ್ಮ್ ಹೌಸಿನಲ್ಲಿ ಪೊಲೀಸರು ಬಂಧಿಸಿದ್ದರು. [ಫಾರ್ಮ್ ಹೌಸಿನಲ್ಲಿ ಅಂಗರಕ್ಷಕರ ಸಹಿತ ನಟಿ ಬಂಧನ]
ಚೆನ್ನೈನಲ್ಲಿ ಕೆನರಾ ಬ್ಯಾಂಕಿಗೆ 19 ಕೋಟಿ ರು ವಂಚಿಸಿ, ಐದಾರು ಐಷಾರಾಮಿ ಕಾರುಗಳನ್ನು ಖರೀದಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದರು.
ಖ್ಯಾತ ನಟ ಮೋಹನ್‌ಲಾಲ್ ಅಭಿನಯದ 'ರೆಡ್ ಚಿಲ್ಲೀಸ್' ಸೇರಿದಂತೆ ಮದ್ರಾಸ್ ಕೆಫೆ, ಹಸ್ಬೆಂಡ್ಸ್ ಇನ್ ಗೋವಾ, ಕೋಬ್ರಾ ಮುಂತಾದ ಚಿತ್ರಗಳಲ್ಲಿ ಲೀನಾ ನಟಿಸಿದ್ದಾರೆ.
ಬಂಧಿತರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ( ವಂಚನೆ), ಸೆಕ್ಷನ್ 120 ಬಿ ( ಕ್ರಿಮಿನಲ್ ಸಂಚು) ಹಾಗೂ ಸೆಕ್ಷನ್ 406 (ವಿಶ್ವಾಸದ್ರೋಹ) ಅನ್ವಯ ಲೀನಾ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.












Click it and Unblock the Notifications