ಶವಗಳ ಪಕ್ಕ ರೋಗಿಗಳಿಗೆ ಚಿಕಿತ್ಸೆ, ಮತ್ತೊಂದು ವಿಡಿಯೋ, ಇನ್ನೊಂದು ಆಸ್ಪತ್ರೆ
ಮುಂಬೈ, ಮೇ 11: ನಾಲ್ಕು ದಿನಗಳ ಹಿಂದೆ ಮುಂಬೈನ ಸಿಯೋನ್ ಆಸ್ಪತ್ರೆಯಲ್ಲಿ ಶವಗಳ ಪಕ್ಕದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ, ಅದೇ ರೀತಿ ಮತ್ತೊಂದು ಅಸ್ಪತ್ರೆಯ ವಿಡಿಯೋ ಸೋರಿಕೆಯಾಗಿದೆ.
ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಕೂಡ ಶವಗಳನ್ನು ಪಕ್ಕದಲ್ಲಿಟ್ಟುಕೊಂಡು ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಡಿಯೋವನ್ನು ಬಿಜೆಪಿ ಶಾಸಕ ನಿತೇಶ್ ರಾಣೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
''ಇದು ಕೆಇಎಂ ಆಸ್ಪತ್ರೆ ಇಂದು ಬೆಳಿಗ್ಗೆ 7 ಗಂಟೆಗೆ....ನಾವು ಚಿಕಿತ್ಸೆಗೆ ಬಂದಾಗ ಪಕ್ಕದಲ್ಲಿ ಶವಗಳನ್ನು ನೋಡುವುದನ್ನು ರೂಢಿಸಿಕೊಳ್ಳಬೇಕು ಎಂದು ಬಿಎಂಸಿ ಬಯಸುತ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಆರೋಗ್ಯ ಕಾರ್ಯಕರ್ತರು ಕೆಲಸ ಮಾಡಬೇಕಿರುವುದು ಬೇಸರದ ಸಂಗತಿ'' ಎಂದು ಬಿಜೆಪಿ ಶಾಸಕ ನಿತೇಶ್ ರಾಣೆ ಟ್ವೀಟ್ ಮಾಡಿದ್ದಾರೆ.
KEM hospital today at 7 am !
— nitesh rane (@NiteshNRane) May 11, 2020
I think the @mybmc wants us to get used to seeing dead bodies around us while taking treatment bcz they just don’t want to improve!
Feel bad for the health workers too who hv to work in such conditions!!
Is there any hope ? pic.twitter.com/E1VsmAveou
ಕೆಇಎಂ ಆಸ್ಪತ್ರೆಯನ್ನು ಸರ್ಕಾರ ಕೊವಿಡ್ ಆಸ್ಪತ್ರೆಯಾಗಿ ಬಳಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿ ಏಕೆ ಆಗುತ್ತಿದೆ ಎಂದು ವಿಪಕ್ಷಗಳು ಉದ್ಧವ್ ಠಾಕ್ರೆ ಸರ್ಕಾರವನ್ನು ಟೀಕಿಸುತ್ತಿದ್ದಾರೆ.

ಈ ಹಿಂದೆ ಸಿಯೋನ್ ಆಸ್ಪತ್ರೆಯ ವಿಡಿಯೋವನ್ನು ಕೂಡ ಬಿಜೆಪಿ ಪಕ್ಷದವರು ಬಿಡುಗಡೆ ಮಾಡಿದ್ದರು. ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ದೇವೆಂದ್ರ ಫಡ್ನವಿಸ್ ಸೇರಿದಂತೆ ಹಲವು ಸರ್ಕಾರಕ್ಕೆ ಛೀಮಾರಿ ಹಾಕಿದ್ದರು.
ಸಿಯೋನ್ ಆಸ್ಪತ್ರೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಸ್ಪಷ್ಟನೆ ನೀಡಿದ್ದರು. ''30 ನಿಮಿಷದೊಳಗೆ ಮೃತರ ಸಂಬಂಧಿಕರು ದೇಹವನ್ನು ತೆಗೆದುಕೊಂಡು ಹೋಗಬೇಕು. ಆದರೆ ಕೆಲವೊಮ್ಮೆ ಕುಟುಂಬದವರು ಹಿಂಜರಿಯುತ್ತಿದ್ದಾರೆ. ಆ ಸಮಯದಲ್ಲಿ ಅದನ್ನು ಶವಾಗಾರಕ್ಕೆ ರವಾನಿಸಲಾಗುತ್ತೆ. ಈ ವೇಳೆ ಎಲ್ಲ ಪ್ರಕ್ರಿಯೆ ಅನುಸರಿಸಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, 30 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ಶವದ ರವಾನೆ ಕಾರ್ಯ ಮಾಡಬೇಕೆಂದು ಸೂಚನೆ ನೀಡಿದ್ದೇವೆ'' ಎಂದಿದ್ದರು.












Click it and Unblock the Notifications