ಬಿಜೆಪಿಯವರು ಡೊನಾಲ್ಡ್ ಟ್ರಂಪ್ ರೀತಿ ವರ್ತಿಸುತ್ತಿದ್ದಾರೆ: ಶಿವಸೇನಾ ಟೀಕೆ

ಮುಂಬೈ, ನವೆಂಬರ್ 7: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಡೊನಾಲ್ಡ್ ಟ್ರಂಪ್ ಅರಚಾಡಿ ಅಳುತ್ತಿರುವಂತೆಯೇ ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನದ ಘಟನೆಯಲ್ಲಿ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಶಿವಸೇನಾ ವ್ಯಂಗ್ಯವಾಡಿದೆ.

ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಅರ್ನಬ್ ಗೋಸ್ವಾಮಿ ಬಂಧನದ ವಿಚಾರದಲ್ಲಿ ಬಿಜೆಪಿಯ ಆರೋಪಗಳನ್ನು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಗಳಿಗೆ ಹೋಲಿಸಿದ್ದಾರೆ.

'ಸುಳ್ಳು ಸುದ್ದಿ ಮತ್ತು ಮತ ಎಣಿಕೆಯನ್ನು ನಿಲ್ಲಿಸುವಂತೆ ಒತ್ತಾಯಿಸುವಂತೆ ಹಾಗೂ ಅಮೆರಿಕದ ಕಾನೂನು ಮತ್ತು ಪ್ರತಿಷ್ಠೆಯ ವಿರುದ್ಧವಾಗಿ ನ್ಯಾಯಾಲಯಕ್ಕೆ ಹೋಗುತ್ತಿರುವ ಡೊನಾಲ್ಡ್ ಟ್ರಂಪ್ ಅವರ ನಡೆಗಳಂತೆ, ಮಹಾರಾಷ್ಟ್ರದಲ್ಲಿ ಬಿಜೆಪಿ ನಾಯಕರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಶಂಕಿತ ಆರೋಪಿಯ ಬಂಧನದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ' ಎಂದು ಅರ್ನಬ್ ಗೋಸ್ವಾಮಿ ಹೆಸರನ್ನು ಉಲ್ಲೇಖಿಸದೆಯೇ ಶಿವಸೇನಾ ಟೀಕಿಸಿದೆ.

Just Like Trumps Action: Shiv Sena Jibe At BJP Over Arnab Goswamis Arrest Case

'ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಅನೇಕ ನಾಯಕರು 2002ರ ಗುಜರಾತ್ ಗಲಭೆಯಲ್ಲಿ ವಿಚಾರಣೆ ಎದುರಿಸಿದ್ದರು. ಕಾನೂನಿನ ಪ್ರಕಾರ ಅವರು ಖುಲಾಸೆಯಾಗಿದ್ದರು. ಆದರೆ ಆಗ ಬಿಜೆಪಿಯು ಈ ಪ್ರಕರಣಗಳು ರಾಜಕೀಯ ಪ್ರೇರಿತ ಅಥವಾ ಸಂಚಿನ ಭಾಗ ಎಂದು ಆರೋಪಿಸಿರಲಿಲ್ಲ' ಎಂದು ಸಾಮ್ನಾ ಹೇಳಿದೆ.

ಬಿಜೆಪಿಯು ಅನ್ವಯ್ ನಾಯ್ಕ್ ಅವರ ಕುಟುಂಬದ ಸದಸ್ಯರ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿದೆ. ಉದ್ಧವ್ ಠಾಕ್ರೆ ಮತ್ತು ಇಂದಿರಾ ಗಾಂಧಿ ಅವರ ಪೋಸ್ಟರ್‌ಗಳನ್ನು ಹಾಕಿ ತುರ್ತುಪರಿಸ್ಥಿತಿಯನ್ನು ನೆನಪಿಸಲು ಹೆಣಗಾಡುತ್ತಿದೆ. ಇದು ಬಾಲಿಶವಾದದ್ದು ಮಾತ್ರವಲ್ಲ, ನಿರ್ಲಕ್ಷಿಸುವಂತಹ ಸಂಗತಿ. ಆದರೆ ಇಂದಿರಾ ಗಾಂಧಿ ಅವರೊಂದಿಗಿನ ಹೋಲಿಕೆ ಹೆಮ್ಮೆಯ ಸಂಗತಿ ಎಂದು ಅದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+