ಸಿಎನ್ನೆನ್ ಐಬಿಎನ್ ತೊರೆದ ಸಾಗರಿಕಾ ಘೋಷ್
ಮುಂಬೈ, ಜು.4: ಜನಪ್ರಿಯ ರಾಷ್ಟ್ರೀಯ ಸುದ್ದಿ ವಾಹಿನಿ ಸಿಎನ್ನೆನ್ ಐಬಿಎನ್ ನ ಪ್ರಮುಖ ಪತ್ರಕರ್ತೆ ಸಾಗರಿಕಾ ಘೋಷ್ ಅವರು ಸಂಸ್ಥೆ ತೊರೆದಿರುವುದಾಗಿ ಟ್ವಿಟ್ಟರ್ ಮೂಲಕ ಘೋಷಿಸಿದ್ದಾರೆ. ಗುಡ್ ಬೈ ಸಿಎನ್ನೆನ್ ಐಬಿಎನ್ ಗಾಡ್ ಬ್ಲೆಸ್ ಎಂಬ ಸಂದೇಶ ಹೊರ ಹಾಕಿದ್ದಾರೆ.
ಸಿನ್ನೆನ್ ಐಬಿಎನ್ ಎಡಿಟರ್ ಇನ್ ಚೀಫ್ ರಾಜ್ ದೀಪ್ ಸರ್ದೇಸಾಯಿ ಅವರ ಪತ್ನಿಯಾಗಿರುವ ಸಾಗರಿಕಾ ಘೋಷ್ ಅವರು ಸಂಸ್ಥೆಯಲ್ಲಿ ಸಹಾಯಕ ಸಂಪಾದಕಿಯಾಗಿ ಕಾರ್ಯ ನಿರ್ವಹಿಸುತ್ತಿದರು. ಕಳೆದ ತಿಂಗಳು ಇಬ್ಬರೂ ಕಡ್ಡಾಯ ರಜೆ ಪಡೆದು ಸಂಸ್ಥೆಯಿಂದ ಹೊರಬಿದ್ದಿದ್ದರು.
Goodbye CNNIBN. God bless!
— Sagarika Ghose (@sagarikaghose) July 3, 2014 ನೆಟ್ವರ್ಕ್ 18 ಸಂಸ್ಥೆ ಅಧೀನದಲ್ಲಿರುವ ಸಿಎನ್ನೆನ್ ಐಬಿಎನ್ ಸುದ್ದಿ ವಾಹಿನಿಯನ್ನು ರಿಲಯನ್ಸ್ ಸಂಸ್ಥೆಯ ಮುಖೇಶ್ ಅಂಬಾನಿ ಅವರು ಇತ್ತೀಚೆಗೆ ಖರೀದಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಸಾಗರಿಕಾ ಅವರು ಟಿವಿ ಟುಡೆ ನೆಟ್ವರ್ಕ್ ಮಾಲೀಕತ್ವದ ಹೆಡ್ ಲೈನ್ಸ್ ಟುಡೇ ಸೇರುತ್ತಾರೆ ಎಂಬ ಸುದ್ದಿ ಹಬ್ಬಿದೆ ಆದರೆ, ತಮ್ಮ ಮುಂದಿನ ನಡೆ ಬಗ್ಗೆ ಸಾಗರಿಕಾ ಯಾವುದೇ ಸುಳಿವು ನೀಡಿಲ್ಲ.

ಸುಮಾರು 25 ವರ್ಷಗಳ ಕಾಲ ಪತ್ರಿಕೋದ್ಯಮ ಸಿಎನ್ನೆನ್ ಐಬಿಎನ್ ನಲ್ಲಿ 9 ವರ್ಷಗಳ ಅನುಭವವನ್ನು ಹೊತ್ತುಕೊಂಡು ಹೊಸ ಹಾದಿಯಲ್ಲಿ ಸಾಗುತ್ತಿದ್ದೇನೆ ಎಂದು ತನ್ನ ಸಹದ್ಯೋಗಿಗಳಿಗೆ ಸಾಗರಿಕಾ ಅವರು ಪತ್ರ ಕಳಿಸಿದ್ದರು. ದೂರದರ್ಶನದ ಮಾಜಿ ನಿರ್ದೇಶಕ ಭಾಸ್ಕರ್ ಘೋಷ್ ಅವರ ಮಗಳಾದ ಸಾಗರಿಕಾ ಅವರು 'ಫೇಸ್ ದಿ ಪೀಪಲ್' ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ್ದರು.
49 ವರ್ಷ ವಯಸ್ಸಿನ ಸಾಗರಿಕಾ ಅವರು 1991ರಿಂದ ಮಾಧ್ಯಮ ರಂಗದಲ್ಲಿ ಕಾರ್ಯ ನಿರತರಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ, ಔಟ್ ಲುಕ್, ದಿ ಇಂಡಿಯನ್ ಎಕ್ಸ್ ಪ್ರೆಸ್ ನಂತರ ಸಿಎನ್ನೆನ್ ಐಬಿಎನ್ ಸುದ್ದಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸಿದ್ದರು.
Goodbye @sagarikaghose: fiery, brilliant, journalist of courage! You are irreplaceable and we will miss you every day. From FTP team.
— Face The People (@FaceThePeople) July 4, 2014 ದೆಹಲಿಯ ಕಾಲೇಜು ದಿನಗಳಲಿ ರೋಡ್ಸ್(Rhodes) ವಿದ್ಯಾರ್ಥಿವೇತನ ಪಡೆದುಕೊಂಡಿದ್ದ ಸಾಗರಿಕಾ ಅವರು ಆಕ್ಸ್ ಫರ್ಡ್ ನಿಂದ ಎಂ.ಫಿಲ್ ಗಳಿಸಿದ್ದಾರೆ. ಈಶಾನ್ ಹಾಗೂ ತಾರಿಣಿ ಎಂಬ ಮಕ್ಕಳ ತಾಯಿಯಾಗಿರುವ ಸಾಗರಿಕಾ ಅವರು ಉತ್ತಮ ಬ್ಲಾಗರ್ ಹಾಗೂ ಲೇಖಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.












Click it and Unblock the Notifications