ಹಿಂದಿ ಚಿತ್ರ ನಟ ಸಲ್ಮಾನ್ ಖಾನ್ ವಿರುದ್ಧ ದೂರು ನೀಡಿದ ಪತ್ರಕರ್ತ

Recommended Video

      ಸಲ್ಮಾನ್ ಖಾನ್ ವಿರುದ್ಧ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್..? | Oneindia Kannada

      ಮುಂಬೈ, ಏಪ್ರಿಲ್ 26: ವಿಡಿಯೋ ಮಾಡಿಕೊಳ್ಳುತ್ತಿದ್ದ ವೇಳೆ ಪತ್ರಕರ್ತರ ಮೊಬೈಲ್ ಫೋನ್ ಕಸಿದುಕೊಂಡ ಹಿಂದಿ ಚಿತ್ರ ನಟ ಸಲ್ಮಾನ್ ಖಾನ್ ವಿರುದ್ಧ ದೂರು ದಾಖಲಾಗಿದೆ. ಅಶೋಕ್ ಶ್ಯಾಮ್ ಲಾಲ್ ಪಾಂಡೆ ದೂರು ದಾಖಲಿಸಿದ ಪತ್ರಕರ್ತ.

      ಜುಹುವಿನಿಂದ ಕಂಡಿವಿಲಿಗೆ ತಮ್ಮ ಕ್ಯಾಮೆರಾ ಮ್ಯಾನ್ ಜತೆಗೆ ತೆರಳುವಾಗ ಸಲ್ಮಾನ್ ಖಾನ್ ಬೈಸಿಕಲ್ ಓಡಿಸುತ್ತಿದ್ದುದನ್ನು ನೋಡಿದೆ. ಅವರ ಅಂಗರಕ್ಷಕರನ್ನು ವಿಡಿಯೋ ಮಾಡಬಹುದಾ ಎಂದು ಕೇಳಿದ್ದಕ್ಕೆ ಒಪ್ಪಿಕೊಂಡರು. ಶೂಟಿಂಗ್ ಗಾಗಿ ನಮ್ಮ ಮೊಬೈಲ್ ಫೋನ್ ತೆಗೆದು, ಚಿತ್ರೀಕರಣ ಆರಂಭಿಸಿದಾಗ ಸಲ್ಮಾನ್ ಖಾನ್ ಅವರು ತಮ್ಮ ಅಂಗರಕ್ಷಕರ ಕಡೆ ತಿರುಗಿ ಸನ್ನೆ ಮಾಡಿದರು.

      ಬೈಕ್ ನಲ್ಲಿ ಬಂದ ಅಂಗರಕ್ಷಕರು ನಮ್ಮ ಕ್ಯಾಮೆರಾ ಮನ್ ಅನ್ನು ತಳ್ಳಿದರು. ಅಷ್ಟೇ ಅಲ್ಲ, ನಮ್ಮ ಕಾರನ್ನು ಸಹ ಬಲವಂತವಾಗಿ ನೂಕಿದರು. ಅವರ ಜತೆ ವಾಗ್ವಾದಕ್ಕೆ ಇಳಿದೆವು. ಆಗ ಸ್ವತಃ ಸಲ್ಮಾನ್ ಖಾನ್ ಬಂದರು. ನಾವು ಮಾಧ್ಯಮದವರು ಎಂದು ತಿಳಿಸಿದೆವು. ಆಗ ಸಲ್ಮಾನ್, ಅವೆಲ್ಲ ವಿಷಯ ಅಲ್ಲ ಎಂದು, ನಮ್ಮ ಮೊಬೈಲ್ ಫೋನ್ ಕಸಿದುಕೊಂಡು ಹೋದರು ಎಂದು ದೂರು ನೀಡಿದ್ದಾರೆ.

      Journalist accuses Salman Khan of snatching phone, complaint filed

      ಪೊಲೀಸರಿಗೆ ದೂರು ನೀಡಿದ ನಂತರ ಸಲ್ಮಾನ್ ಖಾನ್ ಅಂಗರಕ್ಷಕರು ಪತ್ರಕರ್ತರ ಫೋನ್ ಅನ್ನು ಹಿಂತಿರುಗಿಸಿದ್ದಾರೆ. ಇನ್ನು ಮೂಲಗಳ ಪ್ರಕಾರ, ಅನುಮತಿ ಇಲ್ಲದೆ ವಿಡಿಯೋ ಚಿತ್ರೀಕರಣಕ್ಕೆ ಮುಂದಾದರು ಎಂದು ಪತ್ರಕರ್ತರ ವಿರುದ್ಧ ಕೂಡ ಸಲ್ಮಾನ್ ಅಂಗರಕ್ಷಕರು ದೂರು ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+