ಭಾರತದ ಹೆಮ್ಮೆ ಐಎನ್ ಎಸ್ ವಿರಾಟ್ ಗೆ ಇಂದು ಭಾವಪೂರ್ಣ ವಿದಾಯ
ಮುಂಬೈ ಮಾರ್ಚ್ 6: ಭಾರತೀಯ ನೌಕಾಪಡೆಯಲ್ಲಿ ಬರೋಬ್ಬರಿ 3 ದಶಕಗಳ ಕಾಲ ಸೇವೆ ಸಲ್ಲಿಸಿದ ಐಎನ್ ಎಸ್ ವಿರಾಟ್ ಇಂದು ಸೇವೆಯಿಂದ ನಿವೃತ್ತಿಗೊಳ್ಳುತ್ತಿದೆ.
ಮುಂಬೈಯ ನೌಕಾನೆಲೆಯಲ್ಲಿ ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದೇಶ ರಕ್ಷಣೆಯಲ್ಲಿ ಅಭೂತಪೂರ್ವ ಕಾಣಿಕೆ ನೀಡಿದ ವಿರಾಟ್ ಗೆ ಬೀಳ್ಕೊಡುಗೆ ನೀಡಲಾಗುತ್ತಿದೆ.[ನೌಕ ದಳಕ್ಕೆ ಆಯ್ಕೆಯಾದ ಮಂಗಳೂರಿನ ದಿಶಾಳ ಸಾಹಸಗಾಥೆ]

ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದ ಭಾರತದ ಅತೀ ದೊಡ್ಡ ಯುದ್ಧ ನೌಕೆ ಹಲವು ನಿರ್ಣಾಯಕ ಯುದ್ಧಗಳಿಗೆ ಸಾಕ್ಷಿಯಾಗಿತ್ತು. 1959ರಲ್ಲಿ ಬ್ರಿಟಿಷ್ ಸೇನೆಯಲ್ಲಿದ್ದ ವಿರಾಟ್ 1987ರಲ್ಲಿ ಭಾರತೀಯ ನೌಕಾನೆಲೆಯನ್ನು ಸೇರಿತ್ತು.['ಐಎನ್ ಎಸ್ ಚೆನ್ನೈ' ಸಮರ ನೌಕೆ ದೇಶಕ್ಕೆ ಅರ್ಪಣೆ]
1988ರಲ್ಲಿ ಶ್ರೀಲಂಕಾದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಆಪರೇಶನ್ ಜುಪಿಟರ್ ನಲ್ಲೂ ಪಾಲ್ಗೊಂಡಿದ್ದ ಕೀರ್ತಿ ವಿರಾಟ್ ದು. 1999ರ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಆಪರೇಶನ್ ವಿಜಯ್ ಗರಿಯನ್ನು ಮುಡಿಗೇರಿಸಿಕೊಂಡಿದ್ದ ವಿರಾಟ್ ಇದೀಗ ನೇಪಥ್ಯಕ್ಕೆ ಸರಿಯುತ್ತಿದೆ.
ಭಾರತೀಯ ಸೇನೆಗೆ ಭೀಮಬಲ ತಂದುಕೊಟ್ಟ ಜಗತ್ತಿನ ಅತ್ಯಂತ ಹಳೆಯ ವಿರಾಟ್ ಗೆ ಇಂದು ಭಾವಪೂರ್ಣ ವಿದಾಯ ಸಲ್ಲಿಸಲಾಗುತ್ತಿದೆ.












Click it and Unblock the Notifications