ಮುಂಬೈಯಲ್ಲಿ ಅತ್ತ ಸರ್ಕಾರ ರಚನೆ ಕಗ್ಗಂಟು: ಇತ್ತ ಸರಣಿ ಐಟಿ ದಾಳಿ!
ಮುಂಬೈ, ನವೆಂಬರ್ 15: ಮಹಾರಾಷ್ಟ್ರದಲ್ಲಿ ಒಂದೆಡೆ ಸರ್ಕಾರ ರಚನೆಯು ಕಗ್ಗಂಟಾದರೆ ಇನ್ನೊಂದೆಡೆ ಸರಣಿ ಐಟಿ ದಾಳಿ ಅಧಿಕಾರಿಗಳನ್ನು ಕಂಗೆಡಿಸಿದೆ.
ಬೃಹನ್ಮುಂಬೈ ಮಹಾನಗರ ಪಾಲಿಕೆಯ ಕಂಟ್ರಾಕ್ಟರ್ ಗಳನ್ನೇ ಗುರಿಯಾಗಿಸಿ ಸುಮಾರು 30 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಬಿಎಂಸಿ ಗೆ ಸಂಬಂಧಿಸಿದ ಯೋಜನೆಗಳಲ್ಲಿ ಕಂಡುಬಂದ 735 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ .
ದೇಶದಲ್ಲೇ ಅತ್ಯಂತ ಶ್ರೀಮಂತ ಸ್ಥಳೀಯ ಸಂಸ್ಥೆ ಎನ್ನಿಸಿರುವ ಬಿಎಂಸಿ ಸದ್ಯಕ್ಕೆ ಬಿಜೆಪಿ-ಶಿವಸೇನೆಯ ಮೈತ್ರಿ ತೆಕ್ಕೆಯಲ್ಲಿದೆ. ಈ ದಾಳಿಯಿಂದಾಗಿ ದೊಡ್ಡ ಮಟ್ಟದ ಅಕ್ರಮ ಹಣ, ತೆರಿಗೆ ವಂಚನೆ ಹೊರಬರಲಿದೆ ಎಂದು ವರದಿಗಳು ತಿಳಿಸಿವೆ.

ಇತ್ತ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಗ್ಗಂಟಾಗಿದ್ದು, ಈಗಾಗಲೇ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಆದರೂ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಯೋಚನೆಯಲ್ಲಿದೆ.
ಬೃಹನ್ಮುಂಬೈ ಮಹಾನಗರ ಪಾಲಿಕೆಯ 227 ಸೀಟುಗಳಲ್ಲಿ 94 ಶಿವಸೇನೆ ಪಾಲಾಗಿದ್ದರೆ, 82 ಬಿಜೆಪಿ ಪಾಲಾಗಿದೆ. ಇದೀಗ ಐಟಿ ದಾಳಿ ನಡೆದಿರುವುದು ಉಭಯ ಪಕ್ಷಗಳಿಗೂ ಭಾರೀ ಆಘಾತ ನೀಡಿದೆ. ದಾಳಿಯಲ್ಲಿ ಹಲವು ಹಣಕಾಸಿನ ಅವ್ಯವಹಾರಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.












Click it and Unblock the Notifications