ಮಗನ ಮದುವೆ: ನೀತೂ-ಮುಕೇಶ್ ಅಂಬಾನಿಯಿಂದ ಯೋಧರಿಗಾಗಿ ಸಂಗೀತ ಕಾರ್ಯಕ್ರಮ

ಮುಂಬೈ, ಮಾರ್ಚ್ 10: ಈಚೆಗಷ್ಟೇ ಎರಡು ಸಾವಿರ ಬಡ ಮಕ್ಕಳ ಜತೆಗೆ ಸೇರಿ ಧೀರೂಭಾಯಿ ಅಂಬಾನಿ ಸ್ಕ್ವೇರ್ ಅನ್ನು ಮುಂಬೈ ಜನರಿಗಾಗಿ ಅರ್ಪಣೆ ಮಾಡಿದ್ದ ಮುಕೇಶ್ ಹಾಗೂ ನೀತಾ ಅಂಬಾನಿ ಇದೀಗ ಎರಡು ಸಂಗೀತ ಕಾರಂಜಿಗಳನ್ನು ಆಯೋಜಿಸುತ್ತಿದ್ದಾರೆ. ತಮ್ಮ ಮಗ ಆಕಾಶ್ ಹಾಗೂ ಶ್ಲೋಕಾ ಮದುವೆಗಾಗಿ ಆಶೀರ್ವಾದ ಪಡೆಯಲು, ಏಳು ಸಾವಿರ ಭಾರತೀಯ ಸಶಸ್ತ್ರ ಮೀಸಲು ಪಡೆ, ಪೊಲೀಸರಿಗೆ ಮತ್ತು ಅವರ ಕುಟುಂಬದವರಿಗೆ ಆಯೋಜಿಸಿದ್ದಾರೆ.

ಸಂಗೀತ ಕಾರಂಜಿ ಜತೆಗೆ ನೃತ್ಯ ಪ್ರದರ್ಶನ ಕೂಡ ಇರಲಿದೆ. ಭೂಮಿ, ನೀರು ಹಾಗೂ ಆಕಾಶದ ಮೂರರ ಹೊಂದಾಣಿಕೆಯನ್ನು ಸಾಹಿತ್ಯದ ಮೂಲಕ ತಿಳಿಸುವ ಪ್ರಯತ್ನ ಇದಾಗಿರುತ್ತದೆ. ಶ್ರೀಕೃಷ್ಣನ ರಾಸಲೀಲೆ, ವೃಂದಾವನದ ರಾಧಾ ಮತ್ತು ಗೋಪಿಕೆಯರು ಥೀಮ್ ಒಳಗೊಂಡಿರುತ್ತದೆ. ಇದರಲ್ಲಿ ನೂರೈವತ್ತು ಭಾರತೀಯ ಹಾಗೂ ಅಂತರರಾಷ್ಟ್ರೀಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

Inaugural Musical Fountain Shows at Dhirubhai Ambani Square for Armed Forces and Police

ಆಕಾಶ್ ಹಾಗೂ ಶ್ಲೋಕಾರ ಮದುವೆಗಾಗಿ ಧೀರೂಭಾಯಿ ಅಂಬಾನಿ ಸ್ಕೇರ್ ನಲ್ಲಿ ನಡೆಯುವ ಈ ವಿಶೇಷ ಪ್ರದರ್ಶನ ಪ್ರಮುಖ ಅಕರ್ಷಣೆ ಆಗಿರಲಿದೆ. ಅಂಬಾನಿ ಸ್ಕ್ವೇರ್ ಬಹಳ ವಿಶಾಲವಾಗಿದೆ. ನೀರಿನ ಕಾರಂಜಿ ಆರು ನೂರು ಎಲ್ ಇಡಿ ದೀಪ, ಅಗ್ನಿ ಅಕರ್ಷಣೆ, ನಲವತ್ತೈದು ಅಡಿ ಎತ್ತರದ ತನಕ ನೀರು ಹಾರುತ್ತದೆ.

Inaugural Musical Fountain Shows at Dhirubhai Ambani Square for Armed Forces and Police

ತಮ್ಮ ಮಗನ ಮದುವೆ ವಿಚಾರವಾಗಿ ಮಾತನಾಡಿದ ನೀತಾ ಅಂಬಾನಿ, ನಮ್ಮ ಸಂತೋಷದ ಕ್ಷಣ ಹಂಚಿಕೊಳ್ಳಲು ಖುಷಿ ಆಗುತ್ತದೆ. ನಮ್ಮ ದೇಶವನ್ನು ಸುರಕ್ಷಿತವಾಗಿ ಕಾಪಾಡುತ್ತಿರುವ ಹಾಗೂ ಹೆಮ್ಮೆಗೆ ಕಾರಣರಾಗಿರುವ ಯೋಧರ ಆಶೀರ್ವಾದ ಬಯಸುತ್ತೇವೆ. ಈ ವಿಶೇಷ ಕಾರ್ಯಕ್ರಮದ ಅನುಭವವನ್ನು ನಮ್ಮ ಯೋಧರು ಹಾಗೂ ಅವರ ಕುಟುಂಬದ ಜತೆ ಕಳೆಯಲು ಬಯಸುತ್ತೇವೆ ಎಂದಿದ್ದಾರೆ.

Inaugural Musical Fountain Shows at Dhirubhai Ambani Square for Armed Forces and Police

ಜಿಯೋ ವರ್ಲ್ಡ್ ಸೆಂಟರ್ ನ ಒಂದು ಭಾಗ ಧೀರೂಭಾಯಿ ಅಂಬಾನಿ ಸ್ಕ್ವೇರ್. ಇಲ್ಲಿ ಹಲವು ಅನುಕೂಲಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+