ನನಗೆ ಕಾಂಗ್ರೆಸ್ ಬೆಂಬಲವಿದೆ ಎಂದ ಬಿಜೆಪಿಯ ನಿತಿನ್ ಗಡ್ಕರಿ
ನಾಗ್ಪುರ, ಮಾರ್ಚ್ 28: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, 'ತಮಗೆ ಕಾಂಗ್ರೆಸ್ ಬೆಂಬಲವಿದೆ' ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿರುವುದು ಅಚ್ಚರಿ ಮೂಡಿಸಿದೆ.
ನಾಗ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿತಿನ್ ಗಡ್ಕರಿ, ಬುಧವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ರೀತಿ ಹೇಳಿದರು.

"ನಾಗ್ಪುರ ಕ್ಷೇತ್ರದ ಸಂಸದನಾಗಿ ನನ್ನ ಕ್ಷೇತ್ರದಲ್ಲಿ ನಾನು ಮಾಡಿದ ಕೆಲಸಗಳನ್ನು ಜನ ಮೆಚ್ಚಿದ್ದಾರೆ. ಅದಕ್ಕೆಂದೇ ಕಾಂಗ್ರೆಸ್ ಕಾರ್ಯಕರ್ತರೇ ಫೋನ್ ಮಾಡಿ ನನ್ನನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದರು.
"ನಾನು ಜಾತಿ, ಮತ, ಭಾಷೆ, ಪಕ್ಷಭೇದ ಮಾಡದೆ ಕೆಲಸ ಮಾಡಿದ್ದೇನೆ. ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಫೋನ್ ಮಾಡಿ ನನಗೆ ಶುಭಾಶಯ ಕೋರಿದ್ದಾರೆ, ಹೆದರಬೇಡಿ ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದಿದ್ದಾರೆ. ನಾವು ದೈಹಿಕವಾಗಿ ಕಾಂಗ್ರೆಸ್ಸಿನಲ್ಲಿದ್ದರೂ, ನಮ್ಮ ಹೃದಯ ನಿಮ್ಮೊಂದಿಗಿದೆ, ನಾವು ನಿಮಗೇ ಬೆಂಬಲ ನೀಡುತ್ತೇವೆ ಎಂದಿದ್ದಾರೆ" ಎಂದು ಗಡ್ಕರಿ ಹೇಳಿದ್ದಾರೆ.
ಒಟ್ಟು ಏಳು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಏಪ್ರಿಲ್ 11 ರಂದು ಆರಂಭವಾಗಿ ಮೇ.18 ರವರೆಗೆ ನಡೆಯಲಿದೆ. ಫಲಿತಾಂಶ ಮೇ 23 ರಂದು ಹೊರಬೀಳಲಿದೆ.












Click it and Unblock the Notifications