ಅತಿಯಾಗಿ ಹಿಂಸೆ ಕೊಡುತ್ತಿದ್ದನೆಂದು ಯುವಕನ 'ಅದೇ' ಕತ್ತರಿಸಿದ ಮಹಿಳೆ

ಮುಂಬೈ, ಡಿಸೆಂಬರ್ 27: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಇಪ್ಪತ್ತೇಳು ವರ್ಷದ ವ್ಯಕ್ತಿಯ ಜನನಾಂಗವನ್ನೇ ಕತ್ತರಿಸಿದ ಘಟನೆ ನಡೆದಿದೆ. ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಎಂಬ ಸಿಟ್ಟಿನಲ್ಲಿ, ಮತ್ತಿಬ್ಬರು ಯುವಕರ ನೆರವು ಪಡೆದ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಥಾಣೆಯ ನಂದಿವಾಲಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಲವತ್ತೆರಡು ವರ್ಷದ ಮಹಿಳೆ ಹಾಗೂ ಸಂತ್ರಸ್ತ ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸ ಇರುವವರು. ಕಳೆದ ಕೆಲವು ವಾರಗಳಿಂದ ಆಕೆಯನ್ನು ಹಿಂಬಾಲಿಸಿ ಹೋಗುತ್ತಿದ್ದ. ಕೆಲ ದಿನಗಳ ಹಿಂದೆ ಆ ಮಹಿಳೆ ಪತಿಯ ಬಳಿಯೇ ಹೋಗಿ, ತಾನು ಆಕೆಯನ್ನು ಇಷ್ಟಪಡುವುದಾಗಿ ಹೇಳಿದ್ದ. ಇದರಿಂದ ಪತಿ-ಪತ್ನಿ ಮಧ್ಯೆ ಜಗಳವಾಗಿತ್ತು.

ಈ ಯುವಕನಿಗೆ ಪಾಠ ಕಲಿಸಬೇಕು ಎಂದು ನಿರ್ಧರಿಸಿದಂತೆ, ಆ ಮಹಿಳೆಯು ತೇಜಸ್ ಹಾಗೂ ಪ್ರವೀಣ್ ಕೇನಿಯಾ ಎಂಬಿಬ್ಬರ ನೆರವು ಪಡೆದಿದ್ದಾಳೆ. ಯಾರೂ ಇಲ್ಲದ ಸ್ಥಳವೊಂದಕ್ಕೆ ಸಂತ್ರಸ್ತನನ್ನು ಕರೆಸಿಕೊಂಡಿದ್ದಾಳೆ. ಅಲ್ಲಿ ತೇಜಸ್ ಹಾಗೂ ಪ್ರವೀಣ್ ಸೇರಿ ಸಮಾ ಬಡಿದಿದ್ದಾರೆ. ಆ ನಂತರ ಮಹಿಳೆಯು ಯುವಕನ ಜನನಾಂಗವನ್ನು ಕತ್ತರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

He stalked woman for days, she cut off his genitals

ಸಂತ್ರಸ್ತನಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಆತನನ್ನು ಕೆಲವರು ದೊಂಬಿವಿಲಿಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ಕೂಡಲೇ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯಕ್ಕೆ ಆತನ ಸ್ಥಿತಿ ಸ್ಥಿರವಾಗಿದೆ. ಮಹಿಳೆ ಹಾಗೂ ಆಕೆಗೆ ಸಹಾಯ ಮಾಡಿದ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+