ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳೇ.. ಮಹಿಳೆಯರೇ.. ಔಷಧಿ ದರ ಹೆಚ್ಚಲಿದೆ ಎಚ್ಚರ

By Kiran B Hegde
|
Google Oneindia Kannada News

ಮುಂಬೈ, ನ. 22: ನಾಗರಿಕರೇ... ನಿಮ್ಮ ಅಗತ್ಯದ ಔಷಧಗಳಿಗೆ ಹೆಚ್ಚು ಹಣ ತೆರಲು ಸಿದ್ಧರಾಗಿ...

ಔಷಧಗಳಿಗೆ ಪ್ಲಾಸ್ಟಿಕ್ (Polyethylene Terephthalate) ಬಾಟಲಿ ಬಳಸುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಮಕ್ಕಳು, ಸಂತಾನೋತ್ಪತ್ತಿಗಾಗಿ ಉಪಯೋಗಿಸುವ ಔಷಧಗಳಿಗೆ ಪ್ಲಾಸ್ಟಿಕ್ ಬಾಟಲಿ ಬಳಕೆಯನ್ನು 2016ರಿಂದ ನಿಷೇಧಿಸಲಾಗಿದೆ.

ಆದ್ದರಿಂದ ಈ ಔಷಧಗಳಿಗೆ ಪರ್ಯಾಯವಾಗಿ ಗಾಜಿನ ಬಾಟಲಿ ಬಳಕೆ ಅನಿವಾರ್ಯವಾಗಲಿದೆ. ಇದರಿಂದ ಔಷಧಿಯ ಬೆಲೆ ಪ್ರತಿ ಬಾಟಲಿಗೆ ಬೆಲೆ ಗಣನೀಯ ಪ್ರಮಾಣದಲ್ಲಿ ಅಂದರೆ ಶೇ. 25ರಿಂದ 30ರಷ್ಟು ಹೆಚ್ಚಳವಾಗಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

drug

9 ಲಕ್ಷ ಮೆಟ್ರಿಕ್ ಟನ್ ಗಾಜು ಬೇಕು: ಭಾರತದ ಔಷಧಿ ತಯಾರಕರ ಸಂಘದ ಅಧ್ಯಕ್ಷರು ಕೂಡ ಬೆಲೆ ಹೆಚ್ಚಳದ ವರದಿಯನ್ನು ಖಚಿತಪಡಿಸಿದ್ದಾರೆ. ದೇಶದಲ್ಲಿ ಪ್ರತಿ ವರ್ಷ 1 ಲಕ್ಷ ಮೆಟ್ರಿಕ್ ಟನ್‌ಗಳಷ್ಟು PET ಹೊಂದಿರುವ ಪ್ಲಾಸ್ಟಿಕ್ ಉಪಯೋಗಿಸಲಾಗುತ್ತಿದೆ. ಇದರ ಬದಲಿಗೆ 9 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಗಾಜುಗಳನ್ನು ಉಪಯೋಗಿಸಬೇಕಾಗುತ್ತದೆ. ಅಲ್ಲದೆ, ಗಾಜಿನ ಬಾಟಲಿಗಳ ಕೊರತೆಯಿಂದ ದ್ರವ ಔಷಧಿಗಳ ಕೊರತೆಯೂ ಉಂಟಾಗಬಹುದು ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯವನ್ನು ಭೇಟಿಯಾದ ಐಡಿಎಂಎ ಪ್ರತಿನಿಧಿಗಳು, "ಹೊಸ ಆದೇಶದಿಂದ ಗಾಜಿನ ಬಾಟಲಿ ಉಪಯೋಗ ಅನಿವಾರ್ಯವಾಗುತ್ತದೆ. ಚಿಕ್ಕ ಔಷಧಿ ಕಂಪನಿಗಳಿಗೆ ಗಾಜಿನ ಬಾಟಲಿ ಖರೀದಿ ಕಷ್ಟವಾಗಬಹುದು. ಇದರಿಂದ ದ್ರವ ಔಷಧ ಪೂರೈಕೆ ಕಡಿಮೆಯಾಗಲಿದೆ" ಎಂದು ತಿಳಿಸಿದ್ದಾರೆ. ಈ ವಾದಕ್ಕೆ ಪ್ಲಾಸ್ಟಿಕ್ ಪರಿವರ್ತಕರು ತಯಾರಕರ ಸಂಘ (ಪಿಸಿಎಂಎ) ಕೂಡ ದನಿಗೂಡಿಸಿದೆ.

English summary
People would have to pay more for some medicines in coming days. The Government has restricted the use of PTA containers which was used in packaging of liquid oral formulations for pediatric, geriatric and reproductive healthcare from 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X