ವಂಚನೆ ಪ್ರಕರಣ : ಬಾಲಿವುಡ್ ನಿರ್ಮಾಪಕಿ ಪ್ರೇರಣಾ ಬಂಧನ

ಮುಂಬೈ, ಡಿಸೆಂಬರ್ 09: ಸುಮಾರು 32 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಿರ್ಮಾಪಕಿ ಪ್ರೇರಣಾ ಅರೋರ ಅವರನ್ನು ಬಂಧಿಸಿ,. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರೇರಣಾ ಅವರಿಗೆ ಡಿಸೆಂಬರ್ 10 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

KriArj ಎಂಬ ನಿರ್ಮಾಣ ಸಂಸ್ಥೆಯ ಒಡತಿಯಾಗಿರುವ ಪ್ರೇರಣಾ ಅವರು ಚಿತ್ರಕರ್ಮಿ ವಾಸು ಭಗ್ನಾನಿ ಅವರಿಗೆ 32 ಕೋಟಿ ರು ನೀಡದೆ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ರುಸ್ತುಂ, ಪ್ಯಾಡ್ಮ್ಯಾನ್, ಪರಿ, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಪರಮಾಣು ಮುಂತಾದ ಚಿತ್ರಗಳನ್ನು ಪ್ರೇರಣಾ ಅವರ ಸಂಸ್ಥೆ ನಿರ್ಮಿಸಿದೆ.

Film Producer Prerna Arora Arrested For Alleged Fraud Of Rs. 32 Crore

ಪ್ರೇರಣಾ ವಿರುದ್ಧ 32 ಕೋಟಿ ರೂಪಾಯಿ ವಂಚನೆ ಕೇಸ್ ಅಲ್ಲದೆ, ನಂಬಿಕೆ ದ್ರೋಹ, ಮಾನಹಾನಿ ಮತ್ತು ಐಟಿ ವಂಚನೆ ಪ್ರಕರಣಗಳಿವೆ. ಜೊತೆಗೆ ಹಲವು ಪಾಸ್ ಪೋರ್ಟ್ ಗಳು ಮತ್ತು ಪಾನ್ ಕಾರ್ಡ್ ಗಳು ದೊರೆತಿವೆ.

ಪ್ರೇರಣಾ ತಮ್ಮ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಿದ ಫನ್ನಿಖಾನ್ ಎಂಬ ಸಿನಿಮಾದ ವಿತರಕರಿಗೆ ಹಣವನ್ನೇ ನೀಡಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಜೊತೆಗೆ ಈ ಪ್ರೊಡಕ್ಷನ್ ನ ಪಾಲುದಾರ ಅರ್ಜುನ್ ಎನ್ ಕಪೂರ್ ಮತ್ತು ಅವರ ತಾಯಿ ಪ್ರತಿಮಾ ಅರೋರ ಅವರ ಮೇಲೆಯೂ ಕೇಸ್ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+