ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಿ, ಸಿಬಿಐಯನ್ನು ಕಾಶ್ಮೀರದ ಗಡಿಗೆ ಕಳುಹಿಸಿ: ಕೇಂದ್ರದ ವಿರುದ್ಧ ಶಿವಸೇನೆ ಗುಡುಗು

|
Google Oneindia Kannada News

ಮುಂಬೈ, ನವೆಂಬರ್ 30:ವಿರೋಧಿಗಳನ್ನು ಮಟ್ಟಹಾಕಲು ಇಡಿ, ಸಿಬಿಐಗಳನ್ನು ಕಾಶ್ಮೀರದ ಗಡಿಗೆ ಕಳುಹಿಸಿ ಎಂದು ಕೇಂದ್ರದ ವಿರುದ್ಧ ಶಿವಸೇನೆ ದಾಳಿ ನಡೆಸಿದೆ.

ದೆಹಲಿಯ ಸಮೀಪ ಪ್ರತಿಭಟನಾ ನಿರತರಾದ ರೈತರನ್ನು ಉಗ್ರರೆಂದು ಸಂಬೋಧಿಸಲಾಗುತ್ತಿದೆ. ಎಂದು ಪಕ್ಷವು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿತು, ಉತ್ತರ ಭಾರತದ ಶೀತ ಹವೆಯ ನಡುವೆ ರೈತರ ವಿರುದ್ಧ ಜಲಫಿರಂಗಿ ಬಳಕೆ ಕ್ರೌರ್ಯದ ಸ್ವರೂಪ ಎಂದು ಪಕ್ಷ ಅಭಿಪ್ರಾಯಪಟ್ಟಿದೆ.

ಚಳಿಯ ನಡುವೆ ರೈತರ ಮೇಲೆ ಜಲಫಿರಂಗಿ ಬಳಸಿದ್ದು ಕ್ರೌರ್ಯ: ಶಿವಸೇನಾ ವಾಗ್ದಾಳಿಚಳಿಯ ನಡುವೆ ರೈತರ ಮೇಲೆ ಜಲಫಿರಂಗಿ ಬಳಸಿದ್ದು ಕ್ರೌರ್ಯ: ಶಿವಸೇನಾ ವಾಗ್ದಾಳಿ

ವಿರೋಧಿಗಳನ್ನು ಹಿಮ್ಮೆಟ್ಟಿಸಲು ಕೇಂದ್ರವು ಸಿಬಿಐ, ಇಡಿ ಬಳಸುವುದಾದರೆ ಅವುಗಳನ್ನು ಜಮ್ಮು ಕಾಶ್ಮೀರದ ಗಡಿಗೆ ಕಳಿಸಬೇಕು ಎಂದು ಶಿವಸೇನೆ ಕೇಂದ್ರಕ್ಕೆ ತಿರುಗೇಟು ನೀಡಿದೆ.

Enforcement Directorate, CBI Should Be Sent To Borders : Senas Attack On Centre

ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸುವ ಭಯೋತ್ಪಾದಕರನ್ನು ನಿಭಾಯಿಸಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅನ್ನು ಗಡಿಗೆ ಗಳುಹಿಸಬೇಕು ಎಂದಿರುವ ಶಿವಸೇನೆ ತನ್ನ ಶಾಸಕನೊಬ್ಬರ ಮೇಲೆ ಇಡಿ ದಾಳಿ ನಡೆದ ಬಳಿಕ ಈ ಹೇಳಿಕೆ ನೀಡಿದೆ.

ಬಿಜೆಪಿಯೇತರ, ವಿರೋಧಪಕ್ಷಗಳ ಆಡಳಿತದ ರಾಜ್ಯ ರಾಜಕಾರಣಿಗಳನ್ನು ಗುರಿಯಾಗಿಸಲು ಕೇಂದ್ರ ಏಜೆನ್ಸಿಗಳನ್ನು ಬಳಸಿದ್ದಕ್ಕಾಗಿ ಕೇಂದ್ರದ ವಿರುದ್ಧ ಕಿಡಿಕಾರಿದ ಶಿವಸೇನೆ ವಿರೋಧಿಗಳ ಹಿಮ್ಮೆಟ್ಟಿಸಲು ಸರ್ಕಾರ ಸಿಬಿಐನ ಇಡಿಯನ್ನು ಬಳಸುತ್ತದೆ.ಆದ್ದರಿಂದ ಈ ಏಜೆನ್ಸಿಗಳಿಗೆ ತಮ್ಮ ಶೌರ್ಯವನ್ನು ಸಾಬೀತುಪಡಿಸಲು ಅವಕಾಶ ನೀಡಬೇಕು.

ಬಿಜೆಪಿ ಕೇವಲ ದೇಶದ ಪರಿಸರವನ್ನು ಹಾಳು ಮಾಡುತ್ತಿಲ್ಲ ಆದರೆ ನಿರಂಕುಶಾಧಿಕಾರವನ್ನು ಸ್ಥಾಪಿಸುತ್ತಿದೆ. ಖಲಿಸ್ತಾನ್ ವಿಷಯ ಮುಗಿದಿದೆ ಮತ್ತು ಅದಕ್ಕಾಗಿ ಇಂದಿರಾ ಗಾಂಧಿ ಮತ್ತು ಜನರಲ್ ಅರುಣ್ ಕುಮಾರ್ ವೈದ್ಯ ತಮ್ಮ ಪ್ರಾಣವನ್ನು ಅರ್ಪಿಸಿದರು ಎಂದರು.

English summary
The Enforcement Directorate and the CBI "should be sent to the borders" to tackle terrorists entering Jammu and Kashmir, Maharashtra's ruling Shiv Sena has said in its latest attack on former ally BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X