ಖುರ್ಚಿಗಾಗಿ 30 ವರ್ಷದ ದೋಸ್ತಿಯನ್ನೇ ಶಿವ ಸೇನಾ ಕೊಲೆ ಮಾಡಿದೆ: ರವಿಶಂಕರ್
ಮುಂಬೈ, ನವೆಂಬರ್ 23: ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಹೇಳುತ್ತಿದ್ದಾರೆ, ಶಿವಸೇನಾ ಸ್ವಾರ್ಥಕ್ಕಾಗಿ 30 ವರ್ಷಗಳ ಸ್ನೇಹವನ್ನು ಕೊಲೆ ಮಾಡಿ ಹೋಗಿರುವುದರಿಂದ ಲೋಕತಂತ್ರದ ಕೊಲೆಯಾಗಲಿಲ್ಲವೇ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಎನ್‌ಸಿಪಿ ಸೇರಿ ಸರ್ಕಾರ ರಚನೆ ಮಾಡಿ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ, ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಕುರಿತು ಮಾತನಾಡಿರುವ ರವಿ ಶಂಕರ್ ಪ್ರಸಾದ್, ಶಿವಸೇನಾ ಯಾರ ತಾಳಕ್ಕೆ ಕುಣಿಯುತ್ತಿದೆ, ಚುನಾವಣೆ ಮುಗಿಸ ಬಳಿಕ ಏಕಾಏಕಿ ಶಿವಸೇನೆಗೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ.
ಖರ್ಚಿಗಾಗಿ ಮೈತ್ರಿ ಧಿಕ್ಕರಿಸಿ ವಿರೋಧ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಶಿವಸೇನಾ ಮುಂದಾಗಿತ್ತು. ಮೊದಲು ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿ ಚುನಾವಣೆ ಮುಗಿದ ಬಳಿಕ ಉಲ್ಟಾ ಹೊಡೆದಿತ್ತು, ಇದೆಲ್ಲದರ ಹಿಂದೆ ಯಾರಿದ್ದಾರೆ.

ಸ್ಥಿರ ಸರ್ಕಾರಕ್ಕಾಗಿ ಬಿಜೆಪಿ ಎನ್‌ಸಿಪಿ ಮೈತ್ರಿ ಮಾಡಿಕೊಂಡಿದೆ. ಪ್ರಮಾಣಿಕ, ಭ್ರಷ್ಟಾಚಾರ ರಹಿತ ಸರ್ಕಾರ ಇದಾಗುತ್ತೆ. ಮಹಾರಾಷ್ಟ್ರವು ದೇಶದ ಅತಿ ದೊಡ್ಡ ರಾಜ್ಯ, ಮುಂಬೈ ಅತಿ ದೊಡ್ಡ ವಾಣಿಜ್ಯ ನಗರಿಯಾಗಿದೆ ಇದನ್ನು ಕಳ್ಳದಾರಿ ಮೂಲಕ ಅಧಿಕಾರ ಪಡೆಯುವ ಷಡ್ಯಂತ್ರ ರಚಿಸಲಾಗಿತ್ತು. ಆದರೆ ಅದೆಲ್ಲವೂ ಈಗ ನಡೆಯುವುದಿಲ್ಲ ಎಂದು ಅವರಿಗೂ ಗೊತ್ತಾಗಿದೆ.
ರಾಜ್ಯಪಾಲರು ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್ ಮೂರೂ ಪಕ್ಷದವರನ್ನು ಕರೆದು ಮಾತನಾಡಿತ್ತು. ಆದರೆ ಸರ್ಕಾರ ರಚನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಕಾಲಾವಕಾಶವನ್ನು ಕೇಳಿದ್ದರು, ಆದರೆ ಕೊನೆಗೆ ಬಿಜೆಪಿ ಹಾಗೂ ಎನ್‌ಸಿಪಿ ಸಿದ್ಧರಾಗಿ ರಾಜ್ಯಪಾಲರ ಬಳಿಗೆ ಹೋಗಿ ಅನುಮತಿ ಪಡೆದು ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಹೇಳಿದರು.












Click it and Unblock the Notifications