ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ಕಂಪಿಸಿದ ಭೂಮಿ
ಮುಂಬೈ, ಸಪ್ಟೆಂಬರ್.22: ಮಹಾರಾಷ್ಟ್ರದ ಪಲ್ಗರ್ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾದಕದಲ್ಲಿ ಭೂಕಂಪನ ತೀವ್ರತೆ 3.5ರಷ್ಟು ದಾಖಲಾಗಿದೆ ಎಂದು ಭಾರತೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ.
ಮಂಗಳವಾರ ಮಧ್ಯರಾತ್ರಿ 2.30 ಗಂಟೆಗೆ ಭೂಮಿಯ ಮೇಲ್ಮೈ ಪದರದಿಂದ 5 ಕಿಲೋ ಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ. ಮುಂಬೈನ ಉತ್ತರ ಭಾಗದಲ್ಲಿ 104 ಕಿಲೋ ಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಎಂದು ಗುರುತಿಸಲಾಗಿದೆ.
"ಮಹಾರಾಷ್ಟ್ರದ ಪಾಲ್ಗರ್ ಪ್ರದೇಶದಲ್ಲಿ ಸಪ್ಟೆಂಬರ್.22, 2020ರ ಮಧ್ಯರಾತ್ರಿ 2.30 ಗಂಟೆಗೆ ಭೂಮಿ ಕಂಪಿಸಿದೆ. 20.01ರಷ್ಟು ಲ್ಯಾಟ್, 72.79ರಷ್ಟು ಉದ್ದ 5 ಕಿಲೋ ಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ" ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಟ್ವೀಟ್ ಮಾಡಿದೆ.

ಸಪ್ಟೆಂಬರ್ ನಲ್ಲಿ ಬಾರಿ ಬಾರಿ ಭೂಕಂಪನ:
ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಬಾರಿ ಬಾರಿ ಭೂಮಿ ಕಂಪಿಸಿದ ಅನುಭವಗಳು ಸಂಭವಿಸುತ್ತಲೇ ಇವೆ. ನಾಸಿಕ್ ಮತ್ತು ಮುಂಬೈನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಬಾರಿ ಲಘು ಭೂಕಂಪನ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಸ್ಸಾಂನಲ್ಲೂ ಕೂಡಾ ಮಂಗಳವಾರ ಲಘು ಭೂಕಂಪ ಸಂಭವಿಸಿದೆ. ಭರ್ಪೇಟ್ ಪ್ರದೇಶದಲ್ಲಿ ಮಧ್ಯರಾತ್ರಿ 1.30ರ ಸಮಯದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.2ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಮಾಹಿತಿ ನೀಡಿದೆ.












Click it and Unblock the Notifications