ಮೋದಿ ಪ್ರಧಾನಿಯಾಗಿದ್ದರಿಂದ ದೇಶದ ಜನತೆ ಸೇಫ್: ಮನೋಹರ್
ಮುಂಬೈ, ಅಕ್ಟೋಬರ್ 12: ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಸರ್ಜಿಕಲ್ ಸ್ಟ್ರೈಕ್ ನ ಯಶಸ್ಸು ಸಂಪೂರ್ಣವಾಗಿ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು. ಅವರ ಒಂದು ದೃಢ ನಿರ್ಧಾರದಿಂದ ನಮ್ಮ ಯೋಧರು ಈ ನಾಜೂಕಾದ ಕಾರ್ಯಾಚರಣೆ ಕೈಗೊಳ್ಳಲು ಸಾಧ್ಯವಾಯಿತು. ಇದರಿಂದ ನೂರಾರು ಕೋಟಿ ಜನತೆ ಸುರಕ್ಷಿತವಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕ್ಕಾರ್ ಹೇಳಿದ್ದಾರೆ.
ಸೀಮಿತ ದಾಳಿ ಸಾಬೀತು ಪಡಿಸಲು ಯಾವುದೇ ಪುರಾವೆ ನೀಡಬೇಕಾಗಿಲ್ಲ. ಇದರ ಶ್ರೇಯಸ್ಸು ಪ್ರತಿ ಭಾರತೀಯರಿಗೆ ಸಲ್ಲುತ್ತದೆ. ದಾಳಿ ನಡೆಸಿದ್ದು ನಮ್ಮ ಸಶಸ್ತ್ರ ಪಡೆಗಳು ಹೊರತು ಯಾವುದೇ ರಾಜಕೀಯ ಪಕ್ಷವಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಬುಧವಾರ ಹೇಳಿದರು.

ಸರ್ಜಿಕಲ್ ಸ್ಟ್ರೈಕ್ ನ ಶ್ರೇಯಸ್ಸನ್ನು ಪ್ರತಿಯೊಬ್ಬ ಭಾರತೀಯನ ಜೊತೆಗೆ ಹಂಚಿಕೊಳ್ಳಲು ನಾನು ಚಿಂತಿಸುವುದಿಲ್ಲ. ಇದೇನಿದ್ದರೂ ಯೋಜನೆ ರೂಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರಕ್ಕೆ ಶ್ರೇಯಸ್ಸಿನ ಬಹುಪಾಲು ಸಲ್ಲುತ್ತದೆ
ಜನರ ಭಾವನೆಗ ಏನಿತ್ತು ಎಂಬುದು ನನಗೆ ಗೊತ್ತಿವೆ, ಜನತೆಗೆ ಈಗ ಸಂತೃಪ್ತಭಾವ ಸಿಕ್ಕಿದೆ ಎಂದು ಹೇಳಿದರು. ಹಲವಾರು ರಾಜಕೀಯ ನಾಯಕರು, ಪಕ್ಷಗಳು ಸೀಮಿತ ದಾಳಿಯನ್ನು ಪ್ರಶ್ನಿಸಿ ಸಾಕ್ಷ್ಯ ಕೇಳಿದ್ದರೆ, ಈ ವಿಷಯವಾಗಿ ಕಾಂಗ್ರೆಸ್ ಅಧಿಕೃತವಾಗಿ ಸರ್ಕಾರವನ್ನು ಬೆಂಬಲಿಸಿದರೂ, ತನ್ನ ಆಡಳಿತಾವಧಿಯಲ್ಲೂ ಇಂತಹ ಸೀಮಿತ ದಾಳಿಗಳನ್ನು ನಡಸಲಾಗಿತ್ತು ಎಂದು ಪ್ರತಿಪಾದಿಸಿತ್ತು.(ಪಿಟಿಐ)












Click it and Unblock the Notifications