ಮಹಾರಾಷ್ಟ್ರ ಸಚಿವರ 'ಅಂಡರ್‌ವರ್ಲ್ಡ್ ಲಿಂಕ್‌ ಪುರಾವೆ' ಬಹಿರಂಗಪಡಿಸಿದ ಫಡ್ನವೀಸ್!

ಮುಂಬೈ, ನವೆಂಬರ್‌ 09: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ಗೆ 'ಅಂಡರ್‌ವರ್ಲ್ಡ್ ಲಿಂಕ್‌' ಇರುವ 'ಪುರಾವೆ'ಯನ್ನು ಬಿಚ್ಚಿಟ್ಟಿದ್ದಾರೆ. ಈ ಹಿಂದೆ ದೀಪಾವಳಿಯ ಬಳಿಕ ತಾನು ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ಗೆ ಭೂಗತ ಲೋಕದ ಸಂಪರ್ಕ ಇರುವ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ ಎಂದು ಹೇಳಿದ್ದರು. ಅದರಂತೆ ಇಂದು ಪುರಾವೆಗಳನ್ನು ಬಹಿರಂಗಪಡಿಸಿದ್ದಾರೆ.

ಈ ಹಿಂದೆ ನವಾಬ್‌ ಮಲಿಕ್‌ಗೆ ಭೂಗತ ಲೋಕದ ಸಂಪರ್ಕವಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಆರೋಪ ಮಾಡಿದ್ದರು. ಈ ಆರೋಪವನ್ನು ಮತ್ತೆ ಮಾಡಿದ ದೇವೇಂದ್ರ ಫಡ್ನವೀಸ್‌ ಪತ್ರಿಕಾಗೋಷ್ಠಿಯಲ್ಲಿ "ನವಾಬ್‌ ಮಲಿಕ್‌ಗೆ ಭೂಗತ ಲೋಕದ ಸಂಪರ್ಕ ಇರುವ ಪುರಾವೆಗಳು" ಎದು ಹೇಳಿ ದಾಖಲೆಗಳನ್ನು ಪ್ರಸ್ತುತ ಪಡಿಸಿದ್ದಾರೆ.

"ನಾನು ದೀಪಾವಳಿಯ ಬಳಿಕ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸುತ್ತೇನೆ ಎಂದು ನಾನು ಈ ಹಿಂದೆಯೇ ತಿಳಿಸಿದ್ದೆ. ದಾಖಲೆಗಳು ಲಭ್ಯವಾಗಲು ಸ್ವಲ್ಪ ಸಮಯ ಬೇಕಾಯಿತು. ನಾನು ಸಲೀಂ ಜಾವೇದ್‌ರ ಸ್ಕ್ರಿಪ್ಟ್‌ ಅನ್ನು ನಿರೂಪಣೆ ಮಾಡುತ್ತಿಲ್ಲ ಹಾಗೂ ಇದು ಮಧ್ಯಂತರದ ಚಿತ್ರಣವೇನಲ್ಲ," ಎಂದು ಹೇಳಿದ್ದಾರೆ. 1993ರ ಮುಂಬೈ ಸ್ಫೋಟದ ಆರೋಪಿಯಾದ ಭೂಗತ ಜಗತ್ತಿನ ವ್ಯಕ್ತಿಯೊಂದಿಗೆ ನವಾಬ್ ಮಲಿಕ್ ಆಸ್ತಿ ಒಪ್ಪಂದ ಮಾಡಿಕೊಂಡಿದ್ದರು ಎಂಬುದು ಬಿಜೆಪಿ ನಾಯಕ ನವಾಬ್‌ ಮಲಿಕ್‌ನ ಆರೋಪವಾಗಿದೆ.

Devendra Fadnaviss Underworld Links Proof Against Maharashtra Minister Nawab Malik

"ಕುರ್ಲಾದಲ್ಲಿ ಎಲ್‌ಬಿಎಸ್‌ ರಸ್ತೆಯಲ್ಲಿ ಇರುವ 2.80 ಎಕರೆ ಜಾಗವನ್ನು ಗೋವಾಲಾ ಕಾಂಪೌಂಡ್ ಎಂದು ಕರೆಯಲಾಗುತ್ತದೆ. ಈ ಪ್ಲಾಟ್ ಸಾಲಿಡಸ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ನೋಂದಣಿಯಾಗಿದೆ. ಈ ಕಂಪನಿಯು ನವಾಬ್ ಮಲಿಕ್ ಕುಟುಂಬಕ್ಕೆ ಸೇರಿದ್ದು ಆಗಿದೆ. ಅವರೂ ಕೂಡಾ ಈ ಕಂಪನಿಯಲ್ಲಿ ಇದ್ದರು. ಆದರೆ ಸಚಿವರಾದ ಬಳಿಕ ರಾಜೀನಾಮೆ ನೀಡಿದರು. ಭೂಗತ ಜಗತ್ತಿನ ವ್ಯಕ್ತಿಗಳಿಂದ 30 ಲಕ್ಷಕ್ಕೆ ಪ್ಲಾಟ್‌ ಖರೀದಿಸಲಾಗಿದೆ. ಅದರಲ್ಲಿ 20 ಲಕ್ಷ ಮಾತ್ರ ಪಾವತಿಸಲಾಗಿದೆ," ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಆರೋಪ ಮಾಡಿದ್ದಾರೆ.

ಈ ಡೀಲ್‌ ಯಾವಾಗ ಮಾಡಿದ್ದು?

"ನೀವು ಈ ಡೀಲ್‌ ಅನ್ನು ಯಾವಾಗ ಮಾಡಿಕೊಂಡಿದ್ದು ಎಂಬುವುದು ನನ್ನ ಪ್ರಶ್ನೆ. ಸಲೀಂ ಪಟೇಲ್ ಯಾರೆಂದು ನಿಮಗೆ ತಿಳಿದಿಲ್ಲವೇ?. ನೀವು ಅಪರಾಧಿಗಳಿಂದ ಏಕೆ ಜಮೀನು ಖರೀದಿಸಿದ್ದೀರಿ? ಮತ್ತು ಅವರು ಎಲ್‌ಬಿಎಸ್ ರಸ್ತೆಯಲ್ಲಿರುವ ಮೂರು ಎಕರೆ ಜಾಗವನ್ನು 30 ಲಕ್ಷಕ್ಕೆ ಏಕೆ ಮಾರಾಟ ಮಾಡಿದರು," ಎಂದು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಪ್ರಶ್ನೆ ಮಾಡಿದ್ದಾರೆ.

ಸಲೀಂ ಪಟೇಲ್ ದರೋಡೆಕೋರ ದಾವೂದ್ ಇಬ್ರಾಹಿಂನ ಸಹಾಯಕ ಮತ್ತು ಅವನು ದಾವೂದ್ ಸಹೋದರಿ ಹಸೀನಾ ಪಾರ್ಕರ್‌ರ ಚಾಲಕನಾಗಿದ್ದನು. ದಾವೂದ್ ಪರಾರಿಯಾದ ನಂತರ, ಸಲೀಂ ಪಟೇಲ್ ಮೂಲಕ ಹಸೀನಾ ಪಾರ್ಕರ್ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ದಾವೂದ್ ಇಬ್ರಾಹಿಂ 1993ರ ಮುಂಬೈ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್‌ ಆಗಿದ್ದಾನೆ.

"ಇದು ಭೂಗತ ಲೋಕದೊಂದಿಗೆ ನವಾಬ್‌ ಮಲಿಕ್‌ಗೆ ಇರುವ ನೇರ ಸಂಪರ್ಕ ಆಗಿದೆ. ಯಾರು ಆರ್‌ಡಿಎಕ್ಸ್‌ ತಂದರೋ, ಯಾರೂ ಸ್ಪೋಟವನ್ನು ಮಾಡಿದರೋ, ಅವರೊಂದಿಗೆ ನೀವು ವ್ಯಾಪಾರವನ್ನು ಮಾಡುತ್ತೀರಾ?. ನಾನು ಈ ಎಲ್ಲಾ ದಾಖಲೆಗಳನ್ನು ಸಮರ್ಥ ಅಧಿಕಾರಿಗಳಿಗೆ ಕಳುಹಿಸುತ್ತೇನೆ ಹಾಗೂ ನಿಮ್ಮ ಪಕ್ಷದ ಮುಖ್ಯಸ್ಥ ಶರದ್ ಪವಾರ್‌ಗೂ ಕಳುಹಿಸುತ್ತೇನೆ. ಇದರಿಂದ ತಮ್ಮ ಸಚಿವರು ಏನು ಮಾಡಿದ್ದಾರೆ ಎಂದು ಅವರಿಗೂ ತಿಳಿಯುತ್ತದೆ," ಎಂದು ಕೂಡಾ ದೇವೇಂದ್ರ ಫಡ್ನವೀಸ್‌ ಟೀಕೆ ಮಾಡಿದ್ದಾರೆ.

ದೇವೇಂದ್ರ ಫಡ್ನವಿಸ್‌ ವಿರುದ್ಧ ನವಾಬ್‌ ಮಲಿಕ್‌ ಆರೋಪ

ಈ ಹಿಂದೆ ದೇವೇಂದ್ರ ಫಡ್ನವಿಸ್‌ ವಿರುದ್ಧ ನವಾಬ್‌ ಮಲಿಕ್‌ ಆರೋಪ ಮಾಡಿದ್ದರು. ದೇವೇಂದ್ರ ಫಡ್ನವೀಸ್ ಪ್ರಸ್ತುತ ಜೈಲಿನಲ್ಲಿರುವ ಡ್ರಗ್ ಪೆಡ್ಲರ್‌ನಿಂದ ಹಣ ಪಡೆದ ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನವಾಬ್ ಮಲಿಕ್ ಆರೋಪ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ದೇವೇಂದ್ರ ಫಡ್ನವೀಸ್‌ ಇದು "ಹಾಸ್ಯಾತ್ಮಕ ವಿಚಾರ" ಎಂದು ಹೇಳಿದ್ದರು. ಇನ್ನು ತನಗೆ ಭೂಗತ ಲೋಕದ ಸಂಪರ್ಕ ಇದೆ ಎಂದು ಹೇಳಿದ ದೇವೇಂದ್ರ ಫಡ್ನವೀಸ್‌ ವಿರುದ್ಧ ವಾಗ್ದಾಳಿ ನಡೆಸಿದ ನವಾಬ್‌ ಮಲಿಕ್‌, "ನನಗೆ ಭೂಗತ ಲೋಕದ ಸಂಪರ್ಕವಿದೆ ಎಂದು ಹೇಳುವ ಧೈರ್ಯ ಯಾರಿಗಿದೆ," ಎಂದು ಆಕ್ರೋಶಿತರಾಗಿದ್ದರು.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+