ಆತ್ಮಹತ್ಯೆಯಲ್ಲಿ ಅಂತ್ಯಕಂಡ ಅಮ್ಮ-ಮಗಳ ಚಿನ್ನದ ಗಲಾಟೆ

ಮುಂಬೈ, ಫೆಬ್ರವರಿ 17: ವಾಣಿಜ್ಯ ನಗರಿ ಮುಂಬೈನಲ್ಲಿ ಅಮ್ಮ ಮಗಳ ನಡುವಿನ ಚಿನ್ನದ ಗಲಾಟೆ ಆತ್ಮಹತ್ಯೆಯಲ್ಲಿ ಅಂತ್ಯ ಕಂಡಿದೆ.

31 ವರ್ಷದ ಪುತ್ರಿ ಹಾಗೂ ಆಕೆಯ ತಾಯಿ ಮುಂಬೈನ ಅಪಾರ್ಟ್‌ಮೆಂಟ್ ಒಂದರಲ್ಲಿ ಆಭರಣಕ್ಕೋಸ್ಕರ ಕಿತ್ತಾಡಿಕೊಂಡಿದ್ದಾರೆ.

ಬಳಿಕ ಪುತ್ರಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದರೆ ತಾಯಿಯು ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾರೆ.

Daughter Attempts Suicide By Drinking Phenyl Mother Jumps To Death

ಅಮ್ಮ ಮಗಳ ಈ ಕದನ ಪೊಲೀಸರಿಗೂ ಆಶ್ಚರ್ಯ ಮೂಡಿಸಿದೆ. ಪುತ್ರಿ ಫಿನಾಯಿಲ್ ಕುಡಿದ ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ತಂದೆ ಕೆಲಸ ಮುಗಿಸಿ ಮನೆಗೆ ಬಂದಾಗ ಮಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಚೇತರಿಸಿಕೊಳ್ಳುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪತಿ ಬರುವ ವೇಳೆಗಾಗಲೇ ಪತ್ನಿ ಏಳನೇ ಮಹಡಿಯಿಂದ ಹಾರಿ ರಕ್ತದ ಮಡುವಿನಿಲ್ಲಿ ಬಿದ್ದಿದ್ದರು. ಆಭರಣದ ಹಂಚಿಕೆಯ ಬಗ್ಗೆ ಈ ಅಮ್ಮ ಮಗಳ ನಡುವೆ ವಿರೋಧ ವ್ಯಕ್ತವಾಗಿತ್ತು. ಅದು ತಾರಕಕ್ಕೇರಿ ಆತ್ಮಹತ್ಯೆಯ ಹಂತಕ್ಕೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+