ಬಾಲಿವುಡ್ ನಟ ಸೋನುಸೂದ್ ವಿರುದ್ಧ ಮುಂಬೈ ಪಾಲಿಕೆ ದೂರು
ಮುಂಬೈ, ಜನವರಿ 07: ವಸತಿ ಕಟ್ಟಡವನ್ನು ಹೋಟೆಲ್ ಆಗಿ ಪರಿವರ್ತನೆ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟ ಸೋನು ಸೂದ್ ಮೇಲೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಪ್ರಕರಣ ದಾಖಲಿಸಿದೆ.
ಯಾವುದೇ ಅನುಮತಿ ಪಡೆಯದೇ ಆರು ಅಂತಸ್ತಿನ ವಸತಿ ಜಾಗದ ರಚನೆಯನ್ನು ವಾಣಿಜ್ಯ ಚಟುವಟಿಕೆಗೆ ಪರಿವರ್ತನೆ ಮಾಡಿದ ಆರೋಪದಲ್ಲಿ ಮಹಾರಾಷ್ಟ್ರ ಪ್ರದೇಶ ಮತ್ತು ನಗರ ಯೋಜನಾ ಕಾಯ್ದೆಯಡಿ, ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದೆ. ಎಬಿ ನಯ್ಯರ್ ರಸ್ತೆಯಲ್ಲಿನ ಶಕ್ತಿ ಸಾಗರ್ ಕಟ್ಟಡವನ್ನು ಯಾವುದೇ ಅನುಮತಿ ಪಡೆಯದೇ ಹೋಟೆಲ್ ಆಗಿ ಪರಿವರ್ತಿಸಲಾಗಿದೆ ಎಂದು ಜೂಹು ಪೊಲೀಸ್ ಠಾಣೆಯಲ್ಲಿ ಜನವರಿ 4ರಂದು ಬಿಎಂಸಿ ದೂರು ದಾಖಲಿಸಿದೆ.
"ನಟ ಸೋನು ಸೂದ್ ಕಟ್ಟಡದ ರಚನೆಯಲ್ಲಿ ಬದಲಾವಣೆ ಮಾಡಿದ್ದು, ಯಾವುದೇ ಅನುಮತಿ, ತಾಂತ್ರಿಕ ಸಲಹೆಯನ್ನೂ ಪಡೆದಿಲ್ಲ. ಈ ಬಗ್ಗೆ ನೋಟೀಸ್ ನೀಡಿದ್ದರೂ ನಿರ್ಲಕ್ಷಿಸಿದ್ದಾರೆ" ಎಂದು ಬಿಎಂಸಿ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನಟ ಸೋನು ಸೂದ್, ಬಿಎಂಸಿಯಿಂದ ಈಗಾಗಲೇ ಅನುಮತಿ ಪಡೆಯಲಾಗಿದೆ. ಮಹಾರಾಷ್ಟ್ರ ಕೋಸ್ಟಲ್ ಝೋನ್ ಮ್ಯಾನೇಜ್ಮೆಂಟ್ ನಿಂದ ಅನುಮೋದನೆಗೆ ಕಾಯುತ್ತಿದ್ದೇನೆ. ಆ ಅನುಮತಿ ದೊರೆಯದೇ ಇದ್ದರೆ ಮತ್ತೆ ವಸತಿ ಪ್ರದೇಶವಾಗಿ ಪರಿವರ್ತಿಸುವುದು ನನ್ನ ಜವಾಬ್ದಾರಿ ಎಂದು ಸೂದ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications