ಹಳೆಯ ಮರಗಳ ಉಳಿವಿಗಾಗಿ 'ಸರ್ಜನ್' ನೇಮಕ ಮಾಡಿದ ಬಿಎಂಸಿ
ಮುಂಬೈ, ಜೂನ್ 21: ಬೃಹನ್ ಮುಂಬೈ ಮಹಾನಗರ ಪಾಲಿಕೆಯು ಹಳೆಯ ಮರಗಳ ಉಳಿವಿಗಾಗಿ 'ಸರ್ಜನ್' ನೇಮಕ ಮಾಡಿದೆ.
ಮುಂಬೈನ ಹಳೆಯ ಮರಗಳನ್ನು ಬೀಳತಂದೆ ರಕ್ಷಿಸಲು ಶಸ್ತ್ರಚಿಕಿತ್ಸಕರನ್ನು ನೇಮಕ ಮಾಡಿದೆ. ಇವರುಗಳು ಮರದಲ್ಲಿ ಉತ್ಪತ್ತಿಯಾಗುವ ಶಿಲೀಂಧ್ರ ಸೋಂಕು, ಕೊಳೆಯುವುದು ಅಥವಾ ಇನ್ಯಾವುದೇ ದುರ್ಬಲತೆಯನ್ನು ಪತ್ತೆ ಹಚ್ಚಿ ಅವುಗಳಿಗೆ ಚಿಕಿತ್ಸೆ ನೀಡಲಿದ್ದಾರೆ.
ಯೋಜನೆಯ ಭಾಗವಾಗಿ ಮುಂಬೈನ ಮಲಬಾರ್, ಟಾರ್ಡಿಯೋ ಹಾಗೂ ಪೆಡ್ಡಾರ್ ರಸ್ತೆಯಂತಹ ಸ್ಥಳಗಳನ್ನು ಒಳಗೊಂಡಿರುವ ಬಿಎಂಸಿಯ ಡಿ ವಾರ್ಡ್ನ್ನು ವೈಭವ್ ರಾಜೆ ನೋಡಿಕೊಳ್ಳಲಿದ್ದಾರೆ.

ಆರ್ಬಾರಿಸ್ಟ್ ಅಥವಾ ಆರ್ಬೋರಿಕಲ್ಚರಿಸ್ಟ್ಗಳೆಂದು ಕರೆಯಲ್ಪಡುವ ಈ ಮಂದಿ ಹಳೆಯ ಮರಗಳ ಅಧ್ಯಯನ ನಡೆಸಿ ಅವುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.
''ಪ್ರವಾಹ ಉಂಟಾದಾಗ ಅಥವಾ ಬಾರಿ ಮಳೆಯಾದಾಗ ಅಥವಾ ಇನ್ಯಾವುದೇ ಕಾರಣಗಳಿಗೆ ಮರ ಬೀಳುವ ಸಾಧ್ಯತೆ ಇರುತ್ತದೆ. ಕೊಳೆಯುವ ರೆಂಬೆಗಳು, ಶಿಲೀಂಧ್ರ ಸೋಂಕು ಅಥವಾ ಸಡಿಲವಾದ ಬೇರುಗಳ ಕಾರಣಗಳಿಂದ ಮರಗಳು ಬೀಳಬಹುದು ಇಂಥ ವಿಷಯಗಳು ಹೊರಗಿನಿಂದ ಗೊತ್ತಾಗುವುದಿಲ್ಲ.
ಇದರಿಂದಾಗುವ ಅಪಘಾತಗಳನ್ನು ತಗ್ಗಿಸಿ, ಇಂಥ ಮರಗಳು ಬೀಳುವುದನ್ನು ತಪ್ಪಿಸಲೆಂದು ಮುಂಚೂಣಿಯಾಗಿಯೇ ಈ ಮರಗಳ ನೆರವಿಗೆ ಬರಲೆಂದು ನನ್ನನ್ನು ನೇಮಿಸಲಾಗಿದೆ'' ಎಂದು ವೈಭವ್ ರಾಜೆ ಹೇಳಿದ್ದಾರೆ.
''ದೇಶೀಯ ಮರಗಳನ್ನು ಹೆಚ್ಚಾಗಿ ಉತ್ತೇಜಿಸುವ ಮೂಲಕ ಮಣ್ಣಿನ ಸವೆತದಿಂದ ನಗರವನ್ನು ಕಾಪಾಡಲು ಬಿಎಂಸಿ ಮುಂದಾಗಿದೆ'' ಎಂದು ನಗರದ ಮೇಯರ್ ಕಿಶೋರಿ ಪಡ್ನೇಕರ್ ತಿಳಿಸಿದ್ದಾರೆ.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications