ಪ್ರಮೋದ್ ಮಹಾಜನ್ ಅವರ ಪುತ್ರ ರಾಹುಲ್ ಮಹಾಜನ್ ಗೆ 3ನೇ ಮದುವೆ
ಮುಂಬೈ, ನವೆಂಬರ್ 23: ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರ ರಾಹುಲ್ ಮಹಾಜನ್ ಅವರು ಮೂರನೇ ಬಾರಿಗೆ ಮದುವೆಯಾಗಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ರಾಹುಲ್ ಮಹಾಜನ್ (43) ಅವರು ತಮಗಿಂತ 18 ವರ್ಷ ಚಿಕ್ಕವರಾದ ಕಜಕಸ್ತಾನದ ರೂಪದರ್ಶಿ ನಟಾಲ್ಯಾ ಇಲಿಯ್ನಾ ಅವರನ್ನು ಮಂಗಳವಾರ(ನವೆಂಬರ್ 20) ದಂದು ಖಾಸಗಿ ಸಮಾರಂಭದಲ್ಲಿ ವರಿಸಿದರು ಎಂದು ಮುಂಬೈ ಮಿರರ್ ವರದಿ ಮಾಡಿದೆ.
ರಾಹುಲ್' ರಿಯಲ್ 'ಮದುವೆ ಮುರಿದು ಬಿತ್ತು!
ಮಲಬಾರ್ ಹಿಲ್ಸ್ ನ ದೇಗುಲವೊಂದರಲ್ಲಿ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ರಾಹುಲ್ ಕುಟುಂಬದ ಆಪ್ತರು ಹಾಗೂ ಬಂಧು ಮಿತ್ರರು ಮಾತ್ರ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

ರಾಹುಲ್ ಅವರಿಗೆ ಇದು ಮೂರನೇ ಮದುವೆ: ಬಾಲ್ಯದಿಂದ 13 ವರ್ಷಗಳ ಕಾಲ ಗೆಳೆತನ ಹೊಂದಿದ್ದ ಶ್ವೇತಾ ಸಿಂಗ್ ಅವರೊಂದಿಗೆ ರಾಹುಲ್ ಮಹಾಜನ್ ಅವರು ಮದುವೆಯಾಗಿದ್ದರು.ಆದರೆ, ಕೌಟುಂಬಿಕ ಕಲಹದ ಕಾರಣ ಇಬ್ಬರೂ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದರು. 2008ರಲ್ಲಿ ಡಿವೋರ್ಸ್ ಸಿಕ್ಕಿತು.
ಇದೇ ವರ್ಷ ಬಿಗ್ ಬಾಸ್ 8ರಲ್ಲಿ ಪಾಲ್ಗೊಂಡಿದ್ದ ರಾಹುಲ್, ಗ್ರ್ಯಾಂಡ್ ಫಿನಾಲೆ ತನಕ ತಲುಪಿದ್ದರು. ಆದರೆ, ಮನೆಯಿಂದ ಪರಾರಿಯಾಗಲು ಯತ್ನಿಸಿ ರಿಯಾಲಿಟಿ ಶೋನಿಂದ ಹೊರ ಹಾಕಲ್ಪಟ್ಟರು. ಬಿಗ್ ಬಾಸ್ ಮನೆಯಲ್ಲಿ ಪಾಯಲ್ ರೊಹಟ್ಗಿ, ಮೋನಿಕಾ ಬೇಡಿ ಜತೆ ರಾಹುಲ್ ಹೆಸರು ತಗುಲಿಹಾಕಿಕೊಂಡಿತ್ತು.
2010ರಲ್ಲಿ ರಾಹುಲ್ ದುಲ್ಹನಿಯಾ ಲೆ ಜಾಯೆಂಗಾ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಡಿಂಪಿ ಗಂಗೂಲಿ ಅವರನ್ನು ವರಿಸಿದರು. 2014ರ ಡಿಸೆಂಬರ್ 25ರಂದು ಈ ವಿವಾಹ ಬಂಧನವನ್ನು ಕಡಿದುಕೊಂಡರು. ಮೊದಲೆರಡು ಮದುವೆ ಮುರಿಯಲು ರಾಹುಲ್ ಅವರ ಒರಟುತನ, ಪತ್ನಿಗೆ ಹಿಂಸೆ ಕಾರಣವಾಗಿದ್ದು ಸುಳ್ಳಲ್ಲ.
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications