ಬಿಗ್ ಬಾಸ್ ಮಾಜಿ ಸ್ಪರ್ಧಿಯ ಚುಂಬನದ ಫೋಟೋ, ವಿಡಿಯೋ ಸಕತ್ ವೈರಲ್
ಬಿಗ್ ಬಾಸ್ ಹಿಂದಿ ಅವತರಣಿಕೆಯ ಮಾಜಿ ಸ್ಪರ್ಧಿ ಬನಿ ಹಾಗು ಆಕೆ ಗೆಳತಿ ಸಾರ್ವಜನಿಕವಾಗಿಯೇ ಪರಸ್ಪರ ಚುಂಬಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈ, ಮಾರ್ಚ್ 27: ಹಿಂದಿಯ ಬಿಗ್ ಬಾಸ್ ರಿಯಾಲಿಟಿ ಷೋನ ಮಾಜಿ ಸ್ಪರ್ಧಿ ಬನಿ ಜೆ ಹಾಗೂ ಸಪ್ನಾ ಭವ್ನಾನಿ ಇಬ್ಬರೂ ಮಹಿಳಾವಾದಿಗಳೆಂದೇ ಹೆಚ್ಚು ಪರಿಚಿತರು. ಇತ್ತೀಚೆಗೆ ಸಂಗೀತ ಹಬ್ಬವೊಂದರಲ್ಲಿ ಇಬ್ಬರೂ ವಿಡಿಯೋ ಮಾಡಿದ್ದು, ಸಾರ್ವಜನಿಕವಾಗಿ ಪರಸ್ಪರರು ಮುತ್ತಿಟ್ಟು ಸುದ್ದಿಯಾಗಿದ್ದಾರೆ.
ನಿರ್ಭಿಡೆಯಿಂದ ಪರಸ್ಪರರು ತುಟಿ ಬೆಸೆದಿದ್ದು, ಬನಿ ಆ ವಿಡಿಯೋ ಹಾಗೂ ಚುಂಬಿಸುತ್ತಿರುವ ಫೋಟೋವನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ. ಸದ್ಯ ಬನಿ ಜೆ ಅವರು ಯುವರಾಜ್ ಠಾಕೂರ್ ಎಂಬಾತನ ಜತೆಗೆ ರಿಲೇಷನ್ ಷಿಪ್ ನಲ್ಲಿದ್ದಾರೆ ಎಂಬ ವದಂತಿಯಿದೆ.[ಮುತ್ತಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಜೀವಕ್ಕೆ ಕುತ್ತು!]

ಇನ್ನು ಸಪ್ನಾ ಉಭಯಲಿಂಗಿ ಎಂಬುದನ್ನು ಸಾರ್ವಜನಿಕವಾಗಿಯೇ ಹೇಳಿಕೊಳ್ಳುತ್ತಾರೆ. ಒಟ್ಟಿನಲ್ಲಿ ಆ ಸಂಗೀತ ಹಬ್ಬದಲ್ಲಿನ ವಿಡಿಯೋ ಹಾಗೂ ಫೋಟೋಗಳು ಭಾರೀ ಗಿರಕಿ ಹೊಡೆಯುತ್ತಿವೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಕಾಮೆಂಟ್ ಗಳು ಬೀಳುತ್ತಿವೆ ಎಂಬುದು ಸತ್ಯ.

ಅಂದಹಾಗೆ, ಈ ವಿಡಿಯೋ ಹಾಗೂ ಫೋಟೋ ಮತ್ತಿತರ ಮಾಹಿತಿ ಒಳಗೊಂಡ ವರದಿಯನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಮಾಡಿದೆ.












Click it and Unblock the Notifications