ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷದಿಂದ ರಾತ್ರಿ ವೇಳೆ ಎಟಿಎಂ ಬಂದ್?

|
Google Oneindia Kannada News

Banks may go for partial closing of ATMs during night
ಮುಂಬೈ, ಡಿ 29: ಎಟಿಎಂ ದರೋಡೆ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಮುಂದಿನ ತಿಂಗಳಿನಿಂದ ಜನಸಂಚಾರ ವಿರಳವಿರುವ ಪ್ರದೇಶದಲ್ಲಿ ರಾತ್ರಿ ವೇಳೆ ಎಟಿಎಂ ಬಂದ್ ಆಗುವ ಸಾಧ್ಯತೆಯಿದೆ.

ವಹಿವಾಟು ಕಮ್ಮಿವಿರುವ ಪ್ರದೇಶದಲ್ಲಿ ಹಾಗೂ ಜನಸಂಚಾರ ವಿರಳವಾಗಿರುವ (ಪ್ರಮುಖವಾಗಿ ನಗರದ ಹೊರವಲಯದಲ್ಲಿ) ಮುಂದಿನ ತಿಂಗಳಿನಿಂದ ರಾತ್ರಿ ವೇಳೆ ಎಟಿಎಂ ಮುಚ್ಚುವ ನಿರ್ಧಾರಕ್ಕೆ ಐಬಿಎ (Indian Banks Association) ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ಕಾರ್ಪೋರೇಶನ್ ಬ್ಯಾಂಕ್ ಉದ್ಯೋಗಿಯ ಮೇಲೆ ನಡೆದ ಹಲ್ಲೆ ಪ್ರಕರಣದ ನಂತರ ಐಬಿಎ ವಿಶೇಷ ಸಭೆ ನಡೆಸಿ, ರಾತ್ರಿ ವೇಳೆ ಭದ್ರತಾ ಸಿಬ್ಬಂದಿವಿರುವ ಎಟಿಎಂನಲ್ಲಿ ಸೇವೆಯನ್ನು ಯಥಾಸ್ಥಿತಿ ಮುಂದುವರಿಸಿ ಕೊಂಡು ಹೋಗುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ. (ಭದ್ರತಾ ಸಿಬ್ಬಂದಿ ನೇಮಿಸಿ, ಇಲ್ಲ ಎಟಿಎಂ ಮುಚ್ಚಿ)

ಜನಸಂಚಾರ ಕಮ್ಮಿಯಿರುವ ಎಟಿಎಂನಲ್ಲಿ ರಾತ್ರಿ ವೇಳೆ ಭದ್ರತಾ ಸಿಬ್ಬಂದಿ ಇಲ್ಲದೇ ಇದ್ದ ಪಕ್ಷದಲ್ಲಿ ಹೊಸದಾಗಿ ಭದ್ರತಾ ವ್ಯವಸ್ಥೆಗೆ ಸಿಬ್ಬಂದಿಯನ್ನು ನಿಯೋಜಿಸಿದೇ, ಎಟಿಎಂ ಬಂದ್ ಮಾಡುವುದೇ ಸೂಕ್ತ ಎನ್ನುವು ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದೆ ಎಂದು ಬ್ಯಾಂಕ್ ಮೂಲಗಳಿಂದ ತಿಳಿದುಬಂದಿದೆ.

ಎಟಿಎಂನಲ್ಲಿ ಭದ್ರತೆಯ ಜೊತೆ ಖರ್ಚುವೆಚ್ಚ ಲೆಕ್ಕಾಚಾರದಲ್ಲಿ ಹಳಿ ತಪ್ಪದೇ ಇರಲು ಸಭೆಯಲ್ಲಿ ಸಿಸಿಟಿವಿ ಮುಖಾಂತರ ಎಟಿಎಂ ಕಿಯೋಸ್ಕ್ ವ್ಯವಸ್ಥೆಯನ್ನು ಮುಂದುವರಿಸುವುದೇ ಸೂಕ್ತ.

ಜೊತೆಗೆ, ವಿವಿಧ ಬ್ಯಾಂಕುಗಳ ಎಟಿಎಂ ಆಸುಪಾಸಿನಲ್ಲಿದ್ದರೆ ಪ್ರತ್ಯೇಕವಾಗಿ ಹೊಸ ಸಿಬ್ಬಂದಿಯನ್ನು ನಿಯೋಜಿಸದೇ ಪ್ರಸಕ್ತವಿರುವ ಭದ್ರತಾ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು, ಭದ್ರತಾ ಸಿಬ್ಬಂದಿಗಾಗುವ ಖರ್ಚನ್ನು ವಿವಿಧ ಬ್ಯಾಂಕುಗಳು ಸಮವಾಗಿ ಹಂಚಿಕೊಳ್ಳುವ ಬಗ್ಗೆ ಕೂಡಾ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಬ್ಯಾಂಕ್ ಮೂಲಗಳಿಂದ ತಿಳಿದು ಬಂದಿದೆ.

ಐಬಿಎ ಈ ಸಂಬಂಧ ಸದ್ಯದಲ್ಲೇ ಅಂತಿಮ ನಿರ್ಧಾರಕ್ಕೆ ಬರಲಿದೆ ಎಂದು ವರದಿಯಾಗಿದೆ.

English summary
Banks may go for partial closing of ATMs at low transactions and outskirts during night from next month onwards as a security measure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X