• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆಗೆ ಸೇರ್ಪಡೆ

|

ಮುಂಬೈ, ಡಿಸೆಂಬರ್ 1: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಇಂದು ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಬಾಂದ್ರಾದಲ್ಲಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ಊರ್ಮಿಳಾ ಅವರು ಶಿವಸೇನೆ ಸೇರಿದ್ದಾರೆ.

2019ರಲ್ಲಿ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ನಿಂದ ಉತ್ತರ ಮುಂಬೈ ಕ್ಷೇತ್ರದಿಂದ ಅವರು ಸ್ಪರ್ಧಿಸಿಸಿದ್ದರು. ಆದರೆ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದರು.

ಶಿವಸೇನೆಯು ಕೇಂದ್ರದ ಒತ್ತಡ ರಾಜಕೀಯಕ್ಕೆ ಹೆದರುವುದಿಲ್ಲ: ಸಂಜಯ್ ರಾವತ್

ಕಾಂಗ್ರೆಸ್‌ಗೆ ಸೇರಿದ ಐದು ತಿಂಗಳ ಬಳಿಕ ಅವರು ಪಕ್ಷ ತೊರೆದು ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ.ಊರ್ಮಿಳಾ ಅವರನ್ನು ರಾಜ್ಯಪಾಲರ ಕೋಟಾದಿಂದ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಇತ್ತೀಚೆಗೆ ಶಿವಸೇನಾ ಶಿಫಾರಸು ಮಾಡಿತ್ತು ಎಂದು ಮೂಲಗಳು ತಿಳಿಸಿವೆ.

ಊರ್ಮಿಳಾ ಮಾತೋಂಡ್ಕರ್ ಅತ್ಯಂತ ಜನಪ್ರಿಯ ಬಾಲಿವುಡ್ ನಟಿ. ಅನೇಕ ಬ್ಲಾಕ್​ಬಸ್ಟರ್​ ಚಿತ್ರಗಳಲ್ಲಿ ನಟಿಸುವ ಮೂಲಕ 90ರ ದಶಕದಲ್ಲೇ ಸಿನಿಮಾ ಅಂಗಳದಲ್ಲಿ ಮಿಂಚಿದ್ದರು. ಊರ್ಮಿಳಾ ಬಾಲ ಕಲಾವಿದೆಯಾಗಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಇವರು ನಟಿಸಿದ ರಂಗೀಲಾ ಎಂಬ ರೊಮ್ಯಾಂಟಿಕ್ ಡ್ರಾಮ ಸಂಚಲನ ಸೃಷ್ಟಿಸಿತ್ತು.

ಈ ಬಗ್ಗೆ ಮಾಧ್ಯಮಗಳಿಗೆ ನವೆಂಬರ್ 30ರಂದು ಪ್ರತಿಕ್ರಿಯೆ ನೀಡಿದ್ದ ಶಿವ ಸೇನಾ ಪಕ್ಷದ ಮುಖಂಡ ಸಂಜಯ್ ರಾವತ್, ಊರ್ಮಿಳಾ ಈಗ ಶಿವಸೈನಿಕ್ ಆಗಿದ್ದಾರೆ. ಮಂಗಳವಾರ ಅವರು ಅಧಿಕೃತವಾಗಿ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ. ನಮ್ಮ ಮಹಿಳಾ ನಾಯಕತ್ವ ಇದರಿಂದ ಇನ್ನಷ್ಟು ಶಕ್ತಿಯುತವಾಯ್ತು ಎಂದಿದ್ದರು.

English summary
Bollywood actor Urmila Matondkar on Tuesday officially joined Shiv Sena as she reenters mainstream politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X