ಕೊರೊನಾ ಕರ್ತವ್ಯದಲ್ಲಿ ಸಿನಿಮಾ ನಟಿ: 3 ತಿಂಗಳಿನಿಂದ ಉಚಿತ ಸೇವೆ

ಮುಂಬೈ, ಜುಲೈ 11: ಕೊರೊನಾ ವೈರಸ್ ಹೋರಾಟದಲ್ಲಿ ದೇಶಾದ್ಯಂತ ವೈದ್ಯರು, ನರ್ಸ್‌ಗಳು ಹಾಗೂ ಆರೋಗ್ಯ ಸಿಬ್ಬಂದಿಗಳು ಮಹತ್ವದ ಕೆಲಸ ಮಾಡುತ್ತಿದ್ದಾರೆ. ಇಂತಹ ಹೋರಾಟಗಾರರಿಗೆ ಬಾಲಿವುಡ್ ಸಿನಿಮಾ ನಟಿಯೂ ಸಾಥ್ ನೀಡಿದ್ದಾರೆ.

ಶಾರೂಖ್ ಖಾನ್ ಚಿತ್ರದಲ್ಲಿ ನಟಿಸಿದ್ದ ಶಿಖಾ ಮಲ್ಹೋತ್ರಾ ಮುಂಬೈನ ಬಿಎಂಎಸ್ ಆಸ್ಪತ್ರೆಯಲ್ಲಿ ರೋಗಿಯ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟಿಯ ಈ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಶಿಖಾ ಮಲ್ಹೋತ್ರಾ ನರ್ಸಿಂಗ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಸಿನಿಮಾ ಮೇಲಿನ ಆಸಕ್ತಿಯಿಂದ ಇಂಡಸ್ಟ್ರಿ ಪ್ರವೇಶ ಮಾಡಿದ್ದರು. ಆದರೆ, ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ವೃತ್ತಿಪರತೆ ಮೆರೆದ ನಟಿ ಮತ್ತೆ ಆಸ್ಪತ್ರೆಗೆ ಸೇರಿ ಕೊವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಕೊವಿಡ್ ಕರ್ತವ್ಯ ನಿರ್ವಹಿಸುತ್ತಿರುವ ನಟಿ ಶಿಖಾ ಮಲ್ಹೋತ್ರಾ ಉಚಿತ ಸೇವೆ ಕೊಡುತ್ತಿದ್ದಾರೆ. ಈ ಕುರಿತು ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ನಟಿ ''ದೇಶಕ್ಕೆ ಅಗತ್ಯವಿರುವ ವೇಳೆ ನನ್ನ ಕೊಡುಗೆ ಇದು'' ಎಂದಿದ್ದಾರೆ.

Actress Shikha Malhotra Working As Patient Counsellor At Mumbais Bmc Hospital Amid Covid19

ನರ್ಸಿಂಗ್ ಪದವಿ ಪಡೆದಿರುವ ಶಿಖಾ ಮಲ್ಹೋತ್ರಾ ಸಿನಿಮಾ ನಟಿ ಹಾಗೂ ನೃತ್ಯಗಾರ್ತಿ. 'ಕಾಂಜ್ಲಿ ಲೈಫ್ ಇನ್ ಎ ಸ್ಲಫ್' ಚಿತ್ರದ ಮೂಲಕ ಹಿಮದಿ ಚಿತ್ರರಂಗ ಪ್ರವೇಶಿಸಿದರು. ಶಾರೂಖ್ ಅಭಿನಯದ ಚಿತ್ರವೊಂದರಲ್ಲಿ ಟಿವಿ ಪತ್ರಕರ್ತೆ ಪಾತ್ರ ನಿರ್ವಹಿಸಿದ್ದಾರೆ. ತಾಪ್ಸಿ ಪೆನ್ನು ನಟಿಸಿರುವ ಚಿತ್ರದಲ್ಲೂ ಸಣ್ಣದೊಂದು ಮಾತ್ರ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+